ಗುರುಮಠಕಲ್: ಜೂನ್.14 ರಂದು ಮಹಾರಾಣಾ ಪ್ರತಾಪಸಿಂಗ್ ಜಯಂತಿಯನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕೆಂದು ಡಾ.ಸಂಜೀವಸಿಂಗ್ ರಾಯಚೂರಕರ ತಿಳಿಸಿದರು.
ಗುರುಮಠಕಲ್ ಪಟ್ಟಣದ ಗಡಿಮೊಹಲ್ಲಾದಲ್ಲಿ ಜೂನ್.14 ರಂದು ಯಾದಗಿರಿ ನಗರದಲ್ಲಿ ನಡೆಯಲ್ಲಿರುವ ಜಿಲ್ಲಾ ಮಟ್ಟದ ಮಹಾರಾಣಾ ಪ್ರತಾಪಸಿಂಗ್ ಜಯಂತಿ ಆಚರಣೆ ಸಂಬಂಧ ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಾದಗಿರಿ ಜಿಲ್ಲಾ ರಜಪೂತ ಸಮಾಜದ ವತಿಯಿಂದ ಯಾದಗಿರಿ ನಗರದಲ್ಲಿ ಅಂದು ನಡೆಯಲಿರುವ ಮಹಾರಾಣಾ ಪ್ರತಾಪ್ ಸಿಂಗ್ ಜಯಂತಿ ಮಹೋತ್ಸವದಲ್ಲಿ ಸಮಾಜದ ಎಲ್ಲ ಬಂಧು-ಬಾಂಧವರು ಸಕ್ರಿಯವಾಗಿ ಭಾಗವಹಿಸಬೇಕೆಂದು ಕರೆ ನೀಡಿದರು.
ಅಂದು ನಡೆಯಲಿರುವ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಸಮಾಜದ ಸಾಧಕರು ಹಾಗೂ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಗುವುದು. ಹಾಗೂ ಸಮಾಜದ ಸಾಧಕರನ್ನು ಮತ್ತು ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ರಜಪೂತ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ನೃತ್ಯಗಳು ಹಾಗೂ ದೇಶಭಕ್ತಿ ಗೀತೆಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಇದೇ ಸಂದರ್ಭದಲ್ಲಿ ತಿರ್ಮಾನಿಸಲಾಯಿತು.
ಈ ಸಭೆಯಲ್ಲಿ ಗುರುಮಠಕಲ್ ತಾಲೂಕು ರಜಪೂತ ಸಮಾಜದ ಅಧ್ಯಕ್ಷರಾದ ಉದಯ್ ಸಿಂಗ್, ಜಿಲ್ಲಾ ಕಾರ್ಯದರ್ಶಿಗಳಾದ ಸತ್ಯನಾರಾಯಣ ಪ್ರಸಾದ ತಿವಾರಿ, ಸತೀಶ ಪ್ರಸಾದ ತಿವಾರಿ, ಹರಿ ಪ್ರಸಾದ್ ಹಜಾರೆ, ವಿಕ್ರಮಸಿಂಗ್ ಠಾಕೂರ್, ಆನಂದ ಹಜಾರೆ, ಸುನೀಲ ಶುಕ್ಲಾ, ಸಂದೀಪ್ ಹಜಾರೆ, ಸ್ವರ್ಣ ಸಿಂಗ್, ರಾಹುಲ್ ಹಜಾರೆ, ಮೋಹನ್ ರಜಪೂತ, ದೀಪಕ್ ಹಜಾರೆ, ರವಿಕಿರಣ್ ಹಜಾರೆ, ಭೈರವ್ ಸಿಂಗ್ ರಾಯಚೂರುಕರ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.
