ಯಾದಗಿರಿ: ರಾಷ್ಟ್ರೀಯ ತೋಟಗಾರಿಕೆ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ದೆಹಲಿಯ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾದ ಸಿದ್ದಪ್ಪ ಎಸ್ ಹೊಟ್ಟಿ ಅವರಿಗೆ ಯಾದಗಿರಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಟ ಸಹಕಾರ ಸಂಘದ ವತಿಯಿಂದ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಲಯದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ನೇರವೆರಿಸಿ ಮಾತನಾಡಿದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಟ ಸಹಕಾರ ಸಂಘದ ಉಪಾಧ್ಯಕ್ಷ ಸ್ವಾಮಿದೇವ ದಾಸನಕೇರಿ, ಜಿಲ್ಲೆಯ ಪ್ರಾಥಮಿಕ ಸಹಕಾರ ಸಂಘಗಳು ಹಾಗೂ ತಾಲೂಕಿನ ಸಹಕಾರ ಸಂಘದಲ್ಲಿ ಗುರಿತಿಸಿಕೊಂಡಿದ್ದ ಸಿದ್ದಪ್ಪ ಹೊಟ್ಟಿ ದೇಶದ ರಾಜಧಾನಿ ದೆಹಲಿಯಲ್ಲಿರುವ ನೆಪೆಡ್ ಸಂಸ್ಥೆಯ ಉಪಾಧ್ಯಕ್ಷರಾಗಿ ಹಾಗೂ ರಾಷ್ಟ್ರೀಯ ತೋಟಗಾರಿಕೆ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆಯಾಗಿದ್ದು ನಮ್ಮ ಅತಿ ಹಿಂದುಳಿದ ಯಾದಗಿರಿ ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿದ್ದಪ್ಪ ಎಸ್ ಹೊಟ್ಟಿ, ನಾನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಹಾಗೂ ತಾಲೂಕು ಒಕ್ಕಲುತನ ಹುಟ್ಟವಳಿ ಮಾರಟ ಸಹಕಾರ ಸಂಘದ ಅಧ್ಯಕ್ಷರಾಗಿ ನಿರ್ದೇಶಕ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೇರಿ ಅನೇಕ ಸಂಘಗಳಲ್ಲಿ ಹುದ್ದೆಯನ್ನು ನಿಭಾಯಿಸಲು ನಿಮ್ಮೇಲ್ಲರ ಸಹಕಾರದಿಂದ ಸೇವೆ ಮಾಡುತ್ತಿದ್ದೇನೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ನಿರ್ದೇಶಕ ಗುಂಡೆರಾವ್ ಪಂಚಹೊತ್ರಿ, ಸಿದ್ದರಾಮರೆಡ್ಡಿ ಕೌಳೂರು, ಮಲ್ಲಿನಾಥ ಆಯರಕರ್, ಯಲ್ಲಪ್ಪ ಭೂತ, ಅಯ್ಯಣ್ಣಗೌಡ ಕ್ಯಾಸಪನಳ್ಳಿ, ರವಿಂದ್ರರೆಡ್ಡಿ, ಗೋವಿಂದಪ್ಪ, ಸಂಗಪ್ಪ ಅಕ್ಕಿ, ಸವಿತಾ, ಮಲ್ಲಾರೆಡ್ಡಿ, ಆರ್ ಮಾಹದೇವಪ್ಪಗೌಡ ಅಬ್ಬೆತುಮಕುರ, ಚೆನ್ನಪ್ಪ ಸಾಹು, ನೂರಂದಪ್ಪ ಲೇವಡಿ, ಚನ್ನಮಲ್ಲಿಕಾರ್ಜುನ ಅಕ್ಕಿ, ಚೆನ್ನಯ್ಯಸ್ವಾಮಿ, ವೀರಭದ್ರ ಜಾಕಮಠ, ಸೋಮಶೇಖರ್ ಮಣ್ಣೂರು, ರಾಜಶೇಖರ ಕಿಲ್ಲಣಕೇರಿ, ನಾಗೆಂದ್ರ ಜಾಜಿ, ನಾಗಪ್ಪ ಸಜ್ಜನ, ಸೂಗಪ್ಪ, ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಟ ಸಹಕಾರ ಸಂಘದ ವ್ಯವಸ್ಥಾಪಕ ಪ್ರಶಾಂತ ಹಂಚಾಟೆ, ದೊಡ್ಡಯ್ಯ ಸ್ವಾಮಿ ಬ್ಯಾಂಕ್ ಸಿಬ್ಬಂದಿ ವರ್ಗದವರು ಇದ್ದರು.
