ಗುರುಮಠಕಲ್ ತಾಲೂಕಿನ ಮಿನಾಸಪೂರನಲ್ಲಿ  ಸಾಮಾಜಿಕ ಭದ್ರತಾ ಯೋಜನೆಗಳ ಪರಿಪೂರ್ಣತೆ ಅಭಿಯಾನದಡಿ ಜನ ಸುರಕ್ಷಾ ಅಭಿಯಾನ | ಗ್ರಾಂ.ಪಂ. ಮಟ್ಟದ ವಿಶೇಷ ಅಭಿಯಾನ  ಸಸಿಗೆ ನೀರೆರೆದು ಶಾಸಕ ಕಂದಕೂರ ಉದ್ಘಾಟನೆ | ಗ್ರಾ ಪಂ ವ್ಯಾಪ್ತಿಯ ಸಾವಿರ ಜನಕ್ಕೆ ವಿಮೆ ಗುರಿ


ಸರ್ಕಾರಿ ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಸಾಲ ಸೌಲಭ್ಯ ಯುವಕರು, ಮಹಿಳೆಯರಿಗೆ ನೇರವಾಗಿ ಸಾಲ ಸಿಗುತ್ತಿದೆ. ಪಶು ಉಪ ಕೇಂದ್ರ‍್ರ, ಅಂಗನವಾಡಿ ಕಟ್ಟಡ ರಿಪೇರಿ, ಜನರ ಕೆಲಸಗಳಿಗೆ ಸ್ಪಂದಿಸಿ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದರು. ಜನರು ಪ್ರೀತಿ ತೋರಿದ್ದೀರಿ, ನಿಮ್ಮ ವಿಶ್ವಾಸ ಉಳಿಸಿಕೊಂಡು ಅಭಿವೃದ್ಧಿ ಮಾಡುವೆ- ಶರಣಗೌಡ ಕಂದಕೂರ, ಶಾಸಕರು.

ಗುರುಮಠಕಲ್ : ಬಡ ಜನರಿಗೆ ಅನುಕೂಲವಾಗಲು ವಿಮಾ ಯೋಜನೆಗಳು ಸಹಕಾರಿಯಾಗಿದೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.

ತಾಲೂಕಿನ ಮಿನಾಸಪೂರನಲ್ಲಿ ಗ್ರಾಮ ಪಂಚಾಯಿತಿ, ಸಾಮಾಜಿಕ ಭದ್ರತಾ ಯೋಜನೆಗಳ ಪರಿಪೂರ್ಣತೆ ಅಭಿಯಾನದಡಿ ಜನ ಸುರಕ್ಷಾ ಅಭಿಯಾನ ಗ್ರಾಂ.ಪಂ. ಮಟ್ಟದ ವಿಶೇಷ ಅಭೀಯಾನ ಸಸಿಗೆ ನೀರೆರೆದು ಉದ್ಘಾಟಿಸಿ ಅವರು ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನಪರ ಕಾಳಜಿಯ ಕಾರ್ಯ ಶ್ಲಾಘನೀಯ ಎಂದರು. ನಮ್ಮ ಭಾಗದ ಜನರ ಗುಳೆ ತಪ್ಪಿಸಲು ಉದ್ಯೋಗ ಖಾತರಿ ಯೋಜನೆ ಸಹಕಾರಿಯಾಗಿದೆ ಎಂದರು.

ಇದೇ ವೇಳೆ ಸಾಂಕೇತಿಕವಾಗಿ 5 ಜನರಿಗೆ ಶಾಸಕ ಶರಣಗೌಡ ಕಂದಕೂರ ಅರ್ಜಿಗಳನ್ನು ನೀಡಿದರು. 2 ಲಕ್ಷ ವಿಮೆ ಮೊತ್ತ ಲಾಭ ಪಡೆಯಬಹುದು. ಇದರ ಬಗ್ಗೆ ಬ್ಯಾಂಕ್ ಅಧಿಕಾರಿ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ನಮ್ಮ ಭಾಗದ ಬಡ ಜನರು ಲಾಭ ಪಡೆಯಲು ಕರೆ ನೀಡಿದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಭೀಮರಾವ ಪಾಂಚಾಳ ಮಾತನಾಡಿ, 18 ರಿಂದ 50 ಸುರಕ್ಷಾ ವಿಮಾ ಯೋಜನೆ ೪೩೬ರೂ, 18 ರಿಂದ 75 ಪ್ರಧಾನ ಮಂತ್ರಿ ಜೀವನಜ್ಯೋತಿ 20 ರೂ. ಪಾವತಿಸಿ ಎಲ್ಲರೂ ಜೀವ ವಿಮೆಯ ಲಾಭ ಪಡೆಯಿರಿ.

ತಾ.ಪಂ. ಅಧಿಕಾರಿ ಅಂಬ್ರೇಷ ಪಾಟೀಲ್ ಮಾತನಾಡಿ, ಇಡೀ ತಾಲೂಕು ಜನರಿಗೆ ವಿಮೆಯ ಲಾಭ ಸಿಗಬೇಕು ಎನ್ನುವ ಕಾಳಜಿಯಿಂದ ಎಲ್ಲಾ ಬ್ಯಾಂಕ್ ಶಾಖೆಗಳ ಸಿಬ್ಬಂದಿಗಳು ಆಗಮಿಸಿದ್ದಾರೆ ಎಂದರು.

ಈ ವೇಳೆ ಗ್ರಾ.ಪಂ. ಅಧ್ಯಕ್ಷೆ ಅರುಣಾ ಎಂ.ರೆಡ್ಡಿ, ಭೀಮರಾವ ಪಾಂಚಾಳ ಲೀಡ್ ಬ್ಯಾಂಕ್ ವ್ಯವಸ್ಥಾಪಕ, ತಾ.ಪಂ. ಅಧಿಕಾರಿ ಅಂಬ್ರೇಷ ಪಾಟೀಲ್, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಷ್ ಕಟಕಟಿ, ಶರಣು ಆವಂಟಿ, ಭೀಮಸೇನ, ಅಜಯರೆಡ್ಡಿ, ರಾಜೇಶ್, ಪಿಡಿಓ ಸರೋಜಾ, ಮಲ್ಲಿಕಾರ್ಜುನ ಅರುಣಿ, ನಾರಾಯಣ, ಅಶೋಕ, ತಿಮ್ಮಪ್ಪ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!