ಗಡಿ ಭಾಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುತ್ತಿರುವ ಕೇಂದ್ರ | 39 ಸೈನಿಕ, 6 ನವೋದಯ ಹಾಗೂ 60 ಕ್ಕೂ ಹೆಚ್ಚು ಮಕ್ಕಳು ಮುರಾರ್ಜಿ ಇತರೆ ವಸತಿ ಶಾಲೆಗೆ ಆಯ್ಕೆ

ಗುರುಮಠಕಲ್: ಶ್ರೀರಾಮ್ ಎಜ್ಯುಕೇಶನಲ್ ಡೆವಲಪ್‌ಮೆಂಟ್ ಟ್ರಸ್ಟ್ ನ ಜ್ಞಾನವೃಕ್ಷ ನವೋದಯ ತರಬೇತಿ ಕೇಂದ್ರ ಗುರುಮಠಕಲ್ ನಲ್ಲಿ ಇದೇ 26 ರಂದು ಪಾಲಕರ ಸಭೆ ಮತ್ತು ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ರಮೇಶ ಅನಸೂರ ಹೇಳಿದರು.

ಪತ್ರಕರ್ತರನ್ನುದ್ದೇಶಿ ಮಾತನಾಡಿದ ಅವರು, ಪಟ್ಟಣದ ಹೊರವಲಯದ ನಾರಾಯಣಪೇಟ ರಸ್ತೆಯ ನಳಂದ ಸ್ಟಡಿ ಕ್ಯಾಂಪಸ್. (ಇಂಡಿಯನ್ ಪೆಟ್ರೊಲ್ ಬಂಕ್ ಹತ್ತಿರ) ಕಾರ್ಯಕ್ರಮ ನಡೆಯಲಿದೆ. ನಮ್ಮ ಸಂಸ್ಥೆಯಲ್ಲಿ ವ್ಯಾಸಾಂಗ ಮಾಡಿ ಈ ಬಾರಿ 39 ಸೈನಿಕ, 6 ನವೋದಯ ಹಾಗೂ 60 ಕ್ಕೂ ಹೆಚ್ಚು ಮಕ್ಕಳು ಮುರಾರ್ಜಿ ಇತರೆ ವಸತಿ ಶಾಲೆಗೆ ಆಯ್ಕೆಯಾಗಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ  ನಿಜಗುಣಾನಂದ ಮಹಾಸ್ವಾಮಿಗಳು, ನಿಶ್ಚಲ ಮಂಟಪ ಬೈಲೂರು, ಬೆಳಗಾವಿ ಜಿಲ್ಲೆ, ನೇತೃತ್ವ ಪೂಜ್ಯ ಶಾಂತವೀರ ಗುರುಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಉದ್ಘಾಟಕರಾಗಿ ಜಯಶ್ರೀ ಆರ್. ಪೊಲೀಸ್ ಪಾಟೀಲ್ ಅಧ್ಯಕ್ಷರು, ಪುರಸಭೆ, ಮುಖ್ಯ ಅತಿಥಿಗಳಾಗಿ ಡಾ. ಹುಲಿಕಲ್ ನಟರಾಜ್ ಸಂಸ್ಥಾಪಕ ಅಧ್ಯಕ್ಷರು, ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ದೊಡ್ಡ ಬಳ್ಳಾಪೂರ ಸೇರಿದಂತೆ ಹಣಮಂತು ಬಂಕಲಗಿ PSI ಯಾದಗಿರಿ ಗ್ರಾಮೀಣ ಪೋಲೀಸ್ ಠಾಣೆ, ವಾಸುದೇವ ಜಗವಾಣಿ ಪತ್ರಕರ್ತರು ಕಲಬುರಗಿ, ರವೀಂದ್ರ ಚೌವ್ಹಾಣ್ ಶಿಕ್ಷಣ ಸಂಯೋಜಕರು, ಸೂರ್ಯಕಾಂತ್ ಎನ್. ಘಂಟಿ ಭಾಗವಹಿಸಲಿದ್ದಾರೆ.

ಅಧ್ಯಕ್ಷತೆಯನ್ನು ವಿದ್ಯಾರ್ಥಿನಿ ಬೃಂದಾ ತಂಬಾಕೆ, ನಿರೂಪಣೆಯನ್ನು ಮಧುಶ್ರೀ ಮತ್ತು ವಿಶಾಲ್, ಸ್ವಾಗತ ಭಾಷಣ ವಿಹಾನ್ ಸೇಡಂಕರ್, ಕುಮಾರಿ ಭಾಗ್ಯಶ್ರೀ ನಾಗರೆಡ್ಡಿ, ವಂದನಾರ್ಪಣೆ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಈ ವೇಳೆ ವಿರೇಶ ನರ್ವಾ ಪುಟಪಾಕ, ಗುಂಡೇಶ ಹಲಗಿ ಹಾಗೂ ಭೀಮು ಗಿರಿಗಿರಿ ಗಾಜರಕೋಟ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!