ಯಾದಗಿರಿ: ನಗರದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯಾಲಯದಲ್ಲಿ ಯಾದಗಿರಿ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ರವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಉತ್ಸವವನ್ನು ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು, ಮತ್ತು ಗಾಂಧಿಜೀ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲ ರವರ ಭಾವಚಿತ್ರಕ್ಕೆ ಪೂಜೆೆ ಸಲ್ಲಿಸಿ ಪುಷ್ಪಾರ್ಚಾಣೆ ಮಾಡುವ ಮೂಲಕ ಗೌರವಿಸಿದರು.
‘ಹೈದರಾಬಾದ ಕರ್ನಾಟಕ ವಿಮೋಚನಾದಿನ’ವನ್ನು ‘ಕಲ್ಯಾಣ ಕರ್ನಾಟಕ ಉತ್ಸವ’ವನ್ನಾಗಿ ಆಚರಿಸಲಾಗುತ್ತಿದೆ. ಉತ್ಸವದ ಹೊಸ್ತಿಲಲ್ಲಿರುವ ಸಂದರ್ಭಲ್ಲಿ ಈ ಭಾಗದ ಜನಸಮಸ್ಯೆಗಳ ಸಂಕೋಲೆಯಿಂದ ಮುಕ್ತವಾದರೇ?’ ಅಭಿವೃದ್ಧಿಯ ಸುಳಿಗಾಳಿ ಬೀಸುತ್ತಿದೆಯೇ ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರವೇ ಸಿಗುತ್ತಿಲ್ಲ! ಅಭಿವೃದ್ಧಿ ಸಂಪೂರ್ಣ ಮರಿಚಿಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೇವಲ ಉತ್ಸವ ಮಾಡುವುದರಿಂದ ಅಭಿವೃದ್ಧಿಯಾಗದು ಈ ಸರ್ಕಾರ ಕಲ್ಯಾಣ ಕರ್ನಾಟಕದ ಭಾಗಕ್ಕೆ ಕಳೆದ ವರ್ಷಕ್ಕಿಂತ ಈ ಬಾರಿ ಜಿಲ್ಲಾವಾರು ಸಚಿವಸ್ಥಾನ ನೀಡಿ ಈ ಭಾಗದ ಶಾಸಕರಿಗೆ ಅತೀ ಹೆಚ್ಚು ಜವಾದ್ಬಾರಿಯನ್ನು ನೀಡಿರುವುದು ಸಂತಸದ ವಿಷಯ ಆದರೆ ಕೇವಲ ಸ್ಥಾನಕ್ಕೆ ಮಾತ್ರ ಸೀಮಿತವಾಗದೆ ಅಭಿವೃದ್ಧಿ ಕಡೆಗೆ ಗಮನ ಹರಿಸಬೇಕೆಂದು ಹೇಳಿದರು.
ನಿನ್ನೆ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಬುಹುದಿನ ಬೇಡಿಕೆಯಾದ ಪ್ರತ್ಯೇಕ ಸಚಿವಾಲಯಕ್ಕೆ ಅನುಮೋದನೆ ನೀಡಿದ್ದಕ್ಕೆ ಮುಖ್ಯಮಂತ್ರಿ ಮತ್ತು ಸಚಿವರಿಗೆ ಕರವೇ ಯಾದಗಿರಿ ಜಿಲ್ಲಾ ಘಟಕ ಅಭಿನಂದನೆ ಸಲ್ಲಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಸಂತೋಷಕುಮಾರ ನಿರ್ಮಲಕರ್, ಹಣಮಂತ ಅಚ್ಚೋಲಾ, ಭಿಮರಾಯ ರಾಮಸಮುದ್ರ, ನಾಗು ತಾಂಡೂರಕರ್, ಸುರೇಶ ಬೆಳಗುಂದಿ, ಜರ್ನಾಧನ ಬಡಿಗೇರಾ, ಸಾಗರ ಹುಲ್ಲೇರ, ಬಸವರಾಜ ಜಗನಾಥ, ಅಶೋಕ ಮುಂಡರಗಿ, ರಮೇಶ.ಡಿ.ನಾಯಕ, ಇನ್ನಿತರರು ಭಾಗಿಯಾಗಿದ್ದರು.
