ಮೃತ ಪತಂಗೆ ಮನೆಗೆ ಶಾಸಕ ಶರಣಗೌಡ ಕಂದಕೂರ ಭೇಟಿ | ಕುಟುಂಬಸ್ಥರಿಗೆ ಸಾಂತ್ವನ
ಗುರುಮಠಕಲ್: ಕಳೆದ ತಿಂಗಳು ಅಕಸ್ಮಿಕವಾಗಿ ಮೃತಪಟ್ಟ ಭಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷ ಮುಖೇಶ್ ಪತಂಗೆ ಮನೆಗೆ ಶಾಸಕರಾದ ಶ್ರೀ ಯುತ ಶರಣಗೌಡ ಕಂದಕೂರ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು.
ಪತಂಗೆ ಅವರು, ಸಮಾಜದ ಬಗ್ಗೆ ಸಾಕಷ್ಟು ಕಳಕಳಿಯುಳ್ಳ ವ್ಯಕ್ತಿಯಾಗಿದ್ದರು. ಅವರ ಅಗಲಿಗೆ ಸಾಕಷ್ಟು ನೋವು ತರಿಸಿದೆ ಎಂದರು.
ಸಮಾಜಕ್ಕೆ ಸಮುದಾಯದ ಭವನ ನಿರ್ಮಾಣ ಮಾಡಬೇಕು ಎನ್ನುವ ಕನಸು ಅವರದ್ದಾಗಿತ್ತು. ಈ ಕುರಿತು ತಮಗೆ ಮನವಿವೂ ಮಾಡಿದ್ದ, ಹಾಗಾಗಿ ಅವರ ಕನಸು ನನಸಾಗಿಸುವ ನಿಟ್ಟಿನಲ್ಲಿ ಸಮಾಜದವರಿಗೆ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಅವರ ತಂದೆ, ಪತ್ನಿ ಹಾಗೂ ಮಕ್ಕಳಿಗೆ ಧೈರ್ಯ ಹೇಳಿದರು. ಈ ವೇಳೆ ಶ್ರೀಕಾಂತ ಢಗೆ, ರವಿ ಪತಂಗೆ, ನಾಗರಾಜ ಪತಂಗೆ, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ಪಾಪಣ್ಣ ಮನ್ನೆ, ಪ್ರಕಾಶ ನೀರೆಟಿ, ಬಸ್ಸಣ್ಣ ದೇವರಹಳ್ಳಿ, ಶರಣು ಆವಂಟಿ, ಸಂತೋಷ ಗೌಡ ಇತರರಿದ್ದರು.