ಗುರುಮಠಕಲ್ ನಲ್ಲಿ ಯಾದವ ಸಮಾಜದಿಂದ ವೈಭವದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ
ಗುರುಮಠಕಲ್: ಇಂದಿನ ಯುವ ಪೀಳಿಗೆಗೆ ಧರ್ಮ ಜ್ಞಾನ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಹಿಂದೂ ಸಮಾಜ ಜಾಗೃತರಾಗಬೇಕು ಎಂದು ನಾಗಭೂಷಣ ಆವುಂಟಿ ಕರೆ ನೀಡಿದರು.
ಪಟ್ಟಣದ ಉಪ್ಪರಗಡ್ಡ ಓಣಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶ್ರೀ ಕೃಷ್ಣ ಭಗವಂತನ ಲೀಲೆ ಅಪಾರವಾಗಿದೆ. ಅಧರ್ಮ ಅಳಿಸಿ ಧರ್ಮವನ್ನು ಉಳಿಸಲು ಭಗವಂತ ಯಾರ ರೂಪದಲ್ಲಿ ಜನ್ಮತಾಳುತ್ತಾನೆ ಎಂಬುದು ತಿಳಿದಿಲ್ಲ ಎಂದರು.
ಐತಿಹಾಸಿಕ ಸಾವಿರಾರು ವರ್ಷಗಳ ಇತಿಹಾಸವಿರುವ ಹಿಂದುಗಳು ನಮ್ಮ ಧರ್ಮ, ಆಚರಣೆಗಳು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಈ ವೇಳೆ ನರಸರೆಡ್ಡಿ ಗಡ್ಡೆಸೂಗುರು, ನವಾಜರೆಡ್ಡಿ ಪೋ.ಪಾಟೀಲ್, ರೇಣುಕ ಪಡಿಗೆ, ರವಿ ಗವಿನೋಳ, ನರಸಪ್ಪ ಗಡ್ಡಲ್, ರಮೇಶ್ ತಾಂಡುರಕರ್, ಚಂದುಲಾಲ್ ಚೌದ್ರಿ, ಶರಣಪ್ಪ ಹೂಗಾರ್, ಮಲ್ಲಿಕಾರ್ಜುನ ಯಾದವ್ ಎಇಇ ಹಾಗೂ ಸಮಾಜದ ತಾಲೂಕು ಅಧ್ಯಕ್ಷರು ಯಲ್ಲಪ್ಪ ಯಾದವ್, ರಾಮಕೃಷ್ಣ ಯಾದವ್ ಹಾಗೂ ಸಮಾಜದ ಗಣ್ಯರು, ಮಹಿಳೆಯರು, ಯುವಕರು ಭಾಗವಹಿಸಿದ್ದರು.
