ಮಹಿಳೆಯೊಬ್ಬರಿಂದ ಬೆಟ್ಟದಹಳ್ಳಿ ತಾಂಡಾದಲ್ಲಿ ಅಳಲು | ಸಾಕಷ್ಟು ಸಾಲ ಆಗಿದೆ, ಮಳೆಯಿಲ್ಲ | ಕುಟುಂಬ ನಡೆಸುವುದು ಕಷ್ಟವಾಗಿದೆ ಎಂದ ಮಹಿಳೆ

ಯಾದಗಿರಿ: ಸಾಲ ಮನ್ನಾ ಮಾಡಲು ರಾಜ್ಯದ ಒಬ್ಬನೇ ಗಂಡು ಮಗ ಕುಮಾರಣ್ಣ, ಆತ ಬಂದ್ರೇ ಸಾಲ ಮನ್ನಾ ಆಗುತ್ತೆ ಎಂದು ಆಡು ಭಾಷೆಯಲ್ಲಿಯೇ ಸ್ವಲ್ಪ ತಾಳಿ ಎಂದು ಮಹಿಳೆಯರಿಗೆ ಶಾಸಕ ಶರಣಗೌಡ ಕಂದಕೂರ ಸಮಾಧಾನ ಹೇಳಿದರು.

ಗುರುಮಠಕಲ್ ಮತಕ್ಷೇತ್ರದಲ್ಲಿ ಬೆಟ್ಟದಹಳ್ಳಿ ತಾಂಡಾದಲ್ಲಿ ಮಹಿಳೆಯರು ಸಾಲ ಆಗಿದೆ. ಇದರಿಂದ ಕುಟುಂಬ ನಿರ್ವಹಣೆಯೂ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡ ವೇಳೆ ಮಾತನಾಡಿದ ಅವರು, ಎಲ್ಲಿಯವರೆಗೆ ಫ್ರೀ ತಗೊತೀವಿ ಅಲ್ಲಿಯವರೆಗೆ ಸಮಸ್ಯೆ ಇರುವುದೇ, ಜನ ಜಾಗೃತಿ ಆಗುವವರೆಗೆ ಬದಲಾವಣೆ ಆಗಲ್ಲ, ಅಲ್ಲಿಯ ವರೆಗೆ ವ್ಯವಸ್ಥೆ ಬದಲಾಗಲ್ಲ ಎಂದರು.

50 ವರ್ಷಗಳಿಂದ ಯಾರು ನಿಮ್ಮ ಸಮಸ್ಯೆ ಕೇಳಿಲ್ಲ, ಮುಂದೆ ಯಾರು ಕೇಳಲ್ಲ. ಕೇಳುವವನು ಬಂದಿರುವೆ ಸಮಾಧಾನದಿಂದ ಹೇಳಿ ಕೇಳಿ ಪರಿಹರಿಸಲು ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.

ರಾಜಕೀಯವಾಗಿ ಯಾರನ್ನು ಟೀಕೆ ಮಾಡಲ್ಲ, ಏನಾದರೂ ಮಾಡಲು ಸರ್ಕಾರ ಅನುದಾನ ಕೊಡಬೇಕು, ಯಾರು ಇಲ್ಲಿಂದ ಬೆಳೆದು ಹೋಗಿದ್ದಾರೆ ಅವರು ಅನುಮಾನವೇ ನೀಡುತ್ತಿಲ್ಲ ಅದು ಸಮಸ್ಯೆಯಾಗಿದೆ ಎಂದು ಜನರೆದುರು ಹೇಳಿದರು.

ಕಾಲಕ್ಕೆ ತಕ್ಕಂತೆ ಜನರು ಬದಲಾಗಬೇಕು, ಗ್ರಾ.ಪಂ. ಅಧಿಕಾರಿಗಳು ಜನರ ಸಮಸ್ಯೆಗಳು ಬಗೆಹರಿಸುವ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಸೂಚನೆ ನೀಡಿದರು.

Spread the love

Leave a Reply

Your email address will not be published. Required fields are marked *

error: Content is protected !!