ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಸಾವಯವ ಹಬ್ಬ ಉದ್ಘಾಟನೆ
ಯಾದಗಿರಿ: ದೇಶದ ನಾಗರಿಕರ, ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ರೈತರು ತಮ್ಮ ಬೆಳೆಗಳಲ್ಲಿ ಹೆಚ್ಚಿನ ರಾಸಾಯನಿಕಗಳು ಬಳಸದಂತೆ ಎಚ್ಚರಿಕೆವಹಿಸಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪೂರ್ ಅವರು ಸಲಹೆ ನೀಡಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿಂದು ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು. ರೈತರು ಹೆಚ್ಚಿನ ಔಷಧಿ ಮತ್ತು ರಾಸಾಯನಿಕಗಳನ್ನು ತಮ್ಮ ಬೆಳೆಗಳಗಾಗಿ ಉಪಯೋಗಿಸಿ ಹೆಚ್ಚಿನ ಇಳುವರಿ ಪಡೆಯುವ ಮನೋಭಾವ ತೊಲಗಬೇಕು. ದವಸಧಾನ್ಯ, ತರಕಾರಿ ಬೆಳೆ ಹಾಗೂ ಹಣ್ಣುಗಳಿಗೆ ಹೆಚ್ಚಿನ ರಾಸಾಯನಿಕ ಬಳಕೆಯು ವಿಷಯುಕ್ತ ಆಹಾರವಾಗಿ ಪರಿಣಮಿಸುವುದರಿಂದ ,ರೈತರು ಸಾವಯವ ರಸಗೊಬ್ಬರ ಮತ್ತು ಸಿರಿಧಾನ್ಯಗಳಂತಹ ಬೆಳೆಗಳಿಗೆ ಒತ್ತು ನೀಡಬೇಕು ಎಂದು ಅವರು ಹೇಳಿದರು.
ರಾಜ್ಯ ಸರ್ಕಾರವು ಕೂಡ ಕೃಷಿ ಇಲಾಖೆ ಮೂಲಕ ರೈತರ ಮನೆ ಬಾಗಿಲಿಗೆ ತಲುಪಿ ಸಾವಯವ, ಸಮಗ್ರ ಮತ್ತು ಸಿರಿಧಾನ್ಯ ಗಳ ಮೂಲಕ ತಮ್ಮ ಕೃಷಿ ಪದ್ಧತಿ ಬೆಳೆಸಿಕೊಳ್ಳಲು ಅರಿವು ಮೂಡಿಸು ತ್ತಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು.
ಯೋಜನಾ ಬದ್ಧವಾಗಿ ರಾಸಾಯನಿಕ ಇಲ್ಲದ ಕೃಷಿ ಪದ್ಧತಿ, ಅಳವಡಿಸಲು ವಿಶೇಷ ಗಮನ ನೀಡಬೇಕು. ಸರ್ಕಾರವು ಕೂಡ ಕೃಷಿ,ರಾಶಿ ಯಂತ್ರೋಪಕರಣಗಳು,ತುಂತುರು,ಹನಿ ನೀರಾವರಿ ಸೇರಿದಂತೆ ಹಲವು ರೀತಿಯಲ್ಲಿ ಸಬ್ಸಿಡಿ ಸೌಲಭ್ಯಗಳನ್ನು ನೀಡುತ್ತಿದ್ದು, ಹೈನುಗಾರಿಕೆಗೂ ಉತ್ತೇಜನ ನೀಡುತ್ತಿದೆ. ರೈತರು ಈಗ ಪುನಃ ಹೈನುಗಾರಿಕೆಗಳತ್ತ ವಾಲುತ್ತಿದ್ದಾರೆ. ಅದರಂತೆ ಕೃಷಿಯಲ್ಲಿ ರೈತರು ಇತಿಮಿತಿಯಲ್ಲಿ ಔಷಧಿ ಬಳಸಬೇಕು. ವಿಜ್ಞಾನ ಕೇಂದ್ರ ಹಾಗೂ ಕೃಷಿ ಮಹಾವಿದ್ಯಾಲಯಗಳ ಮೂಲಕವೂ ರೈತರಿಗೆ ಅರಿವು ಮೂಡಿಸುತ್ತಿದ್ದು, ಇದರ ಸದುಪಯೋಗ ಪಡೆಯುವಂತೆ ಕರೆ ನೀಡಿದರು.
