ಡಾ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಕಾಶದೆತ್ತರಕ್ಕೆ ಬೆಳೆಸಿದ ಕ್ಷೇತ್ರ | ಜೀವ ಇರೋತನ ಗುರುಮಠಕಲ್ ಜನರ ಸೇವೆ ಮಾಡುವೆ | ಕಾಂಗ್ರೆಸ್ ಕಚೇರಿಯಲ್ಲಿ ಚಿಂಚನಸೂರ ಅಭಿಮತ

ಗುರುಮಠಕಲ್: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಗುರುಮಠಕಲ್ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದ್ದಾರೆ ಎಂದು ಮಾಜಿ ಸಚಿವ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಬಾಬುರಾವ್ ಚಿಂಚನಸೂರ ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಜನಪರ ಯೋಜನೆಗಳು ದೇಶಕ್ಕೆ ಮಾದರಿಯಾಗಿದೆ. ಪಂಚ ಗ್ಯಾರಂಟಿ ಯೋಜನೆ ಬಡವರ ಜೀವನ ಮಟ್ಟ ಸುಧಾರಿಸಲು ಸಹಕಾರಿಯಾಗಿದೆ ಎಂದರು.

ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಪ್ರಭಾವಿ ನೇತಾರರಾಗಿದ್ದಾರೆ. ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ ಎಂದರು. 38 ಕೆರೆ ನೀರು ತುಂಬುವ ಕಾರ್ಯ, ಅಮೃತ ಯೋಜನೆ, ಪ್ರಜಾಸೌಧ 10 ಕೋಟಿ ಹಲವು ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ‌. ಇಂದಿರಾ ಕ್ಯಾಂಟೀನ್ ಗುರುಮಠಕಲ್ ಬಂದಿದೆ ಎಂದು ಹೇಳಿದರು.

ನಮ್ಮ ನಡೆ ಜನರ ಕಡೆ, ಪ್ರೋಟೋಕಾಲ್ ಪ್ರಕಾರ  ಯಾದಗಿರಿ ಜಿಲ್ಲೆಯ ಪ್ರತಿ ಕಾರ್ಯಕ್ರಮಕ್ಕೂ ಭಾಗಿಯಾಗಿ ಗ್ರಾಮೀಣ ಭಾಗಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸುವೆ. ಜನರ ಸೇವೆ ಸಲುವಾಗಿ ಹುಟ್ಟಿದ್ದೇನೆ, ಸಾವು ಇಲ್ಲಿನ ಜನರಿಗಾಗಿಯೇ, ಅಭಿವೃದ್ಧಿಯೇ ನನ್ನ ಗುರಿ ಎಂದರು.

ಪ್ರಜಾಸೌಧ ಅಡಿಗಲ್ಲು ಸಮಾರಂಭದ ಗದ್ದಲದ ಕುರಿತು ಪ್ರತಿಕ್ರಿಯಿಸಿ,  ಕುತಂತ್ರದಿಂದ ಗದ್ದಲ ಆಗಿದೆ ಎಲ್ಲರಿಗೂ ಗೊತ್ತಿರುವ ವಿಷಯ ಎಂದರು. ದರ್ಶನಾಪುರ ಒಳ್ಳೆಯ ಅಭಿವೃದ್ಧಿ ಕಾರ್ಯ ಮಾಡುತ್ತಿರುವ ಸಚಿವರು. ಯಾರು ಹೋದರು ಸ್ಪಂದಿಸುವ ವ್ಯಕ್ತಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಕಾಂಗ್ರೆಸ್ ಮುಖಂಡ ಶರಣಪ್ಪ ಮಾನೇಗಾರ ಮಾತನಾಡಿ, ಸರ್ಕಾರಿ ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರು ಭಾಗಿಯಾಗುತ್ತಿದ್ದರು, ಈ ಹಿಂದಿನಿಂದಲೂ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ರಾಜಕೀಯದಲ್ಲಿ ಅವರವರ ನಾಯಕರಿಗೆ ಜೈ ಕಾರ ಸಾಮಾನ್ಯವಾಗಿದೆ ಎಂದರು.

ಸರ್ಕಾರಿ ಕಾರ್ಯಕ್ರಮ ಕೆಡಿಸಬಾರದು, ಶಿಷ್ಟಾಚಾರದಂತೆ ಕಾರ್ಯಕ್ರಮ ನಡೆಯಬೇಕು. ಶಾಸಕರು, ಹಿರಿಯ ನಾಯಕ ಚಿಂಚನಸೂರ ಅವರ ಹಿರಿತನಕ್ಕೆ ಗೌರವ ಕೊಡುವುದು, ಸಹಕಾರ ಕೇಳಿದ್ದು ಸ್ವಾಗತಾರ್ಹ ಎಂದರು.

ಡಾ. ಖರ್ಗೆ ಅವರ ಹೆಸರು ಹೇಳಿದಾಗ ಅವಮಾನಕರ ರೀತಿ ಕಾರ್ಯಕರ್ತರು ನಡೆದುಕೊಂಡಿದ್ದು ಬೇಸರ ತಂದಿದೆ. ಸರ್ಕಾರ ಸಂಪುಟ ದರ್ಜೆ ಸ್ಥಾನಮಾನ ನೀಡಿದೆ. ಕೆಲ ಅಧಿಕಾರಿಗಳು ಸರಿ ವರ್ತನೆ ತೋರಿಲ್ಲ. ಪಕ್ಷಾತೀತವಾಗಿ ಕೆಲಸ ಮಾಡಬೇಕು. ಅವಸರದಲ್ಲಿ ಅಡಿಗಲ್ಲು ಮಾಡಲಾಗಿದೆ. ನಿಗಮ ಅಧ್ಯಕ್ಷರು ಬರಲು ಟ್ರಾಫಿಕ್ ಹಿನ್ನೆಲೆ ಸ್ವಲ್ಪತಡವಾಗಿದೆ. ಅಧಿಕಾರಿಗಳ ಲೋಪಕ್ಕೆ ಖಂಡನೆ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಪೂರ್ವ ನಿಯೋಜಿತ ಕಾರ್ಯಕ್ರಮ ಇರುವುದು ಭಾಗಿಯಾಗಿಲ್ಲ, ಮುಂದೆ ಭಾಗಿಯಾಗುತ್ತಾರೆ ಎಂದರು. ಈ ವೇಳೆ ಬ್ಲಾಕ್ ಅಧ್ಯಕ್ಷ ಕೃಷ್ಣ ಚಪೆಟ್ಲಾ‌ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!