ಗುರುಮಠಕಲ್ ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜ ಭವನದಲ್ಲಿ | ಆಷಾಡ ಮಾಸದ ನಿಮಿತ್ತ ಭವಾನಿ ಮಾತೆಗೆ ವಿಶೇಷ ಪೂಜೆ

ಗುರುಮಠಕಲ್: ಆಷಾಢ ಮಾಸದ ಹಿನ್ನೆಲೆ  ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜದವರು ಶ್ರದ್ಧಾ ಭಕ್ತಿಯಿಂದ ಆಚರಿಸಿ, ಭವಾನಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಧಾರ್ಮಿಕ ವಿಧಿ ವಿಧಾನಗ ಳೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸಮಾಜ ದ ಹಿರಿಯರು ಹಾಗೂ ಯುವಕರು ಸಮಾನವಾಗಿ ಭಾಗವಹಿಸಿದರು. ಮಹಿಳಾ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ ಹಾಗೂ ಭಕ್ತಿಭಾವದ ಅಲಂಕಾರ, ದೇವಿಯ ಮಂಟಪದ ವಿನ್ಯಾಸ ಎಲ್ಲರ ಗಮನ ಸೆಳೆದವು.

ಮೊದಲಿಗೆ ಭಾವಸಾರ ಕ್ಷತ್ರಿಯ ಸಮಾಜದ ಮುಖಂಡತ ನೇತೃತ್ವದಲ್ಲಿ ಭವಾನಿ ಮಾತೆಗೆ ಪೂಜೆ ಪುನಸ್ಕಾರ, ನೈವೇದ್ಯ ಸಮರ್ಪಣೆಗಳು ನಡೆದವು.

ಸಮಾಜದಲ್ಲಿ ಸಂಬಂಧಗಳು ಗಟ್ಟಿಯಾಗಿ ನೆಲಯೂರಿದಾಗ ಮಾತ್ರ ಒಗ್ಗಟ್ಟು ಪ್ರದರ್ಶನ ತೋರಲು ಸಾಧ್ಯ. ನಮ್ಮ ದೇಶದ ಸಂಸ್ಕೃತಿಯಲ್ಲಿ ಅನೇಕ ಹಬ್ಬ ಹರಿದಿನಗಳ ಅಚರಣೆಗಳು ವಿಶೇಷತೆ ಹೊಂದಿದ್ದು, ಅವುಗಳ ಅಚರಣೆಯಿಂದ ಸಮಾಜದಲ್ಲಿ ಸಾಮರಸ್ಯೆ ಐಕ್ಯತೆ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು.

ಆಷಾಢ ತಿಂಗಳಲ್ಲಿ ಎಲ್ಲೆಡೆ ಗಾಳಿ ಹೆಚ್ಚಾಗಿ ಬೀಸುತ್ತಿದ್ದು ಈ ಗಾಳಿ, ಮಳೆಯಿಂದ ರೈತರ ಬೆಳೆ, ಫಸಲು ಹಾಳಾಗಬಾರದು, ರೈತನ ಬದುಕು ಚೆನ್ನಾಗಿದ್ದರೆ ಎಲ್ಲರೂ ಉಳಿಯುತ್ತಾರೆ, ಗಾಳಿ ನಿಯಂತ್ರಣಕ್ಕೆ ನಮ್ಮ ಜನಾಂಗದವರು ಈ ಸಂದರ್ಭದಲ್ಲಿ ದೇವರಿಗೆ ಮೊರೆ ಹೋಗುತ್ತಾರೆ ಎಂದು ಭಾವಸಾರ ಕ್ಷತ್ರಿಯ ‌ನೂತನ ಅಧ್ಯಕ್ಷ ಹನುಮಂತರಾವ್ ಢಗೆ ಹೇಳಿದರು.

ದರ್ಜೆ, ದಲ್ಲಾಳಿ, ಬಟ್ಟೆ ಅಂಗಡಿ, ಕೃಷಿ ಇತರೆ ಕಾರ್ಯಕ್ರಮದಲ್ಲಿ ತೊಡಗಿಸಿ ಕೊಂಡಿರುವ ಈ ಸಮುದಾಯದವರಿಗೆ ರೈತಾಪಿ ವರ್ಗದವರೆ ಆಸರೆ, ರೈತ ನಕ್ಕರೆ ಜಗವೆಲ್ಲ ನಗುತ್ತದೆ, ರೈತನ ಬದುಕು ಹಸನಾಗಬೇಕಾದರೆ ಆತ ಬೆಳೆದ ಬೆಳೆಗೆ ಅತಿ ಹೆಚ್ಚಿನ ಮಳೆಯಿಂದ ರೋಗ ರುಜಿನಗಳು ತಗುಲಬಾರದು ಎಂದು ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಭಾವಸಾರ ಕ್ಷತ್ರಿಯ ಹಿರಿಯ ಮುಖಂಡರು, ಯುವಕರು, ಮಹಿಳೆಯರು ಸೇರಿದಂತೆ ಸಮಾಜದವರು ಪಾಲ್ಗೊಂಡಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!