ಕೆಹೆಚ್ ಡಿಸಿ ಕಾಲೊನಿ ಗಣಪನ ಅದ್ಧೂರಿ ಮೆರವಣಿಗೆ | ವಿಸರ್ಜನೆ ಕೊನೆಯ ದಿನ ವಿಶೇಷ ಅಲಂಕಾರಗೊಂಡ ವಿನಾಯಕ


ಗುರುಮಠಕಲ್: ಗಣೇಶ ಚತುರ್ಥಿಯಂದು ಗದ್ದುಗೆ ಅಲಂಕರಿಸಿದ ಗಣಪ ವಿಸರ್ಜನೆಯ ಕೊನೆಯ ದಿನವಾದ ಶನಿವಾರ ಎಲ್ಲೆಡೆ ಸಂಭ್ರಮದಿಂದ ಯುವಕರು ಕುಣಿದು ಕುಪ್ಪಳಿಸಿ ವಿದಾಯ ಹೇಳಿದರು.

ಎಲ್ಲೆಡೆ 11 ದಿನ ವಿಶೇಷವಾಗಿ ಪೂಜೆ ಸಲ್ಲಿಸಿ, ಅಭಿಷೇಕ, ನೈವೇದ್ಯಗಳನ್ನು ಅರ್ಪಿಸಲಾಯಿತು. ಹಲವು ಕಡೆ ಅನ್ನ ದಾಸೋಹ ಆಯೋಜಿಸಿ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಕಾಕಲವಾಲ ಬೇಸ್ ಆಂಜನೇಯ ದೇವಸ್ಥಾನ, ಮಜ್ಜಿಗೇರಿ, ಕೆಹೆಚ್ ಡಿಸಿ ಕಾಲೊನಿ ಹನುಮಾನ ಮಂದಿರ ದೇವಸ್ಥಾನ, ಗಣೇಶ ಮಂದಿರ, ಬಂಡಿರೇವು, ಬಂಗಾರಮ್ಮ ದೇವಸ್ಥಾನ, ಉಪ್ಪರಗಡ್ಡಾ, ನಾರಾಯಣಪುರ, ಮದ್ದೂರ ಓಣಿ, ಮನ್ನೆಗೇರಿ, ಮಲ್ಲಯ್ಯ ಕಟ್ಟ ಸೇರಿದಂತೆ ಗುರುಮಠಕಲ್ ಪಟ್ಟಣದ ವಿವಿಧೆಡೆ ಪ್ರತಿಷ್ಟಾಪಿಸಲಾದ ಗಣೇಶ ವಿಗ್ರಹಗಳನ್ನು ವಿಸರ್ಜಿಸಲಾಯಿತು.

ಕೆಹೆಚ್ ಡಿಸಿ ಕಾಲೊನಿಯಲ್ಲಿ ಶಂಭುಲಿಂಗ, ಹಣಮಂತರಾವ ಶ್ರೀಗಿರಿ, ರಾಜು ಪೇಂದು, ಸತೀಶ, ರಾಘವೇಂದ್ರ, ಮೋಹನ್ ಚಮಕೂರ, ಚಿಂಟು ಶ್ರೀಗಿರಿ, ಅರುಣ, ತುಳಸಿ, ಸುನೀಲ್, ರುಪೇಶ, ಅಂಬಾದಾಸ ಸೇರಿದಂತೆ ಯುವಕರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!