ಟೌನ್ ಹಾಲ್ ಕಟ್ಟಡದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ತಾಲೂಕು ನ್ಯಾಯಾಲಯ ಕೆಲಸವನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮರುಳಸಿದ್ದರಾಧ್ಯ ಎಚ್.ಜೆ ಅವರು ಪರಿಶೀಲಿಸಿದರು | ಪಟ್ಟಣದ ಡಿಪೋ ಹತ್ತಿರ ತಾಲೂಕು ನ್ಯಾಯಾಲಯ ಕಟ್ಟಡ ನಿರ್ಮಾಣ ಸ್ಥಳ ವೀಕ್ಷಣೆ
ಗುರುಮಠಕಲ್ : ತಾಲೂಕು ನ್ಯಾಯಾಲಯ ಸ್ಥಾಪನೆಯ ಗುರುಮಠಕಲ್ ಜನರ ಕನಸು ನನಸಾಗುವ ದಿನ ಸನ್ನಿಹಿತವಾಗಿವೆ.
ಇಲ್ಲಿನ ಟೌನ್ ಹಾಲ್ ನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ತಾಲೂಕು ನ್ಯಾಯಾಲಯ ಫರ್ನಿಚರ್ ಸೇರಿ ಇತರೆ ಕೆಲಸಗಳು ಸಾಗಿದ್ದು, ಕಾಮಗಾರಿಯನ್ನು ಭಾನುವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮರುಳಸಿದ್ದರಾಧ್ಯ ಎಚ್.ಜೆ ಅವರು ಭೇಟಿ ನೀಡಿ ಪರಶೀಲನೆ ನಡೆಸಿದರು.
ಕೋರ್ಟ್ ಕೆಲಸಕ್ಕೆಂದೇ 40ಕಿ.ಮೀ ಪ್ರಯಾಣಿಸುವ ಗೋಜು ತಪ್ಪಲಿದೆ. ಅಲ್ಲದೇ ಶಾಶ್ವತ ಪರಿಹಾರ ಕಂಡುಕೊಳ್ಳಲು ಬಸ್ ಡಿಪೋ ಹತ್ತಿರದ ಸ್ಥಳ ಪರಿಶೀಲನೆ ಕಾರ್ಯವೂ ಆಗಿದೆ. ಗುರುಮಠಕಲ್ ನ್ಯಾಯಾಲಯ ಸೆಪ್ಟೆಂಬರ್ ತಿಂಗಳ ಉದ್ಘಾಟನಾ ಮಾಡಬೇಕು ಎನ್ನುವ ಕಾರ್ಯಯೋಜನೆ ಇದೆ ಎಂದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಸರ್ವ ಪ್ರಯತ್ನಗಳು ಸಾಗಿವೆ.
ಈ ಬಗ್ಗೆ ನ್ಯಾಯಾಧೀಶರು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ, ಸಮಗ್ರ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ತಹಶಿಲ್ದಾರರ ಶಾಂತಗೌಡ ಬಿರಾದರ್, ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ರವೀಂದ್ರ ಎಸ್.ಪಾಟೀಲ್, ಪುರಸಭೆ ಮುಖ್ಯಾಧಿಕಾರಿ ಭಾರತಿ ಸಿ ದಂಡೋತಿ, ಎಇಇ ಪರಶುರಾಮ, ರಾಜರಮೇಶ ಗೌಡ, ಸಿಪಿಐ ವೀರಣ್ಣ ದೊಡ್ಡಮನಿ, ಪುರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ, ವಕೀಲರಾದ ಸಾಬಣ್ಣ ಗಣಪುರ, ಆನಂದ ನಿರೇಟಿ, ಕೃಷ್ಣಾ ಮೇದಾ, ದೇವಿಂದ್ರಪ್ಪ ಎಂ, ಗುರುನಾಥರೆಡ್ಡಿ ಅನಪುರ,ಕೃಷ್ಣಪ್ಪ ಸಿರಿಗೇಂ, ಮೋಹನ ಗಜರೆ, ಪುರಸಭೆ ಸಿಬ್ಬಂದಿ, ಕಂದಾಯ ಇಲಾಖೆಯ ಸಿಬ್ಬಂದಿ ಸೇರಿದಂತೆ ಇತರರಿದ್ದರು.
