ಪ್ರಧಾನಿ‌ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ 11ವರ್ಷ | ಜಿಲ್ಲೆಯಲ್ಲಿ “ವಿಕಸಿತ ಭಾರತದ ಅಮೃತ ಕಾಲ” ಹೆಸರಲ್ಲಿ ಹಲವಾರು ಕಾರ್ಯಕ್ರಮಗಳ ಆಯೋಜನೆ |ಮಾಜಿ ಸಂಸದ ಜಾಧವ್, ಮಾಜಿ ಎಂಎಲ್ ಸಿ ಪಾಟೀಲ್ ರಿಂದ ಮಾಹಿತಿ

ಯಾದಗಿರಿ : ಕಳೆದ 11 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಹಲವು ದಶಕಗಳ ಜಡತ್ವ ಮುರಿದು ದಿಟ್ಟ ನಿರ್ಧಾರಗಳ ಮೂಲಕ ವಿಕಸಿತ ಭಾರತಕ್ಕೆ ಭದ್ರ ಬುನಾದಿ ಹಾಕಿದ ಹಿನ್ನಲೆಯಲ್ಲಿ ಜಿಲ್ಲೆಯ ಪ್ರತಿಯೊಬ್ಬರಿಗೂ ಕೇಂದ್ರ ಸರ್ಕಾರದ ಸಾಧನೆ, ಅಭಿವೃದ್ಧಿ ಕೆಲಸಗಳ ಬಗ್ಗೆ ತಿಳಿಹೇಳಲು ಜೂ 23 ರವರೆಗೆ ವಿವಿಧ ಕಾರ್ಯಕ್ರಮಗಳು ಜಿಲ್ಲಾ, ತಾಲೂಕು, ಮಂಡಲ ಮತ್ತು ಬೂತ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಂಸದ ಉಮೇಶ ಜಾದವ್, ಮಾಜಿ ಎಂಎಲ್ ಸಿ ಅಮರನಾಥ ಪಾಟೀಲ್ ತಿಳಿಸಿದ್ದಾರೆ.

ಬುಧವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಕಸಿತ ಭಾರತದ ಅಮೃತ ಕಾಲ ಮತ್ತು ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣಕ್ಕೆ 11 ವರ್ಷ ಎಂಬ ಘೋಷಣೆಯಡಿ ಕಳೆದ ಜೂ.9ರಿಂದಲೇ ಎಲ್ಲಡೆ ಕಾರ್ಯಕ್ರಮಗಳು ಆರಂಭಗೊಂಡಿವೆ.

ಅದೇ ತೆರನಾಗಿ ಜಿಲ್ಲೆಯಲ್ಲಿ ಮಾಡಬೇಕಾದ ಕೆಲಸ, ಕಾರ್ಯಗಳ ಬಗ್ಗೆ ಇಂದು ಪಕ್ಷದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಪದಾಧಿಕಾರಿಗಳ, ಮುಖಂಡರ, ಪ್ರಮುಖರ ಜೊತೆ ಸಮಗ್ರ ಚರ್ಚೆ ನಡೆಸಿ ನಿಗದಿ ಪಡಿಸಿರುವ ದಿನಾಂಕಗಳಂದು ಕಾರ್ಯಕ್ರಮಗಳು ನಡೆಸುವ ಮೂಲಕ‌ ಕೇಂದ್ರ ಸರ್ಕಾರದ ಪ್ರತಿಯೊಂದು ಸಾಧನೆ ಮತ್ತು ಅಭಿವೃದ್ಧಿ ಕೆಲಸಗಳ ಬಗ್ಗೆ ಜನತೆಗೆ ತಿಳಿಸುವ ಯಶಸ್ಸಿಗೊಳಿಸಲಾಗುವುದೆಂದರು.

