ಗುರುಮಠಕಲ್‌: ಇತ್ತೀಚೆಗೆ ನೀಲಹಳ್ಳಿ ಕೆರೆಯಲ್ಲಿ  ಇಂದಿರಾ ನಗರದ ಪರಿಶಿಷ್ಟ ಜಾತಿಯ ಬಾಲಕಿ ಮತ್ತು ಯುವತಿಯ ಶವಗಳು ಪತ್ತೆಯಾಗಿದ್ದು, ಸೈದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಆರೋಪಿಗಳ ಪತ್ತೆಗೆ ತ್ವರಿತ ಕ್ರಮವಹಿಸಲು ಮುಂದಾಗಬೇಕು. ಗೃಹಸಚಿವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಉಪಾಧ್ಯಕ್ಷರಾದ ಕೆ. ಬಿ. ವಾಸು ಒತ್ತಾಯಿಸಿದರು.

ಮೃತರ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫೆ.11ರಂದು ಚಿಂದಿ ಆಯಲು ಹೋಗಿದ್ದವರು ನೀಲಹಳ್ಳಿ ಕೆರೆಯಲ್ಲಿ ಶವ ಪತ್ತೆಯಾಗಿದ್ದಾರೆ. ಸಾವಿನ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮೂಗಿನಲ್ಲಿ ರಕ್ತ ಬಂದಿದೆ. ಇದರ ಬಗ್ಗೆ ಕೂಲಂಕುಷ ತನಿಖೆಯಾಗಬೇಕು.

ಬಾಲಕಿಯೊಂದಿಗೆ ಒಬ್ಬ ಯುವಕ ಅಶ್ಲೀಲವಾಗಿ ನಡೆದು ಕೊಂಡಿದ್ದ ಎಂದು ತಿಳಿದು ಬಂದಿದೆ. ಇದರ ಕುರಿತು ಜಿಲ್ಲಾ ಪೊಲೀಸ್ ವರಷಾಧಿಕಾರಿಗಳಿಗೆ ಕೆಲವು ಸಂಶಯಗಳ ಕುರಿತು ಮಾಹಿತಿ ನೀಡಲಾಗಿದೆ ಎಂದು ಹೇಳಿದರು.

ಈ ವೇಳೆ ಅಲೆಮಾರಿ ಬುಡ್ಗಜಂಗಮ ಹಕ್ಕುಗಳ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಆಂಜನೇಯ, ಪಕ್ಷದ ಜಿಲ್ಲಾ ಉಪಾಧ್ಯಕ್ಷ ಭೀಮು ಗಿರಿಗಿರಿ, ಭಾಸ್ಕರ ಯಾದಗಿರಿ, ಮಹಾದೇವಪ್ಪ ಚಪೇಟ್ಲಾ, ಗುರುಮಠಕಲ್ ವಿಧಾನಸಭಾ ಮತ ಕ್ಷೇತದ ಅಧ್ಯಕ್ಷ, ಪ್ರಕಾಶ ಮೌರ್ಯ, ಅಶೋಕ್ ಬಂಟನೆತ್ತಿ, ಚಂದ್ರಕಾಂತ್ ನಜರಾಪುರ್, ನವೀನ್ ಕುಮಾರ್, ಸುರೇಶ್ ಬೂದುರ್, ಆನಂದ್ ಬಂಟು ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!