ಯಾದಗಿರಿ: ಛತ್ರಪತಿ ಶಿವಾಜಿ ಮಹಾರಾಜರು ದೇಶ ಕಂಡ ಅಪ್ರತಿಮ ಸಾಹಸಿ ಹಾಗೂ ಚಕ್ರವರ್ತಿಯಾಗಿದ್ದಾರೆಂದು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಅವರು ಬಣ್ಣಿಸಿದರು.

ಇಲ್ಲಿನ ವಿದ್ಯಾ ಮಂಗಲ ಕಾರ್ಯಾಲಯದಲ್ಲಿ ಬುಧವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಜಯಂತ್ಯೋತ್ಸವ ಸಮಿತಿ ಹಮ್ಮಿಕೊಂಡಿದ್ದ ಶಿವಾಜಿ ಮಾಹಾರಾಜರ 395ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿವಾಜಿಯವರು ತನ್ನ ತಾಯಿಯ ಹೊಟ್ಟೆಯಲ್ಲಿರುವಾಗಲೇ ಸಾಹಸಮಯ ಕಥೆಗಳನ್ನು ಕೇಳಿ ಜನಿಸಿದ ಧೈರ್ಯವಂತ. ಸಂಸ್ಕಾರಿ, ಶಿಸ್ತು ಬದ್ದ ಜೀವನ ಇವರದಾಗಿತ್ತೆಂದು ಹೇಳಿದರು.

ಹಿಂದೂ ಸ್ವರಾಜ್ಯದ ಸ್ಥಾಪಕರು, ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ ಮಹಾನ್ ವ್ಯಕ್ತಿಯಾಗಿದ್ದರೆಂದು ಸಜ್ಜನ್ ವಿವರಿಸಿ,
ದೇಶದ ಒಗ್ಗಡುವಿಕೆಗೆ ಶ್ರಮಿಸಿದ ಶೌರ್ಯ, ಸಾಹಸ ಮತ್ತು ರಾಷ್ಟ್ರಭಕ್ತಿ ಹೊಂದಿದ್ದ ಇವರ ಆದರ್ಶ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ಸುಭಾಷಚಂದ್ರ ಕೌಲಗಿ ವಿಶೇಷ ಉಪನ್ಯಾಸ ನೀಡಿ, ತುಳಜಾಪುರದ ಜಗನ್ಮಾತೆ ಜಗದಂಭೆಯಿಂದ ವೀರಖಡ್ಗ ಪಡೆದ ಮಹಾನ್ ಭಕ್ತನಾಗಿದ್ದ.
ಯುದ್ದಗಳಲ್ಲಿ ಸಾಹಸಿಯಾಗಿದ್ದು, ಇವರೊಬ್ಬ ಹಿಂದೂ ರಾಷ್ಟ್ರದ ಪ್ರತಿಪಾದಕರಾಗಿದ್ದರೆಂದು ಹೇಳಿದರು.

ವೇದಿಕೆಯಲ್ಲಿ ಮರಾಠ ಸಮಾಜದ ಗೌರವಾಧ್ಯಕ್ಷ ಶ್ರೀರಂಗ್ ಜಾಧವ್,ಜಿಲ್ಲಾಧ್ಯಕ್ಷ ರಾಜಕುಮಾರ ಧಾವಳೆ, ಡಿವೈಎಸ್ ಪಿ ಅರುಣಕುಮಾರ, ಹಿಂದೂ ಸೇವಾ ಸಮಿತಿ ಮುಖಂಡ ಸಿದ್ದರಾಮ ರಡ್ಡಿ ಮಾಧವಾರ್ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಇತರರಿದ್ದರು.
ಮರಾಠ ಸಮಾಜದವರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!