ದುರ್ಗಾ ನಗರದಲ್ಲಿ ಸ್ಫೋಟದಿಂದ ಮನೆ ಬೆಂಕಿಗಾಹುತಿ
ಯಾದಗಿರಿ: ಕೂಲಿ ಕೆಲಸ ಮಾಡಿ ನೆಮ್ಮದಿ ಬದುಕು ಸಾಗಿಸುತ್ತಿದ್ದ ಕುಟುಂಬ, ಹೊಸ ಮನೆಯ ಗೃಹ ಪ್ರವೇಶ ಮಾಡಲು ಮುಂದಾಗಿದ್ರು. ಆದರೆ, ಹಳೆಯ ಮನೆಯು ಈಗ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಸಂಪೂರ್ಣ ಸುಟ್ಟು ಕರಕಲಾಗಿದೆ.
ಯಾದಗಿರಿಯ ದುರ್ಗಾ ನಗರದ ಶನಿವಾರ ಘಟನೆ ಜರುಗಿದೆ. ಮಲ್ಲಯ್ಯ ಹಾಗೂ ಅಕ್ಕಮ್ಮ ದಂಪತಿಗಳು ವಾಸ ಮಾಡುತ್ತಿದ್ದ ಶೇಡ್ ಮನೆಯು ಬೆಂಕಿ ಗಾಹುತಿಯಾಗಿದೆ. ಮನೆಯಲ್ಲಿಟ್ಟಿರುವ 7 ಲಕ್ಷ ರೂಪಾಯಿ ಹಣ,100 ಗ್ರಾಂ ಚಿನ್ನ,150 ಗ್ರಾಂ ಬೆಳ್ಳಿಯು ಸುಟ್ಟು ಕರಕಲಾಗಿದೆ. ಮನೆಯಲ್ಲಿಟ್ಟಿರುವ ಆಹಾರ ಧಾನ್ಯ ಸೇರಿ ಬೆಲೆ ಬಾಳುವ ವಸ್ತುಗಳು ಹಾನಿಯಾಗಿವೆ.ಮಲ್ಲಯ್ಯ ಹಾಗೂ ಅಕ್ಕಮ್ಮ ದಂಪತಿಗಳು ಈಗ ಕಣ್ಣೀರಲ್ಲಿ ತೊಳೆಯುತ್ತಿದ್ದಾರೆ.
ಮನೆಯಿಂದ ದಂಪತಿಗಳು ಹೊರಗಡೆ ತೆರಳಿದಾಗ ಈ ಘಟನೆ ಜರುಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿ ಗಿರೀಶ್ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮನೆ ಸುಟ್ಟ ಹಿನ್ನೆಲೆ ದಂಪತಿಗಳು ಕಣ್ಣೀರು ಹಾಕುವಂತಾಗಿದೆ. ಹೆಚ್ಚಿನ ಪರಿಹಾರ ನೀಡುವಂತೆ ಒತ್ತಾಯ ಮಾಡಿದ್ದಾರೆ.
ಈ ವೇಳೆ ಕಂದಾಯ ಅಧಿಕಾರಿ ಗಿರೀಶ್ ,ನಿಂಗಣ್ಣ ಜಾಲಗಾರ, ಬಸವರಾಜ ಸೇರಿದಂತೆ ಅನೇಕರು ಇದ್ದರು.
