ಹಿಂದೂ ಹೃದಯ ಸಾಮ್ರಾಟ ಶಿವಾಜಿ ಮಹಾರಾಜರು | ಫೆ.19, 1630 ರಲ್ಲಿ ಜನನ | ಹಿಂದುಪರ ಸಂಘಟನೆ ಯುವಕರು, ಪ್ರಮುಖರು ಭಾಗಿ | ತಾಲೂಕು ಪಂಚಾಯಿತಿ ಕಾರ್ಯಾಲಯ ದಲ್ಲಿಯೂ ಜಯಂತಿ ಆಚರಣೆ

ಗುರುಮಠಕಲ್: ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು ಎಂದು ಯುವ ಮುಖಂಡ ಜಗದೀಶ ಭೂಮಾ ಹೇಳಿದರು.

ಗುರುಮಠಕಲ್ ನ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಹಿಂದೂ ಯುವ ಘರ್ಜನೆ ಸಮಿತಿಯಿಂದ ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಲ್ಲಿ ಮಾತನಾಡಿದರು.

ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮ ಭಾರತವನ್ನು ತಮ್ಮ ಆಳ್ವಿಕೆಗೆ ತಂದರು. ಶಿವಾಜಿಯ ಶೌರ್ಯ, ಸಾಹಸ ರಾಷ್ಟ್ರಭಕ್ತ ಆಡಳಿತಗಾರರಿಗೆ ಎಂದೆಂದಿಗೂ ಪ್ರೇರಣಾದಾಯಿ. ಛತ್ರಪತಿ ಶಿವಾಜಿ ಮಹಾರಾಜ ರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತ ದ್ದು ಎಂದು ಹೇಳಿದರು.

ಗುರುಮಠಕಲ್ ಪಿಐ ದೇವೇಂದ್ರಪ್ಪ ಧೂಳಖೇಡ ಶಿವಾಜಿ ಮಹಾರಾಜರಿಗೆ ಪುಷ್ಪ ನಮನ ಸಲ್ಲಿಸಿ ಗೌರವಿಸಿದರು. ಪ್ರಮುಖರಾದ ರಮೇಶ್ ಹೂಗಾರ್, ರಾಮುಲು, ಗುರುರಾಜ ಜೋಶಿ, ನರಸಪ್ಪ, ಬಾಲಾಜಿ ತಗಡಘರ, ಶರಣು ಮೇದಾ, ವೆಂಕಟೇಶ, ಬನ್ನಪ್ಪ, ರಾಮು ಮನ್ನೆ, ರಾಕೇಶ್ ಹಜಾರೆ ಸೇರಿದಂತೆ ಹಿಂದೂ ಸಮಾಜದ ಯುವಕರು ಇದ್ದರು.

ತಾಲೂಕು ಪಂಚಾಯಿತಿ ಕಾರ್ಯಾಲಯ: ಇಲ್ಲಿನ ತಾ.ಪಂ. ಕಾರ್ಯಾಲಯದಲ್ಲಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ಮಾಡಲಾಯಿತು. ಈ ವೇಳೆ ಸಹಾಯಕ ನಿರ್ದೇಶಕರ ರಾಮಚಂದ್ರ ಬಸೂದೆ, ಯೋಜನಾ ನಿರ್ದೇಶಕಿ ಭಾರತಿ ಸಜ್ಜನ್, ನರೇಗಾ ಸ.ನಿರ್ದೇಶಕ ಶರಣಪ್ಪ ಮೈಲಾರಿ, ಮಂಜುಳಾ, ಶರಣಪ್ಪ ಚವಾಣ್, ಮೆಹಬೂಬ್ ಸಾಬ್, ಅಕ್ಷಯ ಕುಮಾರ ಚೌಧರಿ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!