“ಸ್ವಸ್ತ ನಾರಿ, ಸಶಕ್ತ ಪರಿವಾರ್” ಅಭಿಯಾನ | ವೈದ್ಯಾಧಿಕಾರಿ ಡಾ.ವೆಂಕಟಮ್ಮ  ಅನಿಸಿಕೆ


ಗುರುಮಠಕಲ್ : ಆರೋಗ್ಯವಂತ ಕುಟುಂಬ ನಿರ್ವಹಣೆಯ ಜವಾಬ್ದಾರಿ ನಾರಿಯರ ಮೇಲೆ ಅವಲಂಬಿತವಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳಲು ಸರ್ಕಾರಗಳು ಹಲವು ಯೋಜನೆ ರೂಪಿಸಿವೆ ಎಂದು ವೈದ್ಯಾಧಿಕಾರಿ ಡಾಕ್ಟರ್ ವೆಂಕಟಮ್ಮ ಹೇಳಿದರು.

ತಾಲೂಕ ಆಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಮುದಾಯ ಆರೋಗ್ಯ ಕೇಂದ್ರ  ಇವರ ಸಂಯುಕ್ತ ಆಶ್ರಯದಲ್ಲಿ “ಸ್ವಸ್ತ ನಾರಿ, ಸಶಕ್ತ ಪರಿವಾರ್” ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ವೇಳೆ ಮಾತನಾಡಿದ ಅವರು, ಪ್ರಸ್ತುತ ಬೊಜ್ಜಿನಿಂದಾಗಿ ಹಲವರು ಬಳಲುತ್ತಿದ್ದಾರೆ. ಅದನ್ನು ನಿಯಂತ್ರಿಸಲು ಎಣ್ಣೆ ಖಾದ್ಯ ಹಾಗೂ ಸಕ್ಕರೆ ಖಾದ್ಯಗಳನ್ನು ಕಡಿಮೆ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಮಕ್ಕಳ ತಜ್ಞೆ ಡಾ. ಮೊಹಮ್ಮದ್ ರಹಿಸುದ್ದೀನ, ಸಿಡಿಪಿಓ  ಶರಣಬಸಪ್ಪ, ಡಾ. ಭಾಗರೆಡ್ಡಿ ಆರ್ ಬಿ ಎಸ್ ಕೆ, ವೈದ್ಯಾಧಿಕಾರಿ, ಪ್ರಶಾಂತ ಆರೋಗ್ಯ ನಿರೀಕ್ಷಣಾಧಿಕಾರಿ,  ರಾಕೇಶ್ ಆಪ್ತ ಸಮಾಲೋಚಕ ಆರ್ ಕೆ ಎಸ್ ಕೆ, ಶರಣಮ್ಮ, ರೇಣುಕಾ, ಬಸಲಿಂಗಮ್ಮ ಜೆಂಡರ್ಸ್ ಸ್ಪೆಷಲಿಸ್ಟ್ ಜಿಲ್ಲಾ ಮಹಿಳಾ ಸಬಲೀಕರಣ ಘಟಕ,  ಪ್ರಧಾನ ಮಂತ್ರಿ ವಂದನ ಯೋಜನೆ ಸಂಯೋಜಕಿ ಆಶಾಬೇಗ ಉಪಸ್ಥಿತರಿದ್ದರು. ಅಭಿಯಾನದಲ್ಲಿ ಮಹಿಳೆಯರಿಗೆ ಮಕ್ಕಳಿಗೆ ಮತ್ತು ಹದಿಹರೆಯದ ಯುವತಿಯರಿಗೆ ವೈದ್ಯಾಧಿಕಾರಿಗಳು ಆರೋಗ್ಯ ತಪಾಸಣೆಯನ್ನು ಮಾಡಿದರು.

Spread the love

Leave a Reply

Your email address will not be published. Required fields are marked *

error: Content is protected !!