ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಸೇರಿ ಗಣ್ಯರು ಭಾಗಿ | ದಾಖಲೆಯ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಲು ಕರೆ
ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಅವರ 75 ನೇ ಜನ್ಮ ದಿನದ ಸೇವಾ ಪಾಕ್ಷಿಕ ಅಭಿಯಾನ-2025 ಅಂಗವಾಗಿ ರವಿವಾರ ಬೆಳಿಗ್ಗೆ ನಗರದ ಸರ್ದಾರ್ ವಲ್ಲಬಾಯ್ ಪಟೇಲ್ ವೃತ್ತದಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ವೃತ್ತದ ವರೆಗೆ ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ನಮೋ ಯುವ ರನ್ ಮ್ಯಾರಥಾನ್ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಯುವಕರಿಗೆ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವಂತೆ ಮತ್ತು ಮಾದಕ ವಸ್ತುಗಳಿಂದ ದೂರವಿರುವಂತೆ ಯುವಕರನ್ನು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ‘ನಶೆಮುಕ್ತ ಭಾರತ’ ಧೈಯದೊಂದಿಗೆ ದೇಶದ 75 ನಗರಗಳಲ್ಲಿ ಇಂದು ‘ನಮೋ ಯುವ ರನ್” ಮ್ಯಾರಾಥನ್ ನಡೆಯುತ್ತಿದ್ದು, ಇದೊಂದು ದಾಖಲೆಯ ಅಭಿಯಾನವಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಜಿ ಮಾದಕ ವಸ್ತು ಮುಕ್ತ ಭಾರತಕ್ಕಾಗಿ ಪ್ರತಿಜ್ಞೆ ಮಾಡಿದ್ದಾರೆ. ಈ ಮಹತ್ವದ ನಿರ್ಣಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ಆರ್ ಸಾಹುಕಾರ, ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ, ಮಹೇಶರಡ್ಡಿ ಮುದ್ನಾಳ, ನಾಗರತ್ನ ಕುಪ್ಪಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರುಶುರಾಮ ಕುರಕುಂದಿ, ದೇವೇಂದ್ರನಾಥ ನಾದ, ವೆಂಕಟರಡ್ಡಿ ಅಬ್ಬೆ ತುಮಕೂರು, ಬಸವರಾಜ ಚಂಡ್ರಕಿ, ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊನಿಗೆರ, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ್ ಕಾಡಂನೊರ, ಸುರೇಶ್ ಅಂಬಿಗೇರ, ಶ್ರೀನಾಥ ಜೈನ್, ಸುನಿತಾ ಚೌವ್ಹಾಣ್, ಗೋವಿಂದಪ್ಪ ಖಾನಾಪುರ, ಸಿ ಮಲ್ಲು ಕೊಲಿವಾಡ, ಶಕುಂತಲಾ ಜಿ, ಭೀಮ ಬಾಯಿ ಶೆಂಡಿಗಿ, ರಾಮು ರಾಠೋಡ, ಮನೋಹರ ಪವಾರ, ಶರಣುಗೌಡ ಅಲಿಪುರ, ಮಲ್ಲು ಸ್ವಾಮಿ ಗುರುಸುಣಿಗಿ, ಬಸ್ಸು ಗೌಡ ನಾಯ್ಕಲ್, ಹಣಮರಡ್ಡಿ, ಲಕ್ಷ್ಮಿ ಪುತ್ರ ಮಾಲಿಪಾಟೀಲ, ಹಣಮಂತ ವಲ್ಯಪುರ, ನಾಗಪ್ಪ ಗಚ್ಚಿಮನಿ, ಶ್ರೀಕಾಂತ್ ಸುಂಗಲ್ಕರ್ ಸೇರಿದಂತೆ ಅನೇಕರ ಉಪಸ್ಥಿತರಿದ್ದರು.
