ತಾಲೂಕು ಕೆಡಿಪಿ 6 ಜನ ನಾಮನಿರ್ದೇಶಿತ ಸದಸ್ಯರ ನೇಮಕ | ಮಾಜಿ ಸಚಿವ, ನಿಗಮ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಅವರಿಗೆ ಸನ್ಮಾನ
ಗುರುಮಠಕಲ್: ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ 20 ಅಂಶಗಳ ಕಾರ್ಯಕ್ರಮವೂ ಸೇರಿದಂತೆ ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ಯಾದಗಿರ ಜಿಲ್ಲೆಯ ಗುರುಮಠಕಲ ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಮಿತಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕಳಕಂಡವರನ್ನು ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನಗೊಳಿಸಿ ಆದೇಶಿಸಿದೆ.
ಬಸವರಾಜ ಟಿ. ರಾಯಕೋಟಿ ಚಂಡರಕಿ, ಕಾಶಪ್ಪ ಹೆಚ್. ಚಿನ್ನಕಾರ, ಸೈಯದ ಬಾಬ ಗುರುಮಠಕಲ, ಮಲ್ಲಮ್ಮ ಬನ್ನಪ್ಪ ಕಣೆಕಲ, ಅರುಣ ಶಿವರಡ್ಡಿ ಹೊರುಂಚಾ, ತಿಪ್ಪಣ್ಣ ಯಾದವ ತಂದೆ ಸಣ್ಣ ಸಾಬಯ್ಯ ಮೊಟನಹಳ್ಳಿ ಅವರು ನೇಮಕವಾಗಿದ್ದಾರೆ.
ಸದಸ್ಯರು ಮಾಜಿ ಸಚಿವ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಅವರನ್ನು ಕಲಬುರಗಿ ನಿವಾಸದಲ್ಲಿ ಭೇಟಿಯಾಗಿ ಸನ್ಮಾನಿಸಿದರು.
