ಮಾರ್ಚ್ 9 ರಂದು 5ಕೆ, 10ಕೆ ಓಟಕ್ಕೆ ಆಹ್ವಾನ
ಯಾದಗಿರಿ: ರಾಜ್ಯಾದ್ಯಂತ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಹಾಗೂ ಯಾದಗಿರಿ ಜಿಲ್ಲಾ ಪೊಲೀಸ್ ವತಿಯಿಂದ ವ್ಯಸನ ಮುಕ್ತ ಸಮಾಜ ಮತ್ತು ಅಪರಾಧ ಮುಕ್ತ ಸಮಾಜ ಧ್ಯೇಯದೊಂದಿಗೆ ಇದೇ 2025ರ ಮಾರ್ಚ್ 9ರ ಭಾನುವಾರ ರಂದು 5ಕೆ, 10ಕೆ ಓಟವನ್ನು ಆಯೋಜಿಸಲಾಗಿದೆ ಎಂದು ಯಾದಗಿರಿ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು ತಿಳಿಸಿದ್ದಾರೆ.
ಯಾದಗಿರಿ ಜಿಲ್ಲಾ ಪೊಲೀಸ್ ವತಿದಿಂದ ವ್ಯಸನ ಮುಕ್ತ ಸಮಾಜ ಮತ್ತು ಅಪರಾಧ ಮುಕ್ತ ಸಮಾಜ ಧ್ಯೇಯದೊಂದಿಗೆ 5ಕೆ, 10ಕೆ ಓಟವನ್ನು 2025ರ ಮಾರ್ಚ 9ರ ಭಾನುವಾರ ರಂದು ಅಂದು ಬೆಳಿಗ್ಗೆ 6.30 ಗಂಟೆಗೆ ಲುಂಬಿನಿ ಗಾರ್ಡನ್‌ನಿಂದ ಪ್ರಾರಂಭಿಸ ಲಾಗುವುದು.
5ಕೆ ಓಟದ ಮಾರ್ಗ ಲುಂಬಿನಿ ಗಾರ್ಡನ್ ಹೊಸಳ್ಳಿ ಕ್ರಾಸ್ ಗಂಜ್ ಸರ್ಕಲ್ ಮರಳಿ ಗಂಜ್ ಸರ್ಕಲ್ ಹೊಸಳ್ಳಿ ಕ್ರಾಸ್ ಲುಂಬಿನಿ ಗಾರ್ಡನ್ ವರೆಗೆ ನಡೆಯಲಿದೆ. 10 ಕೆ ಓಟದ ಮಾರ್ಗ ಹೊಸಳ್ಳಿ ಕ್ರಾಸ್ ಹೊಸ ಬಸ್ ಸ್ಟ್ಯಾಂಡ್ -ಶಾಸ್ತ್ರೀ ಸರ್ಕಲ್ ಸುಭಾಷ ಸರ್ಕಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಕನಕ ಸರ್ಕಲ್ ಅಂಬೇಡ್ಕರ್ ಸರ್ಕಲ್ ಲುಂಬಿನಿ ಗಾರ್ಡನ್ ವರೆಗೆ ನಡೆಯಲಿದೆ.
ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು, ಯಾದಗಿರಿ ನಗರದ ಗಣ್ಯವ್ಯಕ್ತಿಗಳು ಹಾಗೂ ಆಸಕ್ತರು ಈ ಓಟದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