ಈಗಾಗಲೇ ರಾಜ್ಯ ಕಾರ್ಯಾಗಾರ, ಜಿಲ್ಲಾ ಮಟ್ಟದ ತಂಡ ರಚನೆ ಹಾಗೂ ಕಾರ್ಯಗಾರ, ಜಿಲ್ಲಾ ಕಾರ್ಯಾಗಾರ, ಮಂಡಲ ಮಟ್ಟದ ತಂಡ ರಚನೆ ಹಾಗೂ ಕಾರ್ಯಾಗಾರ ಜೂ.7 ರಿಂದ 10 ರವರೆಗೆ ನಡೆದಿವೆ. ಜೂ 9 ರಿಂದ ಆರಂಭಗೊಂಡ ಡಿಜಿಟಲ್ ಸ್ಪರ್ಧೆ ಬದಲಾಗುತ್ತಿರುವ ಭಾರತ ನನ್ನ ಅನುಭವ ವಿವಿಧ ಮೂರು ನಮೂನಿಯ ಕಾರ್ಯಕರ್ಮಗಳು ಜುಲೈ 9 ರವರೆಗೂ ನಡೆಯಲಿವೆ ಎಂದು ಅವರು ಹೇಳಿದರು.

ಜೂ.12 ರಿಂದ 14 ರವರೆಗೆ ಮಂಡಲ ಮಟ್ಟದಲ್ಲಿ ವಿಕಸಿತ ಭಾರತ ಸಂಕ್ಪಲ ಸಭೆ ಆಯೋಜನೆ. ಇದರಲ್ಲಿ ನಮ್ಮ ಪಾತ್ರ, 11 ವರ್ಷಗಳ ಸಾಧನೆಗಳ ಕುರಿತು ಚರ್ಚೆ ಮತ್ತು ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ನಡೆಯಲಿದೆ. ಜೂ 17ರಿಂದ 21 ರವರೆಗೆ ವಿಶ್ವ ಯೋಗ ದಿನದಂಗವಾಗಿ ಜಿಲ್ಲೆಯ ಎಲ್ಲ ಮಂಡಲಗಳಲ್ಲಿ ಯೋಗ ಶಿಬಿರ ಆಯೋಜನೆ ಮತ್ತು ಪ್ರತಿಯೊಂದು ಮಂಡಲದಲ್ಲೂ ಕನಿಷ್ಠ ಒಂದು ಕಾರ್ಯಕ್ರಮ ಮಾಡಲಾಗುವುದೆಂದು ಜಾಧವ್ ಮತ್ತು ಪಾಟೀಲ್ ವಿವರಿಸಿದರು.

ಜೂ 15ರಿಂದ 17ರವರೆಗೆ ಗ್ರಾಮ, ವಾರ್ಡ, ಶಕ್ತಿಕೇಂದ್ರ, ಬೂತ್ ಮಟ್ಟದ ಪ್ರತಿಯೊಂದರಲ್ಲಿ ಸಭೆಗಳು, ನಗರ ಪ್ರದೇಶದಲ್ಲಿ ಮಹಿಳಾ ಸಭೆಗಳು, ಗ್ರಾಮೀಣ ಪ್ರದೇಶದಲ್ಲಿ ಗ್ರಾಮಸಭೆಗಳು ಆಯೋಜಿಸಲಾಗುವುದು. ಇಲ್ಲಿ 11 ವರ್ಷಗಳ ಸಾಧನೆಗಳಾದ ಆಯುಷ್ಮಾನ್ ಯೋಜನೆ ಅಡಿಯಲ್ಲಿ ಶೇ.100 ರಷ್ಟು ಹಿರಿಯ ನಾಗರಿಕರಿಗೆ ನೊಂದಣಿ ಮತ್ತು ಕಾರ್ಡ ವಿತರಣೆ. ವಿಕಸಿತ ಭಾರತದ ನಿರ್ಮಾಣದಲ್ಲಿ ಸಕ್ರಿಯರಾಗುವ ಸಂಕಲ್ಪ ಸ್ವೀಕರಣೆ, ಪ್ರತಿ ಸಭೆಯಲ್ಲಿ ಕನಿಷ್ಟ 5 ಜನ ಫಲಾನುಭವಿಗಳ ಅನುಭವದ ವಿಡಿಯೊ ದಾಖಲಿಸುವುದು ಮತ್ತು ಸೋಶಿಯಲ್ ಮೀಡಿಯಾದಲ್ಲಿ ಹಂಚುವುದು, ಕೇಂದ್ರ ಸರ್ಕಾರದ 11 ವರ್ಷಗಳ ಸಾಧನೆಗಳ ಸಾಹಿತ್ಯವನ್ನು ಮನೆ,ಮನೆಗೆ ವಿತರಿಸುವ ಕೆಲಸ ನಡೆಯಲಿದೆ ಎಂದು ಅವರು ಹೇಳಿದರು. ವಿವಿಧ ಮಟ್ಟದಲ್ಲಿ ಪಕ್ಷದ ನಾಯಕರುಗಳು ಪ್ರವಾಸ ಪ್ರವಾಸ ಮಾಡಿ ಈ ಬಗ್ಗೆ ತಿಳಿಸುವ ಕೆಲಸ ಜಿಲ್ಲೆಯಲ್ಲಿ ನಡೆಯಲಿದೆ. ಈ ನಡುವೆ ಸಸಿ ನೆಡುವ ಕಾರ್ಯಕ್ರಮ ಹಾಗೂ ಬೀಜದ ಉಂಡೆಗಳನ್ನು ಬಿತ್ತುವ ಕಾರ್ಯ ಹಾಗೂ ತಾಯಿಯ ಹೆಸರಲ್ಲಿ ಒಂದು ಸಸಿ ಅಭಿಯಾನವು ಸಾಗಿದೆ ಎಂದರು.

