ಗುರುಮಠಕಲ್ ಭಾವಸಾರ ಕ್ಷತ್ರಿಯ  ಸಮಾಜದ ನೂತನ ಅಧ್ಯಕ್ಷರ ಆಯ್ಕೆ | ಸಮಾಜ ಸಂಘಟನೆಗೆ ಒತ್ತು

ಗುರುಮಠಕಲ್: ಗುರುಮಠಕಲ್ ತಾಲ್ಲೂಕಿನ ಭಾವಸರ ಕ್ಷತ್ರಿಯ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆಯು ಸಮಾಜದ ಸಭಾಭವನದಲ್ಲಿ ಜರುಗಿತು. ಸಮಾಜದ ಹಿರಿಯರ ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ಪ್ರಾಮಾಣಿಕವಾಗಿ ಚುನಾವಣೆ ನಡೆಯಿತು.

ನೂತನ ಪದಾಧಿಕಾರಿಗಳ ವಿವರ: ಅಧ್ಯಕ್ಷರಾಗಿ ಹನುಮಂತರಾವ್ ಢಗೆ, ಖಜಾಂಚಿ ಅನಿಲ ಪತಂಗೆ, ಕಾರ್ಯದರ್ಶಿ ಮನೋಹರ ಸುತ್ರಾವೆ ಆಯ್ಕೆಯಾದರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರು ಮಾತನಾಡಿ, “ಸಮಾಜದ ಏಳಿಗೆಗಾಗಿ ಸಮರ್ಪಿತ ಸೇವೆ ನೀಡುವುದಾಗಿ” ಭರವಸೆ ನೀಡಿದರು. ಹಿರಿಯರು ಹಾಗೂ ಸದಸ್ಯರು ನೂತನ ತಂಡಕ್ಕೆ ಶುಭ ಹಾರೈಸಿ, ಭವಿಷ್ಯದಲ್ಲಿಯೂ ಒಗ್ಗಟ್ಟಿನಿಂದ ಸಮಾಜದ ಅಭಿವೃದ್ಧಿಗೆ ಶ್ರಮಿಸುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಭಾವಸಾರ ಕ್ಷತ್ರಿಯ ಸಮಾಜ ಹಿರಿಯ ಮುಖಂಡ ಅಶೋಕ ಮಹೇಂದ್ರಕರ್, ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಣರಾವ್ ಪತಂಗೆ, ಶ್ರೀನಿವಾಸ ಪತಂಗೆ, ದತ್ತುರಾವ್ ಢಗೆ, ಶುಶಾಂತ್ ಢಗೆ, ದತ್ತು ಬೋಡಕೆ, ಸತೀಶ್ ಢಗೆ, ಲಕ್ಷ್ಮಿಕಾಂತ್ ಪಟಾಳೇ, ಸಂದೀಪ್ ಢಗೆ, ಶ್ರೀಕಾಂತ್ ಢಗೆ, ರಾಜು ಬೋಡಕೆ, ಸಂತೋಷ ಢಗೆ, ನಾಗರಾಜ್ ಪತಂಗೆ, , ಪ್ರಶಾಂತ ಪತಂಗೆ, ರಾಹುಲ್, ಅಂಬಾದಾಸ್ ಬೋಡಕೆ, ರಮೇಶ್, ಶ್ರೀಕಾಂತ್ ಸುತ್ರಾವೆ, ಸುನಿಲ್ ಢಗೆ, ನಿಖಿಲ್ ಢಗೆ, ಮಾಣಿಕ್ ಸುತ್ರಾವೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!