ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಗಿರಿ ಜಿಲ್ಲೆಯಲ್ಲಿ ವಿನೂತನ ಕಾರ್ಯಕ್ರಮ
ಯಾದಗಿರಿ : 2024-25ನೇ ಸಾಲಿನ ಮಹಿಳಾ ದಿನಾಚರಣೆ ಅಂಗವಾಗಿ ಕುಮಾರಿ ಯಾದಗಿರಿ ಮತ್ತು ಶ್ರೀಮತಿ ಯಾದಗಿರಿ ಸ್ಪರ್ಧೆಯನ್ನು ಇದೇ 2025ರ ಮಾರ್ಚ್ 11ರ ಮಂಗಳವಾರ ರಂದು ಜಿಲ್ಲಾಡಳಿತ ಭವನ ಆಡಿಟೋರಿಯಂ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ತಿಳಿಸಿದ್ದಾರೆ.
ಮಹಿಳಾ ದಿನಾಚರಣೆ ಅಂಗವಾಗಿ ಕುಮಾರಿ ಯಾದಗಿರಿ ಮತ್ತು ಶ್ರೀಮತಿ ಯಾದಗಿರಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಯಾದಗಿರಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಲವೀಶ್ ಒರಡಿಯಾ, ಹಾಗೂ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ ಶಂಕರ್, ಮತ್ತು ಯಾದಗಿರಿ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಈ ಅಧಿಕಾರಿಗಳ ನಿರ್ಣಾಯಕರಾಗಿರುತ್ತಾರೆ.
ಆಸಕ್ತಿಯುಳ್ಳ ಜಿಲ್ಲೆಯ ಎಲ್ಲಾ ಮಹಿಳಾ ಸರ್ಕಾರಿ ನೌಕರರು ಈ ಸ್ಪರ್ಧೆಯನ್ನು ಭಾಗವಹಿಸಲು ತಿಳಿಸಿದೆ. ಈ ಸ್ಪರ್ಧೆಗೆ ಮೊದಲು ನೋಂದಣಿ ಮಾಡಲಾದ 15 (ಕುಮಾರಿ ಹಾಗೂ ಶ್ರೀಮತಿ) ಮಹಿಳೆಯರನ್ನು ಮಾತ್ರ ಪರಿಗಣಿಸಲಾಗುವುದು. ಈ ಸ್ಪರ್ಧೆಯನ್ನು ಒಟ್ಟು 3 ಸುತ್ತುಗಳಿದ್ದು, 1ನೇ ಸುತ್ತು ಸ್ವ ಪರಿಚಯ 2ನೇ ಸುತ್ತು ಪ್ರತಿಭೆ ಹಾಗೂ 3ನೇ ಸುತ್ತು ಪ್ರಶ್ನೋತ್ತರ ಸುತ್ತು ಇದ್ದು, 2ನೇ ಸುತ್ತು ನಲ್ಲಿ ಕಲೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳ ಬಹುದಾಗಿದೆ.
ನಟನೆ, ಹಾಡು, ನೃತ್ಯ, ಹಾಸ್ಯ, ಶಾಯರಿ, ಸ್ಪರ್ಧೆಯನ್ನು ನೋದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಯಾದಗಿರಿ ಜಿಲ್ಲಾಧಿಕಾರಿಗಳ ಕಾರ್ಯಾಲಯ ಚುನಾವಣಾ ತಹಸೀಲ್ದಾರರು ಮೊ.ನಂ.9019940547, ಯಾದಗಿರಿ ಕೃಷಿ ಇಲಾಖೆ ಉಪ ನಿರ್ದೇಶಕರು ಶ್ರೀಮತಿ ಮಂಜುಳಾ ಮೊ.ನಂ.8277933401ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
