ತಾಲೂಕಿನ ಸಾಧಕ ಎಸ್ ಎಸ್ ಎಲ್ ಸಿ 6, ಪಿಯುಸಿ 5 ವಿದ್ಯಾರ್ಥಿಗಳು ಆಯ್ಕೆ
ಗುರುಮಠಕಲ್: ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸೆ. 14 ರಂದು ಕಲಬುರಗಿಯಲ್ಲಿ ನಡೆಯಲಿದೆ ಎಂದು ಸರ್ಕಾರಿ ನೌಕರರ ಸಂಘದ ವಿಭಾಗೀಯ ಉಪಾಧ್ಯಕ್ಷರೂ ಆದ ತಾಲೂಕು ಅಧ್ಯಕ್ಷ ಸಂತೋಷ್ ನೀರೆಟಿ ಹೇಳಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿ ಭಾಗಿಯಾಗಲಿದ್ದಾರೆ ಎಂದರು.
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ, ಶಾಸಕರು, ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂಘದ ಪದಾಧಿಕಾರಿಗಳು ಭಾಗವಹಿಸುವರು. ಅಂದು ಬೆಳಿಗ್ಗೆ 10:30 ಪಿಡಿಎ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಕಾರ್ಯಕ್ರಮಕ್ಕೆ ಬೆಳಿಗ್ಗೆ 9:30 ರೊಳಗೆ ಹೆಸರು ನೋಂದಣಿ ಮಾಡಿಸಿ ಟೋಕನ್ ಪಡೆಯಲು ಕೋರಿದರು. ಬಳಿಕ ರಾಜ್ಯ ಕಾರ್ಯಕಾರಣಿ ಸಭೆ ನಡೆಯಲಿದೆ.
ವಿದ್ಯಾರ್ಥಿಗಳಾದ ಅನುಷ್ಕಾ ಶುಕ್ಲಾ, ಹರಿಪ್ರೀಯಾ ನೀರೆಟಿ, ಮಲ್ಲಿಕಾರ್ಜುನ, ನಿಭಾ ತಬಸುಮ್, ಝಭಾ ತಬಸುಮ್, ಸ್ಪೂರ್ತಿ, ಪಿಯುಸಿ ಯ ಹರೀಶ್, ಆಂಜನೇಯ, ಖದಿಝಾ, ಕೃತಿತಾರೆಡ್ಡಿ, ಜುಬಿಯಾ, ಬಿಬೀ ಫಾತೀಮಾ, ಅಫಸಾ ತಹರೀನ್ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಸರ್ಕಾರಿ ನೌಕರರ ಸಂಘದ ಮಾಣಿಕಪ್ಪ, ಹರೀಶ್, ಪ್ರಶಾಂತ್, ಶ್ರೀನಿವಾಸ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
