ಸಾರ್ವಜನಿಕ ಸ್ಥಳದಲ್ಲಿ ದುರ್ನಾತ | ಮೈಮರೆತ ಪುರಸಭೆ ಸಿಬ್ಬಂದಿ | ಸಾಂಕ್ರಾಮಿಕ ರೋಗಗಳ ಭೀತಿ
ಗುರುಮಠಕಲ್: ಪಟ್ಟಣದ ಸ್ವಚ್ಛತೆಯನ್ನು ಪುರಸಭೆ ಸಂಪೂರ್ಣ ಮರೆತಿದೆ. ಕೇವಲ ಗಳಿಕೆಯ ಹಿಂದೆ ಸಿಬ್ಬಂದಿಗಳು ಬಿದ್ದಿದ್ದಾರೆ ಎನ್ನುವ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ.
ಇಲ್ಲಿನ ಸರ್ಕಾರಿ ಅತಿಥಿ ಗೃಹದ ಎದುರು ವಾರ್ಡ್ 22ರ ಜನ ವಸತಿ ಪ್ರದೇಶ, ಟೀ ಸ್ಟಾಲ್ ಎದುರುಗಡೆ ಹೈದರಾಬಾದ್ – ಸಿಂಧಗಿ ಹೆದ್ದಾರಿ ಪಕ್ಕದ ಒಳಚರಂಡಿಯ ಚೆಂಬರ್ ಕೊಳಚೆ ನೀರು ರಸ್ತೆಗೆ ಹರಿಯುತ್ತಿದೆ.
ಸುಮಾರು ತಿಂಗಳುಗಳಿಂದ ನಿರಂತರವಾಗಿ ಕೊಳಚೆ ನೀರು ಹರಿಯುತ್ತಿದ್ದರೂ ಕಂಡು ಕಾಣದಂತೆ ಕಣ್ಮುಚ್ಚಿ ಕುಳಿತ್ತಿದ್ದಾರೆ. ಪಟ್ಟಣದ ಸ್ವಚ್ಛತೆಯನ್ನು ಪುರಸಭೆ ಸಂಪೂರ್ಣ ಮರೆತಿದೆ ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.
ಮಳೆಗಾಲ ಆರಂಭವಾಗಿದ್ದು, ಸಾಂಕ್ರಾಮಿಕ ರೋಗಗಳು ಹೊರಡುವ ಭೀತಿ ಬೆನ್ನಲ್ಲೇ, ಗಬ್ಬು ನಾತ ಬೀರುವ ಕೊಳಚೆ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು. ಆದರೆ ತಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎನ್ನುವ ಅಸಮಾಧಾನ ವ್ಯಕ್ತವಾಗಿದೆ.
ಪಟ್ಟಣದ ಸ್ವಚ್ಛತೆಗೆ ಆದ್ಯತೆ ಇಲ್ಲದಂತಾಗಿದೆ. ಕೇಂದ್ರ, ರಾಜ್ಯ ಸರ್ಕಾರ ಸ್ವಚ್ಛ ಭಾರತ ಮಾಡಲು ಹೊರಟಿದೆ. ಆದರೆ ಅಧಿಕಾರಿಗಳು ಇದನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. – ಅಶೋಕ ಶನಿವಾರಂ, ಡಿಎಸ್ಎಸ್ ತಾಲೂಕು ಸಂಚಾಲಕ.