ತಾಲೂಕಿನ ಕಾಡಂಗೇರಾ (ಬಿ)ಯಲ್ಲಿ 2 ತಾಸು ಸುರಿದ ಮಳೆ | ರಸ್ತೆ ದಾಟಲು ಹೈರಾಣು | ಮನೆಗಳಿಗೆ ನುಗ್ಗಿದ ನೀರು
ವಡಗೇರಾ: ತಾಲೂಕಿನ ಕಾಡಂಗೇರಾ ಬಿ ಸೇರಿದಂತೆ ಹಲವು ಕಡೆ ಗುರುವಾರ ಸುರಿದ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗ್ಂಡು ಗ್ರಾಮೀಣ ಭಾಗದ ಜನರು ಸಾಕಷ್ಟು ಪರದಾಡುವಂತಾಯಿತು.
ಈ ಹಿಂದೆ ಸುರಿದ ಮಳೆಯಿಂದ ಸಾಕಷ್ಟು ಬೆಳೆ ಹಾನಿಯಾಗಿ ಸಂಕಷ್ಟ ದಲ್ಲಿರುವ ರೈತರ ಗಾಯದ ಮೇಲೆ ಬರೆ ಎಳೆದಂತೆ ಮಳೆರಾಯಾ ಇನ್ನಷ್ಟು ಸಂಕಷ್ಟಕ್ಕೆ ದೂಡಿದ್ದಾನೆ.
ಸಂಜೆ 4ಗಂಟೆ ವರೆಗೆ ಸುತ್ತ 2 ತಾಸು ಸುರಿದ ಧಾರಾಕಾರ ಮಳೆಯಿಂದ ರಸ್ತೆ ತುಂಬೆಲ್ಲಾ ನೀರು ಹರಿಯುತ್ತಿತ್ತು, ಇನ್ನು ಶಾಲೆ ಕಾಲೇಜುಗಳಿಂದ ಹಿಂತಿರುಗುವ ಮಕ್ಕಳಿಗೆ ಶಾಕ್ ಕಾದಿತ್ತು.
ಯಾವುದಪ್ಪ ರಸ್ತೆ..? ಈ ನೀರಿನ ರಭಸದಲ್ಲಿ ಹೇಗೆ ಮನೆಗೆ ಸೇರಬೇಕು ಎನ್ನುವ ಆತಂಕದಲ್ಲಿದ್ದ ಶಾಲಾ ಮಕ್ಕಳನ್ನು ಗ್ರಾಮದ ಕೆಲವರು ಧೈರ್ಯ ಮಾಡಿ ರಸ್ತೆ ದಾಟಿಸುತ್ತಿರುವುದು ಕಂಡು ಬಂತು.
ಅಲ್ಲದೇ ಮಳೆ ನೀರು ನುಗ್ಗಿ ಹಾನಿಯಾದ ಕುರಿತು ಅಧಿಕಾರಿಗಳು ಸಮರ್ಪಕವಾಗಿ ಪರಿಶೀಲನೆ ನಡೆಸಿ, ಸೂಕ್ತ ಪರಿಹಾರ ಒದಗಿಸಲು ಮುಂದಾಗಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ. ಇನ್ನು ಮಳೆಯಿಂದ ಮನ ಗೆ ನೀರು ನುಗ್ಗಿದ್ದಕ್ಕೆ ಅಜ್ಜಿಯೊಬ್ಬರು ಕೈಜೋಡಿಸಿ ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿದೆ
