ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಭಕ್ತಿ, ಸಂಭ್ರಮದಿಂದ ಆಚರಿಸುವುದು ಹಿಂದೂ ಸಂಪ್ರದಾಯವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ದಾಮೋಧರನ ಜನುಮ ದಿನ ಶ್ರದ್ಧಾ,ಭಕ್ತಿಯಿಂದ ಆಚರಿಸಲಾಗುತ್ತಿದೆ.
ಈ ಹಬ್ಬವು ನಂಬಿಕೆ, ಸಂತೋಷ ಮತ್ತು ಸಾಂಸ್ಕೃತಿಕ ಒಗ್ಗಟ್ಟಿನ ಸಂಕೇತವಾಗಿದೆ. ಭಗವಾನ್ ಶ್ರೀಕೃಷ್ಣನ ಜನ್ಮದಿನ ದೇಶದಾದ್ಯಂತ ಭಕ್ತಿ, ಭಜನೆ, ಕೀರ್ತನೆ ಮತ್ತು ಮೊಸರಿನ ಮಡಿಕೆ ಹೊಡೆತ ಕಾರ್ಯಕ್ರಮಗಳೊಂದಿಗೆ ಸಂಭ್ರಮಿಸಲಾಗುತ್ತದೆ.

ಗುರುಮಠಕಲ್: ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಪಬ್ಲಿಕ್ ಸ್ಕೂಲ್ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಶ್ವರ ರೆಡ್ಡಿ, ಕಾರ್ಯದರ್ಶಿ ಮೋಹನ ಚಮಕುರ , ಉಪಾಧ್ಯಕ್ಷೆ ವಿನಿತಾ ಎಸ್ ರೆಡ್ಡಿ, ಮುಖ್ಯ ಗುರು ಝೀನತ ಬೇಗಂ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಇದೇ ವೇಳೆ ಗುರುಮಠಕಲ್ ಪಟ್ಟಣದ ಹಲವು ಪಾಲಕರು ತಮ್ಮ ಮಕ್ಕಳಿಗೆ ಶ್ರೀ ಕೃಷ್ಣ, ರಾಧೆಯರ ವೇಷಭೂಷಣದಲ್ಲಿ ಸಿದ್ಧಗೊಳಿಸಿ ಸಂಭ್ರಮಪಟ್ಟಿದ್ದು ಕಂಡು ಬಂತು.
