74 ಸಾವಿರ ನಗದು | 7 ಜನ ಆರೋಪಿಗಳ ವಿರುದ್ಧ ಪ್ರಕರಣ

ಗುರುಮಠಕಲ್: ಪಟ್ಟಣದ ಹೊರವಲಯದ  ಪೆಟ್ರೋಲ್ ಪಂಪ್ ಹತ್ತಿರದ ನಕ್ಷತ್ರ ಧಾಬಾ ಹತ್ತಿರ ಖುಲ್ಲಾ ಸ್ಥಳದಲ್ಲಿ ಹಣ ಪಣಕ್ಕಿಟ್ಟು ಜೂಜಾಟ ಆಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ಗುರುಮಠಕಲ್ ಪಿಐ ವೀರಣ್ಣ ಎಸ್ ದೊಡ್ಡಮನಿ ನೇತೃತ್ವದಲ್ಲಿ ಪೊಲೀಸ ಸಿಬ್ಬಂದಿ ದಾಳಿ ನಡೆಸಿದ್ದಾರೆ.

ಬೆಳಿಗ್ಗೆ ಜೂಜಾಟದಲ್ಲಿ ತೊಡಗಿದ 7 ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿ, 74 ಸಾವಿರದಷ್ಟು ಹಣ ಹಾಗೂ ಇಸ್ಪೇಟ್ ಎಲೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಅಲ್ಲಿದ್ದ ವಾಹನ ವಶಕ್ಕೆ ಪಡೆದು ದಾಖಲೆ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಹಣಮಂತು , ವೀರಪ್ರತಾಪರೆಡ್ಡಿ, ಸುರೇಶ , ರಾಮು, ವೆಂಕಟರೆಡ್ಡಿ, ಹರಿಪ್ರಸಾದ್ ಹೈದ್ರಾಬಾದ್‌ ಸೇರಿದಂತೆ ಓಡಿ ಹೋದ ವಿನೋದ್ ಎಂಬವನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!