ಸಾರ್ವಜನಿಕರ ಸಂಚಾರ ಮಾರ್ಗ ಬದಲಾವಣೆ ಸೂಚನೆ | 3 ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಯಾದಗಿರಿ : 2025ರ ಜೂನ್ 14 ರಂದು ಕರ್ನಾಟಕ ಸರ್ಕಾರ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ, ಹಾಗೂ ಎ.ಐ.ಸಿ.ಸಿ ಅಧ್ಯಕ್ಷರು ಮತ್ತು ರಾಜ್ಯ ಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಯಾದಗಿರಿ ನಗರಕ್ಕೆ ಆಗಮಿಸಿ, ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಆರೋಗ್ಯ ಆವಿಷ್ಕಾರ್ ಯೋಜನೆಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮದ ಸಮಯದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಮಾರ್ಗವನ್ನು ಬದಲಾವಣೆ ಮಾಡಿ ಆದೇಶವನ್ನು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ಹೊರಡಿಸಿದ್ದಾರೆ.
ಶಹಾಪೂರ ಮತ್ತು ಸುರಪುರ ಕಡೆಯಿಂದ ಕಲಬುರಗಿಗೆ ಹೋಗುವ ವಾಹನಗಳು ಸುಭಾಷ ವೃತ್ತ, ಶಾಸ್ತಿç ವೃತ್ತ, ಕನಕ ಸರ್ಕಲ್, ಹತ್ತಿಕುಣಿ ಕ್ರಾಸ್, ಗಂಗಾನಗರ, ಬೈ ಪಾಸ್ ಮುಖಾಂತರ ಮುದ್ನಾಳ ಕ್ರಾಸ್‌ಗೆ ಹೋಗಿ ಮುಖ್ಯ ರಸ್ತೆಯ ಮೂಲಕ ಕಲಬುರಗಿಗೆ ಹೋಗಬೇಕು.
ರಾಯಚೂರು ಕಡೆಯಿಂದ ಕಲಬುರಗಿ ಕಡೆಗೆ ಹೋಗುವ ವಾಹನಗಳು ಶಾಸ್ತಿç ವೃತ್ತ, ಕನಕ ಸರ್ಕಲ್, ಹತ್ತಿಕುಣಿ ಕ್ರಾಸ್, ಗಂಗಾನಗರ ಬೈ ಪಾಸ್ ಮುಖಾಂತರ ಮುದ್ನಾಳ ಕ್ರಾಸ್‌ಗೆ ಹೋಗಿ ಮುಖ್ಯ ರಸ್ತೆಯ ಮೂಲಕ ಕಲಬುರಗಿಗೆ ಹೋಗಬೇಕು.
ಕಲಬುರಗಿ ಕಡೆಯಿಂದ ರಾಯಚೂರು, ಹೈದ್ರಾಬಾದ್ ಹಾಗೂ ಶಹಾಪೂರ ಕಡೆಗೆ ಹೋಗುವ ವಾಹನಗಳು ಮುದ್ನಾಳ ಕ್ರಾಸ್, ಗಂಗಾನಗರ ಕ್ರಾಸ್, ಹತ್ತಿಕುಣಿ ಕ್ರಾಸ್, ಕನಕ ಸರ್ಕಲ್, ಶಾಸ್ತಿç ವೃತ್ತ, ಮಾರ್ಗವಾಗಿ ಹೋಗಬೇಕು.
ಕಾರ್ಯಕ್ರಮದ ಸಮಯದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಸುಗಮ ಸಂಚಾರ ದೃಷ್ಠಿಯಿಂದ ಮೋಟಾರು ವಾಹನ ನಿಯಮಗಳು 1989ರ ನಿಯಮಗಳಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ 2025ರ ಜೂನ್ 14 ರಂದು ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆಯ ವರೆಗೆ ಮಾರ್ಗವನ್ನು ಬದಲಾವಣೆ ಮಾಡಿ ಆದೇಶಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾನ್ ಬೋಸ್ಕೋ ಸೇರಿ ಮೂರು ಶಾಲೆ-ಕಾಲೇಜಿಗೆ ರಜೆ ಘೋಷಣೆ : ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಆರೋಗ್ಯ ಅವಿಷ್ಕಾರ ಕಾರ್ಯಕ್ರಮಕ್ಕೆ ಗಣ್ಯರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರ ಆಗಮನ ಹಿನ್ನೆಲೆಯಲ್ಲಿ ಜನಸಂದಣಿ ಉಂಟಾಗುವ ಸಂಭವ ಇರುವುದರಿಂದ ಮಕ್ಕಳ ಹಿತದೃಷ್ಠಿಯಿಂದ ಕ್ರೀಡಾಂಗಣದ ಸಮೀಪ ಇರುವ ಡಾನ್ ಬೋಸ್ಕೋ, ಆರ್.ವಿ.ಎನ್ ಹಾಗೂ ಸೆಂಚುರಿಯನ್ ಶಾಲೆ-ಕಾಲೇಜುಗಳಿಗೆ ಜೂನ್ 14 ರಂದು ರಜೆ ಘೋಷಿಸಲಾಗಿದೆ ಎಂದು ಯಾದಗಿರಿ ಡಿ.ಡಿ.ಪಿ.ಐ ತಿಳಿಸಿದ್ದಾರೆ.
ಸದರಿ ರಜಾ ದಿನದ ಶಾಲಾ ಅವಧಿಯನ್ನು ಮುಂಬರುವ ಶನಿವಾರದಂದು ಪೂರ್ಣ ದಿನ ಶಾಲಾ-ಕಾಲೇಜು ನಡೆಸಿ ಸರಿದೂಗಿಸುವಂತೆ ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ.
