ಗುರುಮಠಕಲ್ ನಲ್ಲಿ ಸೆ. 15 ರಂದು ಪ್ರತಿಭಟನೆ | ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಅಧ್ಯಕ್ಷ ಕೃಷ್ಣ ಚಪೆಟ್ಲಾ ಮಾಹಿತಿ
ಗುರುಮಠಕಲ್: ಇತ್ತೀಚೆಗೆ ನಡೆದ ಪ್ರಜಾಸೌಧ ಅಡಿಗಲ್ಲು ಸಮಾರಂಭದಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ಅಡಿಗಲ್ಲು ನೆರವೇರಿಸಿರುವುದು ಅಲ್ಲದೇ ಸಚಿವ ದರ್ಜೆಯ ಸ್ಥಾನಮಾನ ಹೊಂದಿರುವ ಹಿರಿಯ ನಾಯಕರಿಗೆ ಅಗೌರವ ತೋರಿದ್ದನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ ನಿಂದ ಸೆ.15 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಗುರುಮಠಕಲ್ ಬ್ಲಾಕ್ ಅಧ್ಯಕ್ಷ ಕೃಷ್ಣಾ ಚಪೆಟ್ಟಾ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸಂಜೆ ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿಷ್ಟಾಚಾರದಂತೆ ಸಚಿವ ದರ್ಜೆ ಸ್ಥಾನಮಾನ ಹೊಂದಿರುವ ಮಾಜಿ ಸಚಿವ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಬಾಬುರಾವ್ ಚಿಂಚನಸೂರ ಅವರಿಗೆ ಆಹ್ವಾನಯಿತ್ತು. 11 ಗಂಟೆಗೆ ಕಾರ್ಯಕ್ರಮ ಆಗಬೇಕಿತ್ತು. ಈ ವೇಳೆ, 5 ನಿಮಿಷ ದಲ್ಲಿ ಬಾಬುರಾವ ಚಿಂಚನಸೂರ ಬರುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದಕ್ಕೆ ಶಾಸಕ ನಾನಾ, ಅ.. ನಾ ಎಂದು ಏಕವಚನದಲ್ಲಿ ಮಾತನಾಡಿ ಅಗೌರವ ಮಾಡಲಾಗಿದೆ ಎಂದರು.
ಅಲ್ಲದೇ ವೇದಿಕೆಯಲ್ಲಿ ಹತ್ತುವ ವೇಳೆ ಕಾರ್ಯಕರ್ತರು ದುರ್ವರ್ತನೆ ತೋರಿದ್ದಾರೆ. ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಪಾಲಿಸುತ್ತಿಲ್ಲ. ಮರುದಿನವೇ ಮಿನಾಸಪುರ ಕಾರ್ಯಕ್ರಮದಲ್ಲಿಯೂ ಪಕ್ಷದ ಪ್ರಮುಖರು ವೇದಿಕೆಯಲ್ಲಿದ್ದರು ಇದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದರು.
ಪ್ರತಿಭಟನೆಯಲ್ಲಿ ಡಿಸಿಸಿ ಅಧ್ಯಕ್ಷರು, ಗುರುಮಠಕಲ್, ಸೈದಾಪುರ ಬ್ಲಾಕ್ ಅಧ್ಯಕ್ಷರು, ಪ್ರಮುಖರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಈ ವೇಳೆ ಸರ್ಕಾರ, ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದರು. ಈ ವೇಳೆ ಪುರಸಭೆ ಸದಸ್ಯ ಬಾಬು ತಲಾರಿ, ಸಾಯಬಣ್ಣ ಯದ್ಲಾಪುರ, ಫಯಾಜ್ ಅಹ್ಮದ್, ಆನಂದ ಬೋಯಿನಿ, ಚಾಂದಪಾಷಾ, ಭೀಮಶಪ್ಪ ಇತರರು ಇದ್ದರು.
