ತುರ್ತು ಪರಿಸ್ಥಿತಿ ನಿಭಾಯಿಸಲು ಸಹಕಾರ | 40 ಕಿ.ಮೀ ದೂರದಿಂದ ಬರುವ ಅನಿವಾರ್ಯ | ಗುರುಮಠಕಲ್ ಗೆ ಅಗ್ನಿ ಶಾಮಕ ಠಾಣೆ ಮಂಜೂರು

ಗುರುಮಠಕಲ್: ತಾಲೂಕಿನ  ಬಹುದಿನಗಳ ಬೇಡಿಕೆಯಾಗಿದ್ದ ಅಗ್ನಿ ಶಾಮಕ ದಳದ ಕಚೇರಿ ಆರಂಭಿಸಲು ಕಾರಣೀಭೂತರಾದ ಗುರುಮಠಕಲ್ ಶಾಸಕ ಶರಣಗೌಡರಿಗೆ ಜಯ ಕರ್ನಾಟಕ ಸಂಘಟನೆ ಗಜಗಾತ್ರದ ಮಾಲೆ, ಶಾಲು ಸನ್ಮಾನಿಸಿ ಅಭಿನಂದಿಸಲಾಯಿತು. ಪಟ್ಟಣದಲ್ಲಿ ಜರುಗಿದ 113 ಕೋಟಿ ರೂ. ಗಳ ಮೊತ್ತದ ಸುಮಾರು 42 ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ಭವ್ಯ ಸಮಾರಂಭದಲ್ಲಿ ಜಯ ಕರ್ನಾಟಕ ತಾಲ್ಲೂಕು ಅಧ್ಯಕ್ಷ ಸನ್ಮಾನಿಸಿ ಧನ್ಯವಾದ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಮೇಧಾ, ಎಸ್ ಪಿ ಮಹೇಶಗೌಡ, ಉದಯಕುಮಾರ್ ಕೊಂಕಲ, ನಾಗೇಶ್ ಮಾಡೇಪಲ್ಲಿ, ಅಯಾಝ್ ಅಲಿ, ಶರಣಪ್ಪ, ಅಂಜಪ್ಪ ಸೇರಿದಂತೆ ಇನ್ನಿತರರು ಇದ್ದರು.

ಈ ಸಂದರ್ಭದಲ್ಲಿ ಹೇಳಿಕೆ ನೀಡಿದ ನಾಗೇಶ ಅವರು, ತಾಲೂಕ ಕೇಂದ್ರವಾಗಿದ್ದು ಇಲ್ಲಿ ಬೇಸಿಗೆ ಬಂತೆದರೆ ಸಾಕು ಹಲವಾರು ಅಗ್ನಿ ಅವಘಡ ನಡೆಯುತ್ತಿದ್ದವು. ಎಲ್ಲಿಯಾದರೂ ಅಗ್ನಿ ಅನಾಹುತ ಸಂಭವಿಸಿದರೆ ಯಾದಗಿರಿ ಯಿಂದ 40 ಕಿಮಿ ಗುರುಮಠಕಲ್ ಗೆ ಅಗ್ನಿ ಶಾಮಕ ನಂದಿಸುವ ವಾಹನ ಬರುವಷ್ಟರಲ್ಲಿ ಇಲ್ಲಿನ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿ ಹೋಗುತ್ತಿತ್ತು.

ಅದನ್ನು ಗಂಭೀರವಾಗಿ ಪರಿಗಣಿಸಿ ಶಾಸಕರು ಗುರುಮಠಕಲ್ ತಾಲೂಕು ಕೇಂದ್ರದಲ್ಲಿ ನೂತನ ಅಗ್ನಿ ಶಾಮಕ ದಳದ ಕಚೇರಿಯನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದು ಇಡೀ ಕ್ಷೇತ್ರದ ಜನರ ಕನಸು ನನಸು ಮಾಡಿದ್ದು ಹರ್ಷ ತಂದಿದೆ ಎಂದು ತಿಳಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!