ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ | ಗುರುಮಠಕಲ್ ನಲ್ಲಿ ಶಾಸಕ ಶರಣಗೌಡ ಕಂದಕೂರ ರಿಂದ ಕಿಟ್ ವಿತರಣೆ
ಗುರುಮಠಕಲ್: ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಗಣತಿದಾರರು ಮುಗ್ಧ ಜನರಿಗೆ ಸರಿಯಾಗಿ ತಿಳುವಳಿಕೆ ನೀಡಿ ಪೂರ್ಣಗೊಳಿಸಲು ಶಾಸಕ ಶರಣಗೌಡ ಕಂದಕೂರ ಹೇಳಿದರು.
ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಗಣತಿದಾರರಿಗೆ ಕಿಟ್ ವಿತರಿಸಿ ಅವರು ಮಾತನಾಡಿದರು. ಇದು ಸಂಪೂರ್ಣ ಮೊಬೈಲ್ ತಂತ್ರಜ್ಞಾನ ಆಧಾರಿತ ಸಮೀಕ್ಷೆಯಾಗಿದೆ.
ಗುರುಮಠಕಲ್ ತಾಲೂಕಿನಲ್ಲಿ 258 ಜನ ಗಣತಿದಾರರ ಆಯ್ಕೆಯಾಗಿದ್ದಾರೆ. 13 ಜನ ಮೇಲ್ವಿಚಾರಣೆಗೆ ನಿಯೋಜನೆಗೊಂಡಿದ್ದು, ಸರಾಸರಿ 100 ಕುಟುಂಗಳ ಹಂಚಿಕೆ ಮಾಡಲಾಗಿದೆ ಎಂದರು.
ಗಣತಿದಾರರ ಮೇಲೆ ಸಾಕಷ್ಟು ಜವಾಬ್ದಾರಿ ಇದೆ. ಒಂದು ಕುಟುಂಬಕ್ಕೆ ಎಷ್ಟು ಸಮಯ ಬೇಕಿದೆ ಎನ್ನುವುದು ಗಣತಿ ಆರಂಭವಾದ ಬಳಿಕ ಗೊತ್ತಾಗಲಿದೆ. ಸಮೀಕ್ಷೆ ಮಾಡಿ ಸರ್ಕಾರಕ್ಕೆ ಒಳ್ಳೆಯ ಹೆಸರು ತರಲು ಹೇಳಿದರು.
ಪ್ರಮಾಣಪತ್ರ ಗಳಿಗೆ ಈ ಸಮೀಕ್ಷೆಗೆ ಯಾವುದೇ ಸಂಬಂಧವಿಲ್ಲ. ಈಗ ರಾಜ್ಯದ್ದು, ಮುಂದೆ ಕೇಂದ್ರ ಸರ್ಕಾರವೂ ಗಣತಿ ಮಾಡಲಿದೆ ಎಂದರು. ತಹಶೀಲ್ದಾರ್ ಶಾಂತಗೌಡ ಬಿರಾದಾರ, ಉಪ ತಹಸೀಲ್ದಾರ್ ನರಸಿಂಹ ಸ್ವಾಮಿ, ರವೀಂದ್ರ ಚವ್ಹಾಣ, ಬಾಲಪ್ಪ ಸಿರಿಗೆಂ ಸೇರಿದಂತೆ ಗಣತಿದಾರರು ಇದ್ದರು.
