ತಾಲೂಕು ಕ್ರೀಡಾಂಗಣದಲ್ಲಿ  ದಸರಾ ಕ್ರೀಡಾಕೂಟ | ವಾಲಿಬಾಲ್ ಥ್ರೋ ಮಾಡಿದ ಶಾಸಕ ಶರಣಗೌಡ ಕಂದಕೂರ


ಗುರುಮಠಕಲ್ : ತಾಲೂಕಿನ ಕ್ರೀಡಾ ಪ್ರತಿಭೆಯನ್ನು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗುರುಮಠಕಲ್ ನಲ್ಲಿ ಹೈಟೆಕ್ ಕ್ರೀಡಾಂಗಣ ನಿರ್ಮಾಣ ಮಾಡುವ ಚಿಂತನಿಯಿದೆ ಎಂದು ಯೂಥ್ ಐಕಾನ್ ಶಾಸಕ ಶರಣಗೌಡ ಕಂದಕೂರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಪಟ್ಟಣದ ಕ್ರೀಡಾಂಗಣದಲ್ಲಿ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳ ಒಂದು ಹಂತದಲ್ಲಿ ಸಭೆ ಮಾಡಲಾಗಿದೆ ಎಂದರು.

ಈ ನಿಟ್ಟಿನಲ್ಲಿ ಅಧಿಕಾರಿಗಳು ಪಟ್ಟಣದ ಹೊರವಲಯದಲ್ಲಿ 5 ಎಕರೆ ಸ್ಥಳವನ್ನು ಗುರುತಿಸಿದರೇ ಸರ್ಕಾರದ ಮಟ್ಟದಲ್ಲಿ ಹೋರಾಡಿ ಅನುದಾನ ತರುವೆ ಎಂದು ಶಾಸಕರು ಹೇಳಿದರು.

ನಮ್ಮ ಭಾಗದ ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ಸೌಕರ್ಯ ಸಿಗಬೇಕಿದೆ. ರಾಜ್ಯ, ರಾಷ್ಟ್ರ , ಅಂತರ್ ರಾಷ್ಟ್ರ ಮಟ್ಟಕ್ಕೆ ನಮ್ಮವರು ಸ್ಪರ್ಧಿಸಬೇಕು ಹಾಗಾಗಿ ಅವರನ್ನು ಸಿದ್ಧ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.ಆಧುನಿಕತೆಯಲ್ಲಿ ಭರಾಟೆಯಲ್ಲಿ ದೈಹಿಕ ಆರೋಗ್ಯದ ಕುರಿತು ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕ್ರೀಡಾ ಇಲಾಖೆಯೂ ನಮ್ಮ ಭಾಗಕ್ಕೆ ಹೆಚ್ಚಿನ ಸೌಕರ್ಯ ನೀಡಬೇಕು ಎಂದು ಹೇಳಿದರು.

ಈ ಸಂಧರ್ಭದಲ್ಲಿ ಪುರಸಭೆ ಅಧ್ಯಕ್ಷೆ ಜಯಶ್ರೀ ಪಾಟೀಲ್, ಜಿಲ್ಲಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜುಬಾವಿಹಳ್ಳಿ, ಶಿಕ್ಷಣ ಸಂಯೋಜಕ ರವೀಂದ್ರ ಚೌಹನ್, ನರ್ಮದ, ಲಕ್ಷ್ಮೀಕಾಂತ ರೆಡ್ಡಿ ಪಾಟೀಲ್, ಅನೀಲ ಕುಮಾರ್, ಅಂಜನೇಯ, ಜ್ಯೋತಿಲತ, ಸಿಆರ್‌ಪಿ ಬಾಲಪ್ಪ, ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಶರಣು ಅವುಂಟಿ, ಬ್ಲಾಕ್ ಅದ್ಯಕ್ಷ ಪ್ರಕಾಶ ನೀರೆಟಿ, ಬಸಣ್ಣ ದೇವರಹಳ್ಳಿ, ರವೀಂದ್ರರೆಡ್ಡಿ ಗವೀನೋಳ, ಭೀಮರೆಡ್ಡಿ ಉಡಮಲಗಿದ್ದ, ರಾಜೇಶ್ವರರೆಡ್ಡಿ ಮತ್ತು ಪುರಸಭೆ ಸದಸ್ಯರು ಹಾಗೂ ಗಣ್ಯರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!