ಯಾದಗಿರಿಯಲ್ಲಿ ಕೋಲಿ ಕೊಬ್ಬರಿಗೆ ಸಮಾಜದ ಶಕ್ತಿ ಪ್ರದರ್ಶನ | ಅಪಾರ ಸಂಖ್ಯೆಯಲ್ಲಿ ನೆರೆದ ಜನಸಾಗರ | ಎಸ್ಟಿ ಸೇರ್ಪಡೆಗೆ ಆಗ್ರಹ | ಅವಹೇಳನಕಾರಿ ಮಾತನಾಡಿದವರ ವಿರುದ್ಧ ಕ್ರಮಕ್ಕೆ ಒತ್ತಾಯ


ಯಾದಗಿರಿ: ಕೋಲಿ ಕಬ್ಬಲಿಗ ಸಮಾಜದ ಇನ್ನುಳಿದ ಪರ್ಯಾಯ ಪದಗಳನ್ನು ಎಸ್ಟಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಹಾಗೂ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರಿಗೆ ಅವಹೇಳನಕಾರಿ ಮಾತನಾಡಿರುವ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಯಾದಗಿರಿ ನಗರದಲ್ಲಿ ಇಂದು ಕೋಲಿ ಕಬ್ಬಲಿಗ ಸಮಾಜದ ಒಕ್ಕೂಟದಿಂದ ಬೃಹತ್ ಹೋರಾಟ ನಡೆಸಲಾಯಿತು.

ಯಾದಗಿರಿ ನಗರದ ವಾಲ್ಮೀಕಿ ವೃತ್ತದಿಂದ ಸುಭಾಷ್ ವೃತ್ತದ ವರಗೆ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು. ನಂತರ ನಗರದ ಸುಭಾಷ್ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.

ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಹಾಗೂ ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಹಾಗೂ ಪ್ರಮುಖರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆ ಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕೂಡಲೇ ಸರಕಾರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದಾರೆ.

ಈ ವೇಳೆ ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಅವರು ಮಾತನಾಡಿ, ಕೋಲಿ ಸಮಾಜವನ್ನು ಎಸ್ಟಿ ಸೇರ್ಪಡೆ ಮಾಡಿ ನಾನು ಸಾಯುತ್ತೆನೆ. ಕೋಲಿ ಸಮಾಜ ಎಸ್ಟಿ ಸೇರಿಸುವದು ನನ್ನ ಜೀವನದ ಕೊನೆ ಆಸೆಯವಾಗಿದೆ ಎಂದು ಭಾವುಕವಾಗಿ ನುಡಿದರು.

ನಗರಸಭೆ ಅಧ್ಯಕ್ಷರಾದ ಲಲಿತಾ ಅನಪೂರ ಅವರು ಮಾತನಾಡಿ, ಸಮಾಜದ ಜನರು ಒಗ್ಗಟ್ಟಾಗಿ ಇರಬೇಕು. ಒಗ್ಗಟ್ಟಾಗಿ ಹೋರಾಟ ಮಾಡಿ ಕೋಲಿ,ಕಬ್ಬಲಿಗ ಎಸ್ಟಿ ಸೇರ್ಪಡೆ ಮಾಡಲು ಶ್ರಮಿಸಲು ಕರೆ ನೀಡಿದರು.

Spread the love

Leave a Reply

Your email address will not be published. Required fields are marked *

error: Content is protected !!