ಹೆಡಗಿಮದ್ರಾ ಜಾತ್ರಾಯ ನಿಮಿತ್ತ ಭೀತಿ ಪತ್ರಿಕೆ ಬಿಡುಗಡೆ | ಮುಗಳಖೊಡದ ಯಲ್ಲಾಲಿಂಗ ಶರಣರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಭಾಗಿ | ರಾಚನಗೌಡ ಮುದ್ನಾಳ ಅಭಿಪ್ರಾಯ

ಯಾದಗಿರಿ: ಪಾಲಕರು ಮಕ್ಕಳಿಗೆ ಎಷ್ಟೇ ಉನ್ನತ ಶಿಕ್ಷಣ ಕೊಡಿಸಿದರೂ ಸಂಸ್ಕಾರ ನೀಡುವುದನ್ನು ಮರೆಯಕೂಡದು ಎಂದು ರಾಚನಗೌಡ ಮುದ್ನಾಳ ಅಭಿಪ್ರಾಯ ವ್ಯಕ್ತಪಡಿಸಿದರು.

ಗುರುವಾರ ರಾತ್ರಿ ತಾಲೂಕಿನ ಹೆಡಗಿಮದ್ರಾ ಗ್ರಾಮದಲ್ಲಿ ಶ್ರೀಶಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮುಗಳಖೊಡದ ಯಲ್ಲಾಲಿಂಗ ಶರಣರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಭೀತಿ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು ಆಧುನಿಕರಣದ ಇಂದಿನ ಜಗತ್ತಿನಲ್ಲಿ ಮನುಷ್ಯ ಎಲ್ಲವನ್ನೂ ಆವಿಷ್ಕಾರ ಮಾಡಿದ್ದಾನೆ. ಆದರೆ ಸಂಸ್ಕಾರ ರಹಿತನಾಗಿ ಬದುಕುತ್ತಿದ್ದಾನೆ.ಗ್ರಾಮೀಣ ಭಾಗದಲ್ಲಿ ಜಾತ್ರೆ, ಉತ್ಸವಗಳನ್ನು ಆಚರಿಸುವುದು ಮನದ ಮೈಲಿಗೆ ತೊಳೆದು, ಅಂತರಂಗದಲ್ಲಿ ಜ್ಞಾನದ ಜ್ಯೋತಿ ಹೆಚ್ಚಿಸಲು. ಪ್ರತಿವರ್ಷದಂತೆ ಈ ವರ್ಷ ಸಹ ಜಾತ್ರೆ ಅದ್ದೂರಿಯಾಗಿ ನಡೆಯಲು ಭಕ್ತರ ಸಹಕಾರ ಅಗತ್ಯವಾಗಿದೆ. ಮಠದ ಪೀಠಾಪತಿಗಳ ನೇತೃತ್ವದಲ್ಲಿ ಇತ್ತೀಚಿನ ದಿನಗಳಲ್ಲಿ ಶ್ರೀಮಠ ಪ್ರವರ್ಧಮಾನಕ್ಕೆ ಬರುತ್ತಿದೆ ಎಂದು ಹೇಳಿದರು. ಸಾನಿಧ್ಯವನ್ನು ಪೀಠಾಪತಿ ಶ್ರೀ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಸ್ವಾಮಿಗಳು ವಹಿಸಿದ್ದರು.

ಪ್ರವಚನಕಾರ ಶಿವಾಚಾರ್ಯ ಸ್ವಾಮೀಜಿ, ಗೊವಿಂದಪ್ಪ ಠಾಣಗುಂದಿ, ಶೆಕಪ್ಪ ಹೊರುಂಚಿ, ದೇವಿಂದ್ರಪ್ಪ ನಾಟೆಕಾರ, ವಿಶ್ವಾರಾಧ್ಯ ವಾರದ, ಬಸವರಾಜ ನಾಯ್ಕಲ್, ಶಿವಪ್ಪ ಹಿರೇಕೆರೂರು,ಚಂದಪ್ಪ ಭಜಂತ್ರಿ, ಗಾವಯಿ ಪಂಪಾಪತಿ ಹಳೆಕೊಟೆ, ತಬಲಾ ಪ್ರಾಣೇಶ್ ಶಹಾಪುರ ಸೇರಿದಂತೆ. ಊರಿನ ಮುಖಂಡರು, ಮಹಿಳೆಯರು, ಮಠದ ಶಾಲೆಯ ವಿದ್ಯಾರ್ಥಿಗಳು ಸುತ್ತಮುತ್ತ ಗ್ರಾಮಸ್ಥರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!