ಸಂಪುಟ ದರ್ಜೆ ಸ್ಥಾನಮಾನ ಹೊಂದಿರುವ ಚಿಂಚನಸೂರ ಅವರಿಗೆ ಅಗೌರವ ಕಾಂಗ್ರೆಸ್ ಖಂಡನೆ | ಗಂಗಾಪರಮೇಶ್ವರಿ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ ಪ್ರತಿಭಟನೆ | ಶಾಸಕರ ವಿರುದ್ಧ ಘೋಷಣ | ಹೀಗೆ ಮುಂದುವರೆದರೆ  ಶಾಸಕರ ಮನೆಗೆ ಮುತ್ತಿಗೆ ಎಚ್ಚರಿಕೆ | ಕೊನೆಯಲ್ಲಿ ಆಗಮಿಸಿ ಚಿಂಚನಸೂರ ಭಾವುಕ ನುಡಿ

ಪ್ರಜಾಸೌಧ ಅಡಿಗಲ್ಲು ಸಮಾರಂಭದಲ್ಲಿ ನಡೆದ ಸಣ್ಣದೊಂದು ಅಚಾತುರ್ಯ ಕಾಂಗ್ರೆಸ್, ಜೆಡಿಎಸ್ ಮಧ್ಯೆ ದೊಡ್ಡ ರಾಜಕೀಯ ಹೋರಾಟಕ್ಕೆ ಎಡೆಮಾಡಿಕೊಟ್ಟಿದೆ. ಮೊದಲ ಹಂತವಾಗಿ ಶಾಸಕರ ವಿರುದ್ಧ ಕಾಂಗ್ರೆಸ್ ನಾಯಕರು ಸ್ಥಳೀಯವಾಗಿ ಪ್ರತಿಭಟನೆ ನಡೆಸಿದ್ದು, ಜೆಡಿಎಸ್ ಗುರುಮಠಕಲ್ ನಲ್ಲಿ ಆಧಿಕಾರದಲ್ಲಿರುವುದು ಅವರನ್ನೂ ಅಷ್ಟು ಸುಲಭವಾಗಿ ಪರಿಗಣಿಸುವಂತಿಲ್ಲ. ಜೆಡಿಎಸ್ ಹೋರಾಟ ರೂಪಿಸುವ ಎಲ್ಲಾ ತಯಾರಿಯಲ್ಲಿದೆ ಎನ್ನಲಾಗಿದೆ. ಕೆಲವು ರಾಜಕೀಯ ವಿದ್ಯಮಾನಗಳ ಮೆಲುಕು ಹಾಕಿದಾಗ ಏಕ ವಚನ ಪ್ರಯೋಗ ರಾಜಕೀಯದಲ್ಲಿ ಸಾಮಾನ್ಯ ಎನ್ನುವುದು ಅಲ್ಲ ಗೆಳೆಯುವಂತಿಲ್ಲ. ಒಟ್ಟಾರೆ ಈ ಪ್ರಕರಣ ರಾಜಕೀಯವಾಗಿ ತೀವ್ರ ಸಂಚಲನೆ ಸೃಷ್ಟಿ ಮಾಡಿದ್ದು, ಮುಂದೆ ಯಾವ ಹಂತಕ್ಕೆ ತಲುಪುವದೋ ಕಾದು ನೋಡಬೇಕು…

ಗುರುಮಠಕಲ್: ಬಾಬುರಾವ್ ಚಿಂಚನಸೂರ ಅವರ ರಾಜಕೀಯ ಅನುಭವದಷ್ಟು ನಿಮಗೆ ವಯಸ್ಸಿಲ್ಲ, ಏನು ಅಭಿವೃದ್ಧಿ ಮಾಡಿದ್ದೀರಿ. ಡಾ.ಖರ್ಗೆ ಮತ್ತು ಚಿಂಚನಸೂರ ಮಾಡಿರುವ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿಯಲು ನಿಮ್ಮಿಂದ ಆಗಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಅನಪುರ ತೀವ್ರ ವಾಗ್ದಾಳಿ ನಡೆಸಿದರು.ಗುರುಮಠಕಲ್ ಪಟ್ಟಣದ ಗಂಗಾ ಪರಮೇಶ್ವರಿ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ ಶಾಸಕರು ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿರುವುದು, ಅಗೌರವ ತೋರಿದ್ದರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

ನೀವು ಏನು ಅಭಿವೃದ್ಧಿ ಮಾಡಿದ್ದೀರಿ? ಎಲ್ಲಿ ಹೋಯ್ತು ನಿಮ್ಮ ಅನುದಾನ ಎಂದರು. 2018 ರಿಂದ ಈವರೆಗೆ ಅಧಿಕಾರಿಗಳಿಗೆ ತೊಂದರೆ ಕೊಡುತ್ತಿದ್ದೀರಿ. ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಎಂದು ಸವಾಲ್ ಹಾಕಿದ್ದಾರೆ.

ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ, ಗುರುಮಠಕಲ್ ಉಸ್ತುವಾರಿ ರಾಜಗೋಪಾಲರೆಡ್ಡಿ ಮಾತನಾಡಿ, ಅಧಿಕಾರ ಬಳವಳಿಯಿಂದ ಬಂದಿದ್ದಲ್ಲ. ಶಾಶ್ವತವೂ ಅಲ್ಲ. ಜನ ಆರಿಸಿಕಳಿಸಿದ್ದಾರೆ ಅಭಿವೃದ್ಧಿ ಕೆಲಸ ಮಾಡಿ ಅದನ್ನು ಬಿಟ್ಟು ಈ ರೀತಿ ವರ್ತನೆ ಸರಿಯಲ್ಲ ಎಂದು ಹೇಳಿದರು.ಕೊನೆಯಲ್ಲಿ ಆಗಮಿಸಿ ಚಿಂಚನಸೂರ ಅಭಿಮಾನಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಅಭಿಮಾನಿಗಳನ್ನು ಕಂಡು ಭಾವುಕರಾಗಿ, ಇಲ್ಲರೊಟ್ಟಿಗೆ ಸೌಜನ್ಯದಿಂದ ನಡೆದುಕೊಂಡಿದ್ದೇನೆ. ಸ್ವಲ್ಪದರಲ್ಲೇ ಸೋಲಾಗಿದೆ. ಜನರ ಕಷ್ಟ ಸುಖದಲ್ಲಿ ಭಾಗಿಯಾಗುವೆ. ಸಾಯುವವರೆಗೆ ಜನರ ಸೇವೆ ಮಾಡುವೆ ಎಂದರು.

ಪ್ರಮುಖರಾದ ಭೀಮಣ್ಣ ಸಾಲಿ, ಸಾಯಬಣ್ಣ ಬೋರಬಂಡ, ಬ್ಲಾಕ್ ಅಧ್ಯಕ್ಷ ಕೃಷ್ಣ ಚಪೆಟ್ಲಾ‌ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಸೈದಾಪುರ ಬ್ಲಾಕ್ ಅಧ್ಯಕ್ಷ ನಿರಂಜನ ರೆಡ್ಡಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರ ಓದಿದರು. ಪ್ರತಿಭಟನೆಯಲ್ಲಿ ಶ್ರಣಿಕ ಕುಮಾರ ದೋಖಾ, ಬುಚ್ಚಣ್ಣ ಜೈಗ್ರಾಂ, ಶ್ಯಾಮಸನ್ ಮಾಳಿಕೇರಿ, ಚಿದಾನಂದಪ್ಪ ಕಾಳಬೆಳಗುಂದಿ, ಲಕ್ಷ್ಮೀಕಾಂತ ರೆಡ್ಡಿ ಪಲ್ಲಾ, ಸಂಜೀವ ಕುಮಾರ ಚಂದಾಪುರ, ವಿಶ್ವನಾಥ ನೀಲಹಳ್ಳಿ, ಬಸವರಾಜಪ್ಪ ಬಾಗ್ಲಿ, ಮೌನೇಶ, ಸೈಯದ್ ಅಕ್ಬರ್, ಬಾಬು ತಲಾರಿ, ಖಾಜಾ ಮೈನೋದ್ದಿನ್, ಸಾಯಬಣ್ಣ ಯದ್ಲಾಪುರ, ಲಕ್ಷ್ಮಣ ರಾಠೋಡ, ವಸಂತ ಹಬೀಬ್, ಅಖ್ತರ್ ಪ್ಯಾರೆ, ಅನ್ವರ್ ಅಹ್ಮದ್, ಯಶವಂತರಾವ ಸೇರಿದಂತೆ ಅಸಂಖ್ಯಾತ ಕಾಂಗ್ರೆಸ್ ಅಭಿಮಾನಿ, ಕಾರ್ಯಕರ್ತರು ಪಾಲ್ಗೊಂಡಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!