ಶಾಸಕರಿಂದ ಕೋಟ್ಯಂತರ ವಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು | ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಕೂಡದು
ನಂದೇಪಲ್ಲಿಯಲ್ಲಿ ಬ್ರಿಡ್ಜ್ ಕಂ. ಬ್ಯಾರೇಜ್ ನಿರ್ಮಾಣಕ್ಕೆ ಕ್ರಮ – ಶರಣಗೌಡ ಕಂದಕೂರ ಭರವಸೆ
ಗುರುಮಠಕಲ್: ಕ್ಷೇತ್ರದಲ್ಲಿ ಶಾಸಕ ಶರಣಗೌಡ ಕಂದಕೂರ ಅವರು ಅಭಿವೃದ್ಧಿಯ ಹೊಳೆ ಹರಿಸುತ್ತಿರುವುದು ಜನರಲ್ಲಿ ಸಾಕಷ್ಟು ಸಂತಸ ಮೂಡಿಸಿದೆ. ಈ ಹಿಂದೆ ಆಗದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಯುವ ಶಾಸಕರು ಕಾಳಜಿವಹಿಸಿ ಶಿಕ್ಷಣ, ಆರೋಗ್ಯ ಮತ್ತು ನೀರಾವರಿ ಸೌಲಭ್ಯಕ್ಕೆ ಶ್ರಮಿಸುತ್ತಿದ್ದಾರೆ.
ಗುರುಮಠಕಲ್ ತಾಲೂಕಿನ ಜೈಗ್ರಾಂನಲ್ಲಿ 2024-25 ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆಯಡಿ ಜೈಗ್ರಾಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 3 ಕೋಣೆಗಳ 50 ಲಕ್ಷ ವೆಚ್ಚದ ಕಾಮಗಾರಿ, ಗ್ರಾಮದಲ್ಲಿ 10 ಲಕ್ಷ ವೆಚ್ಚದ ಚರಂಡಿ ನಿರ್ಮಾಣ ಕಾಮಗಾರಿ, 20 ಲಕ್ಷ ವೆಚ್ಚದಲ್ಲಿ ಜೈಗ್ರಾಮ ಗ್ರಾಮದ ಮುಖ್ಯ ರಸ್ತೆಯಿಂದ ಶ್ರೀ ಹನುಮಾನ ದೇವಸ್ಥಾನದ ವರೆಗೆ ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಹಾಗೂ 10 ಲಕ್ಷ ವೆಚ್ಚದಲ್ಲಿ ತೋರಣತಿಪ್ಪಾ ಗ್ರಾಮದ ಸಿ. ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ, 15.81 ಲಕ್ಷ ವೆಚ್ಚದ ಸಂಕ್ಲಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 1 ಕೋಣೆ ನಿರ್ಮಾಣ. 30 ಲಕ್ಷ ವೆಚ್ಚದಲ್ಲಿ ವಂಕಸಂಬರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಿ.ಸಿ. ರಸ್ತೆ ನಿರ್ಮಾಣ ಹಾಗೂ 53.55 ಲಕ್ಷಗಳಲ್ಲಿ ವಂಕಸಂಬರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ಆವಿಷ್ಕಾರ ಅನುಷ್ಠಾನ ಸೇರಿದಂತೆ 15 ಲಕ್ಷ ವೆಚ್ಚದಲ್ಲಿ ಗುಂಜನೂರ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದರು.
ಈ ವೇಳೆ ಮಾತನಾಡಿ, ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಕೂಡದು ಎಂದರು. ಕ್ಷೇತ್ರದಲ್ಲಿ ರೈತರು ಅಭಿವೃದ್ಧಿಯಾಗ ಬೇಕು ಎನ್ನುವ ಕನಸಿದೆ. ಇದಕ್ಕಾಗಿ ನೀರಾವರಿಗೆ ಅನುಕೂಲವಾಗಲು ಬಿಡ್ಜ್ ಕಂ. ಬ್ಯಾರೇಜ್ ನಿರ್ಮಾಣ ಮಾಡಲಾಗುವುದು. ಈಗಾಗಲೇ ಇಡ್ಲೂರ ಬಳಿ ಬಿಡ್ಜ್ ಕಂ.ಬ್ಯಾರೇಕ್ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ ಅದನ್ನು ಶೀಘ್ರವೇ ಉದ್ಘಾಟಿಸಲಾಗುದು ಎಂದರು.
ನಂದೇಪಲ್ಲಿಯಲ್ಲಿ ಬಿಡ್ಡ ಕಂ.ಬ್ಯಾರೇಜ್ ನಿರ್ಮಾಣ ಮಾಡುವುದು ಈ ಭಾಗದ ರೈತರ ಬೇಡಿಕೆಯಾಗಿ ಅದನ್ನು ತ್ವರಿತಗತಿಯಲ್ಲಿ ಮಾಡಲು ಪ್ರಯತ್ನಿಸಲಾಗುವುದು. ಜೈಗಾಂ ಶಾಲೆಗೆ ಇನ್ನೂ 3 ಹೆಚ್ಚುವರಿ ಶಾಲೆ ಕೋಣೆ ನಿರ್ಮಾಣದ ಬೇಡಿಕೆಯಿದೆ. ಈ ಬಗ್ಗೆ ಶೀಘ್ರವೇ ಕ್ರಿಯಾಯೋಜನೆ ರೂಪಿಸಲು ಸೂಚಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ಸುಭಾಷ ಕಟಕಟೆ, ರಾಮಮೋಹನರೆಡ್ಡಿ, ಮಲ್ಲಣ್ಣ ಗೌಡ ಜೈ ಗ್ರಾಂ. ವಿನಾಯಕ ಪಿಐ, ಬಸ್ಸಣ್ಣ ದೇವರಹಳ್ಳಿ, ರವಿಂದ ರೆಡ್ಡಿ ಗೋವಿನೋಳ, ಮಲ್ಲಿಕಾರ್ಜುನ ಅರುಣಿ, ಕೊಂಕಲ್. ಜೈಗಾಂ, ಚಿನ್ನಾಕಾರ ಗ್ರಾ.ಪಂ. ಅಧ್ಯಕ್ಷರು, ಪಿಡಿಓ ಉಮೇಶ, ಸೈಯದ್ ಅಲಿ ಸೇರಿದಂತೆ ಗಣ್ಯರು, ಜನಪ್ರತಿನಿಧಿಗಳು ಇದರು.
