ಗುರುಮಠಕಲ್ ತಾಲೂಕಿನ ಗ್ರಾಮಗಳಲ್ಲಿ ಶಾಲಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ | ಚಿನ್ನಾಕಾರದಲ್ಲಿ ಜಿ.ಪಂ. ಲೆಕ್ಕಾಧಿಕಾರಿ ವೆಂಕಟೇಶ ಚಟ್ನಳ್ಳಿ ರಿಂದ ಶಂಕುಸ್ಥಾಪನೆ
ಗುರುಮಠಕಲ್ : ಶಾಲಾ ಕಟ್ಟಡ, ಕಾಂಪೌಂಡ್, ಅಂಗನವಾಡಿ ಕಟ್ಟಡ, ಶೌಚಗೃಹ ಸೇರಿದಂತೆ ಇತರೆ ಮೂಲಸೌಕರ್ಯ ಒದಗಿಸಲು “ನಮ್ಮ ಶಾಲೆ ನಮ್ಮ ಅಭಿಯಾನ” ನಡೆಸಲಾಗುತ್ತಿದೆ ಎಂದು ಜಿ.ಪಂ. ಲೆಕ್ಕಾಧಿಕಾರಿ ವೆಂಕಟೇಶ ಚಟ್ನಳ್ಳಿ ಹೇಳಿದರು.
ತಾಲ್ಲೂಕಿನ ಚಿನ್ನಕಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಚಿನ್ನಾಕರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಂಪೌಂಡ್ ನಿರ್ಮಾಣ ಹಾಗೂ ಉರ್ದು ಶಾಲೆಯಲ್ಲಿ ಶೌಚಗೃಹ, ಕಾಂಪೌಂಡ್ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಯೋಜನೆಯಡಿ ಗುರುಮಠಕಲ್ ತಾಲೂಕಿನ ಚಿನ್ನಾಕಾರ, ಕೊಂಕಲ್, ಎಲೇರಿ ಅಜಲಾಪುರ್ ಗ್ರಾಮ ಪಂಚಾಯಿತಿ ಸೇರಿದಂತೆ ಇತರೆ ಗ್ರಾಮದ ಶಾಲಾ ಕಟ್ಟಡ, ಕಾಂಪೌಂಡ್ ಅಡುಗೆ ಕೋಣೆ, ಶಾಲಾ ಶೌಚಾಲಯ, ಅಂಗನವಾಡಿ ಶೌಚಾಲಯಗಳ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಇದೇ ವೇಳೆ ಗ್ರಾಮಸ್ಥರಿಗೆ ನರೇಗಾ ಕಾರ್ಮಿಕರಿಗೆ ಗ್ರಾಮಸ್ಥರಿಗೆ ಕೇಂದ್ರ ಸರ್ಕಾರದ ವಿಮೆಗಳಾದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ವಿಮೆಗಳು ವಿತರಿಸಿ, ಇನ್ಸುರೇನ್ಸ್ ಫಲನುಭವಿಗಳಾಗಲು ಕರೆ ನೀಡಿದರು.
ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಅಂಬರೀಶ್ ಪಾಟೀಲ್, ಸಹಾಯಕ ನಿರ್ದೇಶಕ ರಾಮಚಂದ್ರ ಬಸೂದೆ, ಚಿನ್ನಾಕಾರ ಗ್ರಾಮ ಪಂಚಾಯಿತಿಯ ಪಿಡಿಓ ಸೈಯದ್ ಅಲಿ, ಟಿಸಿ ಮುಜಾಮಿಲ್, ಟಿಐಇಸಿ ರಾಘವೇಂದ್ರ, ತಾಂತ್ರಿಕ ಸಹಾಯಕ ವಿಜಯ ಆಲೆಮನೆ, ಬಿ ಎಫ್ ಟಿ, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.
