ವಿವಿಧ ವೃತ್ತಿಯ ಕಾರ್ಮಿಕರಿಗೆ ಕಿಟ್ ವಿತರಣೆ | ಸಂಚಾರಿ ಆರೋಗ್ಯ ಘಟಕ ಲೋಕಾರ್ಪಣೆ

      ಸಂತೋಷ ಲಾಡ್ ಗೆ ಅಭಿನಂದನೆ

ರಾಜ್ಯ ಸಚಿವ ಸಂಪುಟದಲ್ಲಿ ತಮ್ಮದೇ ಆದ ವಿಶೇಷ ಸ್ಥಾನಮಾನ ಹೊಂದಿದ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಕಾರ್ಮಿಕರ ಅಭಿವೃದ್ಧಿಗಾಗಿ ಗುರುಮಠಕಲ್ ತಾಲೂಕನ್ನು ಆಯ್ಕೆ ಮಾಡಿ ಗಡಿಭಾಗದ ಕಾರ್ಮಿಕರ ಆರೋಗ್ಯಕ್ಕಾಗಿ ಸಂಚಾರಿ ವಾಹನ ಸೌಲಭ್ಯ ಕಲ್ಪಿಸಿದ ಸಚಿವ ಸಂತೋಷ ಲಾಡ್ ಅವರ ಸಹಕಾರಕ್ಕೆ ಕಿಟ್ ವಿತರಣಾ ಸಭೆಯಲ್ಲಿ ಶಾಸಕ ಶರಣಗೌಡ ಕಂದಕೂರ ಅವರು ಧನ್ಯವಾದ ಅರ್ಪಿಸಿದರು.

ಗುರುಮಠಕಲ್ : ಸಮಾಜದ ವಿವಿಧ ರಂಗಗಳಲ್ಲಿ ಕೆಲಸಮಾಡುವ ಕಾರ್ಮಿಕರು ದೈನಂದಿನ ದುಡಿಮೆಯ ಜೊತೆಗೆ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿ ಉನ್ನತ ಶಿಕ್ಷಣ ಪಡೆಯಲು ಶ್ರಮಿಸುವಂತೆ ಶಾಸಕ ಶರಣಗೌಡ ಕಂದಕೂರ ಹೇಳಿದರು.

ಪಟ್ಟಣದ ಶಾಸಕರ ಜನ ಸಂಪರ್ಕ ಕಛೇರಿಯಲ್ಲಿ ಕಾರ್ಮಿಕ ಇಲಾಖೆವತಿಯಿಂದ ಕಟ್ಟಡ ಕಾರ್ಮಿಕರು ಮತ್ತು ಇತರೆ ಕಾರ್ಮಿಕರ ಸಂಚಾರಿ ಆರೋಗ್ಯ ಘಟಕದ ಉದ್ಘಾಟನೆ ಹಟಗೂ ಕಟ್ಟಡ ಮೇಸ್ತ್ರಿ ಮತ್ತು ಇಲೆಕ್ಟ್ರಿಷಿಯನ್ ಗಳಿಗೆ ಕಿಟ್ ವಿತರಿಸಿ ಮಾತನಾಡಿದರು.

ಪ್ರತಿ ಕ್ಷೇತ್ರದ ಅಭಿವೃದ್ಧಿಗೆ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ಸರಕಾರದಿಂದ ಸಂಘಟಿತ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಅನೇಕ ಸವಲತ್ತು ಸೌಲಭ್ಯಗಳನ್ನು ನೀಡಲಾಗಿದೆ.ಅವರ ಆರೋಗ್ಯದ ರಕ್ಷಣೆಗಾಗಿ ವಿಶೇಷ ಅಂಬ್ಯುಲೆನ್ಸ ಸಹ ನೀಡಲಾಗಿದೆ. ಕಾರ್ಮಿಕರು ತಮ್ಮ ಕುಟುಂಬ ನಿರ್ವಹಣೆ ಜೊತೆಗೆ ತಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡುವಂತೆ ಹೇಳಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ ಮಾತನಾಡಿ,ಕಾರ್ಮಿಕರ ಕುರಿತು ಶಾಸಕ ಶರಣಗೌಡ ಕಂದಕೂರ ಅವರ ವಿಶೇಷ ಕಾಳಜಿಯ ಪರಿಣಾಮವಾಗಿ ನೊಂದಣಿಯಾದ ಕಾರ್ಮಿಕರಿಗೆ ಜ್ಯೇಷ್ಠತೆಯ ಆಧಾರದ ಮೇಲೆ ಕಿಟ್ ಗಳನ್ನು ವಿತರಿಸಲಾಗಿದೆ ಎಂದರು.

ಸಭೆಯಲ್ಲಿ ಕಾರ್ಮಿಕ ನಿರೀಕ್ಷಕ ಸಂಗೀತಾ ಹೊನ್ನೂರ,ಶಿವರಾಜ ಸೇರಿದಂತೆ ಪುರಸಭೆ ಅಧ್ಯಕ್ಷೆ ಜಯಶ್ರೀ ರಘುನಾಥರೆಡ್ಡಿ ಪಾಟೀಲ್,ಸೇರಿದಂತೆ ಪುರಸಭೆ ಸದಸ್ಯರಾದ ಬಾಲಪ್ಪ ದಾಸರಿ,ನರಸಪ್ಪ ಗಡ್ಡಲ್,ಮತ್ತು ಮುಖಂಡರಾದ ರಘುನಾಥರೆಡ್ಡಿ ಪಾಟೀಲ್,ಶರಣು ಅವಂಟಿ,ಪ್ರಕಾಶ ನೀರಟ್ಟಿ,ಹಾಗೂ ವಿವಿಧ ವೃತ್ತಿಯ ಕಾರ್ಮಿಕರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!