ಬೀದರ :  ಬೀದರ ಜಿಲ್ಲೆಯನ್ನು ಹೆಚ್.ಐ.ವಿ ಮುಕ್ತವನ್ನಾಗಿಸೋಣವೆಂದು ಹಿರಿಯ ಸಿವಿಲ್ ನ್ಯಾಯಾಧೀಶಕರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಕಾಶ ಅರ್ಜುನ ಬನಸೋಡೆ ಕರೆ ನೀಡಿದರು.

ಸೋಮವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿಶ್ವ ಏಡ್ಸ್ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆರ್ಟಿಕಲ್ 21(ಎ) ಪ್ರಕಾರ ಆರೋಗ್ಯದ ಹಕ್ಕೂ ಮತ್ತು ಬದುಕುವ ಹಕ್ಕು ಇದೆ. ಆದ್ದರಿಂದ ಹೆಚ್.ಐ.ವಿ ಬಾಧಿತರಿಗೆ ಉತ್ತಮ ಆರೋಗ್ಯ ಸೇವೆಯನ್ನು ವೈದ್ಯಾಧಿಕಾರಿಗಳು, ಸಿಬ್ಬಂದಿಯವರು ನೀಡಿರಿ ಹಾಗೂ ಹೆಚ್.ಐ.ವಿ ಬಾಧಿತರಿಗೆ ಆತ್ಮ ಸ್ಥೆöÊರ್ಯವನ್ನು ನೀಡುವ ಅವಶ್ಯಕತೆ ಇದೆ. ಗ್ರಾಮೀಣ ಪ್ರದೇಶದ ಜನರಲ್ಲಿ ಹೆಚ್.ಐ.ವಿ/ಏಡ್ಸ್ ಅರಿವು ಮೂಡಿಸಬೇಕೆಂದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅನೀಲಕುಮಾರ ಚಿಂತಾಮಣಿ ಮಾತನಾಡಿ, 2025 ರ ಘೋಷವಾಕ್ಯವಾದ “ಹೆಚ್.ಐ.ವಿ/ಏಡ್ಸ್ ಹರಡುವಿಕೆಯನ್ನು ನಿಯಂತ್ರಿಸಲು ಇರುವ ಅಡೆತಡೆಗಳನ್ನು ಕೊನೆಗಾಣಿಸೋಣ” ಕುರಿತು ತಿಳಿಸಿದರು. ಹಾಗೂ ಹೆಚ್.ಐ.ವಿ/ಏಡ್ಸ್ ಅಂಕಿ-ಅAಶ, ಸೇವಾ ಸೌಲಭ್ಯಗಳ ಬಗ್ಗೆ ಹಾಗೂ ಜಿಲ್ಲೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಹೆಚ್.ಐ.ವಿ/ಏಡ್ಸ್ ಜಾಗೃತಿ ಕಾರ್ಯಕ್ರಮಗಳ ಕುರಿತು ಹೇಳಿದರು.

ಬ್ರಿಮ್ಸ್ ಜಿಲ್ಲಾ ಶಸ್ತç ಚಿಕಿತ್ಸಕರಾದ ಡಾ. ಎಂ.ಡಿ. ಅಹಮದ್‌ಉದ್ದಿನ್ ಮಾತನಾಡಿ, ಹೆಚ್.ಐ.ವಿ ಸೋಂಕಿತರು ಸರಿಯಾಗಿ ಚಿಕಿತ್ಸೆಯನ್ನು ಪಡೆಯದೇ ಇದ್ದಲಿ, ರೋಗ ನಿರೋಧಕ ಶಕ್ತಿಯು ಕಡಿಮೆಯಾಗಿ ಬೇರೆ ಬೇರೆ ರೋಗಗಳಿಗೆ ತುತ್ತಾಗಿ ಮರಣ ಹೊಂದಿರುವ ಸಾಧ್ಯತೆ ಇರುವುದರಿಂದ ಚಿಕಿತ್ಸೆಯನ್ನು ಸರಿಯಾಗಿ ಪಡೆಯುವಂತೆ ಹೇಳಿದರು.

ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿರಣ ಪಾಟೀಲ ಮಾತನಾಡಿ, ಹೆಚ್.ಐ.ವಿ/ಏಡ್ಸ್ ಕಾರ್ಯಕ್ರಮದ ಇತಿಹಾಸ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಿಬ್ಬಂದಿಯವರ ಅರಿವು ಮೂಡಿಸುತ್ತಿರುವುದರಿಂದ ಹೆಚ್.ಐ.ವಿ/ಏಡ್ಸ್ ಸೋಂಕು ಕಡಿಮೆಯಾಗುತ್ತಿದೆಂದು ಹೇಳಿದರು.

ಕ್ಷಯರೋಗ ನೋಡಲ್ ಅಧಿಕಾರಿ ಡಾ. ಮಹೇಶ ತೋಂಡಾರೆ ಅವರು ತಮ್ಮ ಅತಿಥಿ ಉಪನ್ಯಾಸದಲ್ಲಿ ಹೆಚ್.ಐ.ವಿ/ಏಡ್ಸ್ ಕಾರ್ಯಕ್ರಮ ದೇಶದಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮ ವಿವಿಧ ಹಂತಗಳಲ್ಲಿ ನಡೆಯುತ್ತಿದ್ದು, ಯುವಜನತೆಯು ಜಾಗೃತಿಯನ್ನು ವಹಿಸಿ, ತಮ್ಮ ಆರೋಗ್ಯವನ್ನು ಕಾಪಾಡಿಕೊಂಡರೆ ಮಾತ್ರ ಹೆಚ್.ಐ.ವಿ/ಏಡ್ಸನ್ನು ತಡೆಗಟ್ಟಬಹುದೆಂದು ಹೇಳಿದರು.

ಕಾರ್ಯಕ್ರಮಕ್ಕೂ ಮುಂಚಿತವಾಗಿ ವಿಶ್ವ ಏಡ್ಸ್ ದಿನದ ಅಂಗವಾಗಿ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದಲ್ಲಿ ಜಾಥಾ ಕಾರ್ಯಕ್ರಮಕ್ಕೆ ಬ್ರಿಮ್ಸ್ನ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಎಂ.ಡಿ.ಅಹಮದ್‌ಉದ್ದಿನ್ ಅವರು ರಿಬ್ಬನ್ ಕತ್ತರಿಸುವ ಮೂಲಕ ಜಾಥಾ ಪಥಚಲನಕ್ಕೆ ಚಾಲನೆ ನೀಡಿದರು.

ಹೆಚ್.ಐ.ವಿ ಸೋಂಕಿತ ಮಹಿಳೆಯರಿಗೆ ಹೆಚ್ಚು ಹೆರಿಗೆ ಸೇವೆ ಒದಗಿಸಿರುವುದಕ್ಕೆ ಬ್ರಿಮ್ಸ್ ಜಿಲ್ಲಾ ಆಸ್ಪತ್ರೆಯ ಒ.ಬಿ.ಜಿ ಎಚ್.ಒ.ಡಿಯವರಾದ ಡಾ. ಉಮಾ ದೇಶಮುಖರವರಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿಕ ಕಾಣಿಕೆಯೊಂದಿಗೆ ಸನ್ಮಾನಿಸಲಾಯಿತು.  ಹಾಗೂ ಹೆಚ್.ಐ.ವಿ ಸೋಂಕಿತರಿಗೆ ಸಂತಾನ ಹರಣ ಚಿಕಿತ್ಸೆ ನೀಡಿರುವುದಕ್ಕೆ ಎಫ.ಪಿ.ಎ.ಐ ಬೀದರನ ವೈದ್ಯಾಧಿಕಾರಿ ಡಾ. ರಾಜಶೇಖರ ಲಕಶೆಟ್ಟಿ, ಎಫ.ಪಿ.ಎ.ಐ ಬೀದರನ ವ್ಯವಸ್ಥಾಪಕ ಶ್ರೀನಿವಾಸ ಬಿರಾದರರವರಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿಕ ಕಾಣಿಕೆಯೊಂದಿಗೆ ಸನ್ಮಾನಿಸಲಾಯಿತು.

ಅತ್ಯುತ್ತಮ ಎಫ-ಐಸಿಟಿಸಿ ಕೇಂದ್ರದ ವೈದ್ಯಾಧಿಕಾರಿ ಡಾ.ಫೈಝಲ್, ಅತ್ಯುತ್ತಮ ರೆಡ್ ರಿಬ್ಬನ್ ಕಾಲೇಜ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜ ಭಾಲ್ಕಿಯ ಪ್ರಾಂಶುಪಾಲರಾದ ಡಾ. ಹೇಮಾವತಿ ಪಾಟೀಲ, ಮತ್ತು ಹೆಚ್.ಐ.ವಿ ಕಾರ್ಯಕ್ರಮದಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿರುವ ಟಿಐ ಎನ್‌ಜಿಒದ ಪ್ರತಿನಿಧಿಗಳಾದ ಪ್ರವರ್ಧ ಎನ್‌ಜಿಒ ಸಿ.ಇ.ಒರಾದ ರಾಮಚಂದ್ರ ಶೇರಿಕರ, ಲಾಲ್ ಬಹದ್ದೂರ ಶಿಕ್ಷಣ ಸಂಸ್ಥೆಯ ಸಿ.ಇ.ಒರಾದ ವಿಶ್ವನಾಥ ಸ್ವಾಮಿ, ಶರಣ ತತ್ವ ಎನ್‌ಜಿಒದ ಯೋಜನಾ ವ್ಯವಸ್ಥಾಪಕರಾದ ಬಸವರಾಜರವರಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿಕ ಕಾಣಿಕೆಯೊಂದಿಗೆ ಸನ್ಮಾನಿಸಲಾಯಿತ್ತು.

ಈ ಕಾರ್ಯಕ್ರಮದಲ್ಲಿ ಡಾ. ಶಂಕ್ರೇಪ್ಪಾ ಬೊಮ್ಮಾ, ಬೀದರ ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾ. ಸಂಗಾರೆಡ್ಡಿ, ಐಸಿಟಿಸಿ, ಎಆರ್‌ಟಿ, ಡಿಎಸ್‌ಆರ್‌ಸಿ, ಬ್ಲಡ್ ಬ್ಯಾಂಕ, ಶರಣ ತತ್ವ, ಪ್ರವರ್ಧ, ಎಲ್‌ಬಿಇಎಸ್, ಬೆಳದಿಂಗಳೂ ನೆಟವರ್ಕ, ಜಿಲ್ಲಾ ಕ್ಷಯರೋಗ ಸಿಬ್ಬಂದಿಯವರು ಹಾಗೂ ಡ್ಯಾಪ್ಕು ಕಾರ್ಯಾಲಯದ ಸಿಬ್ಬಂದಿಯವರು ಸೇರಿದಮತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಬ್ರಿಮ್ಸ್ ಆಸ್ಪತ್ರೆಯ ಐಸಿಟಿಸಿ(ಎ) ಕೇಂದ್ರದ ಪ್ರಯೋಗ ಶಾಲಾ ತಂತ್ರಜ್ಞಾರಾದ ಅರವಿಂದ ಕುಲಕರ್ಣಿ ಹಾಗೂ ವಂದನಾರ್ಪಣೆಯನ್ನು ಜಿಲ್ಲಾ ಮೇಲ್ವಿಚಾರಕರಾದ ಸೂರ್ಯಕಾಂತರವರು ನೇರವೇರಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!