46 ಫಲಾನುಭವಿಗಳಿಗೆ ಸಲಕರಣೆ ವಿತರಣೆ | ADIP ಯೋಜನೆಯಡಿ ಜನರಿಗೆ ಸೌಲಭ್ಯ
ಗುರುಮಠಕಲ್: ವಿಶೇಷ ಚೇತನರಿಗೆ ರಾಜ್ಯ, ಕೇಂದ್ರ ಸರ್ಕಾರ ಹಲವು ಪ್ರಯೋಜನಗಳನ್ನು ನೀಡುತ್ತಿವೆ ಸೌಕರ್ಯಗಳ ಸದುಪಯೋಗ ಪಡೆಯಿರಿ ಎಂದು ಶಾಸಕ ಶರಣಗೌಡ ಕಂದಕೂರ ಕರೆ ನೀಡಿದರು.
ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿ ಆವರಣದಲ್ಲಿ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ನೆರವು ಮತ್ತು ಸಹಾಯಕ ಸಾಧನೆಗಳ ದಿವ್ಯಾಂಗರ ಸಬಲೀಕರಣಕ್ಕೆ ಎಡಿಐಪಿ ಯೋಜನೆಯಡಿ ಸಾಧನ ಸಲಕರಣೆ ವಿತರಿಸಿ ಮಾತನಾಡಿದರು.
ಸರ್ಕಾರ ಶೇ.5ರಷ್ಟು ಅನುದಾನ ವಿಕಲಚೇತರ ಅಭಿವೃದ್ಧಿಗೆ ಮೀಸಲಿರಿಸಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯೂ ಶೇ.5 ಅನುದಾನ ಮೀಸಲಿರಿಸಿ ಕಾರ್ಯಕ್ರಮ ರೂಪಿಸಲಿದೆ ಎಂದರು.
ಶಾಸಕರ ಅನುದಾನದಲ್ಲಿಯೂ ವಿಕಲಚೇತನರ ಕಲ್ಯಾಣಕ್ಕೆ ಕಮವಹಿಸಲಾಗಿದೆ ಎಂದರು. ಯೋಜನೆಗಳನ್ನು ಸದುಪಯೋಗ ಪಡೆಯುವುದರಿಂದ ಅನುಕೂಲವಾಗಲಿದೆ ಎಂದರು. ಈ ವೇಳೆ ವೀರುಪಾಕ್ಷಿ ಸೇರಿದಂತೆ ಪ್ರಮುಖರು, ಫಲಾನುಭವಿಗಳು ಇದ್ದರು.
