ಗುರುಮಠಕಲ್ ನಲ್ಲಿ ಹೆಚ್ಚಿನ ಅಭಿಮಾನಿಗಳು ಹೊಂದಿರುವ ಮುದ್ನಾಳ ಕುಟುಂಬ | ಇಲ್ಲಿಂದ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದ್ದ ಮಾಜಿ ಶಾಸಕ ದಿ. ವೆಂಕಟರೆಡ್ಡಿ ಗೌಡ


ಗುರುಮಠಕಲ್‌: ಯಾದಗಿರಿ ಮಾಜಿ ಶಾಸಕ ದಿ.ವೆಂಕಟರೆಡ್ಡಿಗೌಡ ಮುದ್ನಾಳ ಪ್ರಥಮ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಅಭಿಮಾನಿಗಳನ್ನು ಯುವ ಮುಖಂಡ ಮಹೇಶರೆಡ್ಡಿ ಮುನ್ನಾಳ ಸಭೆ ನಡೆಸಿ, ಆಹ್ವಾನಿಸಿದರು.

ಇಲ್ಲಿನ ಅತಿಥಿ ಗೃಹದಲ್ಲಿ ಅಭಿಮಾನಿ, ಕಾರ್ಯಕರ್ತರ ಸಭೆ ನಡೆಯಿತು. ಸೆ.17ರಂದು ಪ್ರಥಮ ಪುಣ್ಯ ಸ್ಮರಣೆ ಆಚರಿಸಲಾಗುತ್ತಿದ್ದು, ಎಲ್ಲಾ ಅಭಿಮಾನಿ ಕಾರ್ಯಕರ್ತರು ಭಾಗವಹಿಸಲು ಕೋರಿದರು.

ಈ ವೇಳೆ ಮುಖಂಡ ಖಂಡಪ್ಪ ದಾಸನ್, ನಗರಸಭೆ ಮಾಜಿ ಅಧ್ಯಕ್ಷ ವಿಲಾಸ್ ಪಾಟೀಲ್‌, ಶರಣಗೌಡ ಬಾಡಿಯಾಳ, ರುದ್ರಗೌಡ ಪಾಟೀಲ್, ನರಸಿಂಹಲು ನೀರೆಟಿ, ಮಲ್ಲೇಶಪ್ಪ ಬೇಲಿ, ಚಂದುಲಾಲ್ ಚೌಧರಿ, ವೆಂಕಟಪ್ಪ ಅವಂಗಾಪೂರ, ವಿನಾಯಕ ಜನಾರ್ಧನ ಇತರರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!