ಜೂ 23 ರಂದು ಬೂತ ಮಟ್ಟದಲ್ಲಿ ಡಾ. ಶ್ಯಾಮ ಪ್ರಸಾದ ಮುಖರ್ಜಿ ಬಲಿದಾನ ದಿನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೂ 25 ರಂದು ತುರ್ತು ಪರಸ್ಥಿತಿ ದಿನದಂಗವಾಗಿ ಜಿಲ್ಲಾ ಮಟ್ಟದಲ್ಲಿ ವಿಚಾರ ಸಂಕಿರಣ, ತುರ್ತು ಪರಸ್ಥಿತಿ ಹೋರಾಟಗಾರರ ಮತ್ತು ಅದರಲ್ಲಿ ಭಾಗಿಯಾಗಿದವರ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಡಿದ ಮಹನೀಯರಿಗೆ ಗೌರವ ಸನ್ಮಾನ, ಕಾಲೇಜು ವಿದ್ಯಾರ್ಥಿಗಳನ್ನು ಆದ್ಯತೆಯನ್ನಾಗಿಸಿಕೊಂಡು ತುರ್ತು ಪರಸ್ಥಿತಿ ಕುರಿತ ಕಾರ್ಯಕ್ರಮವನ್ನು ಅಯೋಜಿಸಲಾಗುವುದೆಂದು ಮಾಜಿ ಸಂಸದ ಉಮೇಶ ಜಾಧವ್ ಮತ್ತು ಮಜಿ ಎಂಎಲ್ ಸಿ ಅಮರನಾಥ ಪಾಟೀಲ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ  ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಮಾಜಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ, ರಾಜ್ಯ ಕಾರ್ಯದರ್ಶಿ ಮತ್ತು ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ್, ಯುವ‌ ಮುಖಂಡ ಮಹೇಶರಡ್ಡಿ ಮುದ್ನಾಳ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗುರು ಕಾಮಾ, ಪರಶುರಾಂ ಕುರಕುಂದಾ, ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ದೇವೆಂದ್ರನಾಥ ನಾದ್, ಜಿಪಂ ಮಾಜಿ ಸದಸ್ಯ ದೇವರಾಜ್ ನಾಯಕ್, ಮಾಜಿ ರಾಜ್ಯ ಕಾರ್ಯದರ್ಶಿ ನಾಗರತ್ನ ಕುಪ್ಪಿ, ಜಿಲ್ಲಾ ಸಂಯೋಜಕ ರಾಜುಗೌಡ ಉಕ್ಕಿನಾಳ್, ಜಿಲ್ಲಾ ಬಿಜೆಪಿ ವಕ್ತಾರ ಹಣಮಂತ ಇಟಗಿ, ಜಿಲ್ಲಾ ಮಾಧ್ಯಮ ಸಂಚಾಲಕ ವಿರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ ಸೇರಿದಂತೆ ಇತರರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!