ಗುತ್ತೆದಾರ ಸಮಾಜ, ತಾ.ಪಂ, ಪುರಸಭೆ, ತಹಸೀಲ್ದಾರ್ ಕಚೇರಿಯಲ್ಲಿ ನಾರಾಯಣಗುರುಗಳ ಜಯಂತಿ ಆಚರಣೆ| ಮಹಾನ್ ನಾಯಕರ ಆದರ್ಶ ಅಳವಡಿಸಿಕೊಳ್ಳಿ
ಗುರುಮಠಕಲ್: ಸಭೆ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬ್ರಹ್ಮ ಶ್ರೀ ನಾರಾಯಣಗುರುಗಳ ಆದರ್ಶ ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಲು ಸಮಾಜದ ಮುಖಂಡ ರಾಜೇಂದ್ರ ಕಲಾಲ್ ಹೇಳಿದರು.
ಪಟ್ಟಣದ ಯಲ್ಲಮ್ಮ ದೇವಿ ದೇವಸ್ಥಾನ ಆವರಣದಲ್ಲಿ ಗುತ್ತೇದಾರ ಸಮಾಜದಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಗುರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಯುವ ಮುಖಂಡ ಅನೀಲ ಬಂದೆಪ್ಪ ಕಲಾಲ್, ಪುರಸಭೆ ಸದಸ್ಯ ಅಶೋಕ ಕಲಾಲ್, ಬಾಬು ತಲಾರಿ, ನವಾಜರೆಡ್ಡಿ, ರವಿ ಗವಿನೋಳ, ಶರಣು ಆವಂಟಿ, ಪ್ರಕಾಶ ನೀರೆಟಿ, ಅಂಬಾದಾಸ ಜೀತ್ರಿ, ಹಣಮಂತು, ರಾಘವೇಂದ್ರ ಬುರುಗಪಲ್ಲಿ, ಶಿವು ಕಲಾಲ್, ರಮೇಶ್ ಗೌಡನಳ್ಳಿ, ಭೀಮಯ್ಯ, ಮಲ್ಲಯ್ಯ ಕಲಾಲ್ ಇತರರು ಇದ್ದರು.
ಪುರಸಭೆ ಕಾರ್ಯಾಲಯ: ಇಲ್ಲಿನ ಪುರಸಭೆ ಕಾರ್ಯಾಲಯದಲ್ಲಿ ಬ್ರಹ್ಮ ಶ್ರೀ ನಾರಾಯಣಗುರು ಜಯಂತಿ ಆಚರಣೆ ಮಾಡಲಾಯಿತು. ಪುರಸಭೆ ಅಧ್ಯಕ್ಷೆ ಜಯಶ್ರೀ ಪಾಟೀಲ್ ಅವರು ಮಾಲಾರ್ಪಣೆ ಸಲ್ಲಿಸಿದರು. ಉಪಾಧ್ಯಕ್ಷೆ ರೇಣುಕಾ ಪಡಿಗೆ, ಮುಖ್ಯಾಧಿಕಾರಿ ಭಾರತಿ ದಂಡೋತಿ, ವ್ಯವಸ್ಥಾಪಕ ಮಲ್ಲಿಕಾರ್ಜುನ ಸೇರಿದಂತೆ ಜನಪ್ರತಿನಿಧಿಗಳು, ಸಮಾಜದ ಮುಖಂಡರು, ಸಿಬ್ಬಂದಿಗಳು ಇದ್ದರು.