ಸಾವಯವ ರಸಗೊಬ್ಬರಗಳ ಮೂಲಕದ ಆಂಧ್ರ ಮಾದರಿಯ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು.ಔಷಧಿ ಇಲ್ಲದ ಆಹಾರ ಸೇವಿಸುವ ಪರಿಪಾಠ ತಮ್ಮ ಕುಟುಂಬದಿಂದಲೇ ಆರಂಭಿಸಿ, ಎಲ್ಲರ ಆರೋಗ್ಯ ದ ಬಗ್ಗೆ ಕಾಳಜಿವಹಿಸಬೇಕು. ಔಷಧಿ ಇಲ್ಲದ ತರಕಾರಿ ಬೆಳೆಗಾಗಿ ತಮ್ಮ ಒಂದೆರಡು ಎಕರೆ ಜಮೀನು ಮೀಸಲಿಡಬೇಕು. ಸ್ವಂತ ಜಮೀನು ಇದ್ದಲ್ಲಿ ಕೃಷಿ ಬೆಳೆಗೆ ಗಮನ ನೀಡಲು ಸಲಹೆ ನೀಡಿದರು.
ದೇಶದಲ್ಲಿ ದಿನನಿತ್ಯ ಜನಸಂಖ್ಯಾ ಬೆಳವಣಿಗೆಯಾಗುತ್ತಿದೆ . ಕೃಷಿ ಭೂಮಿ ಕಡಿಮೆಯಾಗಿ ಕೈಗಾರಿಕೆ ಕ್ಷೇತ್ರ ಬೆಳೆಯುತ್ತಿದೆ. ಕೃಷಿ ಕ್ಷೇತ್ರ ಕಡಿಮೆಯಾಗುತ್ತಿದ್ದರೂ, ದೇಶದ ಜನಸಂಖ್ಯೆ ಗೆ ಅನುಗುಣವಾಗಿ ಕೃಷಿ ಬೆಳೆ ಬೆಳೆದು ಬೆನ್ನೆಲುಬಾಗಿ ರೈತರು ನಿಂತಿರುವದು ಅಭಿನಂದನಾರ್ಹವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರ ಶಾಸಕರಾದ ಶ್ರೀ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು, ರೈತರು ತಮ್ಮ ಕೃಷಿ ಪದ್ಧತಿಯಲ್ಲಿ ಸಾವಯವ ರಸಗೊಬ್ಬರ ಬಳಸಬೇಕು. ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾಗಿರುವ ಸಿರಿಧಾನ್ಯಗಳ ಬೆಳೆಗೆ ವಿಶೇಷ ಒತ್ತು ನೀಡಬೇಕು. ರಾಜ್ಯ ಸರ್ಕಾರವು ಕೂಡ ಕೃಷಿ ಇಲಾಖೆ ಮೂಲಕ ವಿವಿಧ ಯೋಜನೆ ಗಳಡಿ ಯಂತ್ರೋಪಕರಣಗಳು, ಸಬ್ಸಿಡಿ ಸೌಲಭ್ಯ ನೀಡುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹತ್ತು ಜನ ರೈತರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸಿರಿಧಾನ್ಯ ಮಹತ್ವದ ಕುರಿತ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಅದರಂತೆ ಪಾಕ ಸ್ಪರ್ಧೆಯಲ್ಲಿ ವಿಜೇತರಾ ದವರಿಗೆ ಸನ್ಮಾನಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವರು ಇದೇ ಸಂದರ್ಭದಲ್ಲಿ ವಿವಿಧ ಯಂತ್ರೋಪಕರಣಗಳು ಹಾಗೂ ವಿವಿಧ ಮಳಿಗೆಗಳನ್ನು ಉದ್ಘಾಟಿಸಿದರು.ರಾಶಿ ಪೂಜೆ ನೆರವೇರಿಸಿದರು.
ನಗರಸಭೆ ಅಧ್ಯಕ್ಷ ಲಲಿತಾ ಅನಪುರ, ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಡೀನ್ ಪ್ರಕಾಶ್ ಕುಚನೂರ್, ಕವಡಿಮಟ್ಟಿ ,ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿಗಳಾದ ಡಾ. ಜಯಪ್ರಕಾಶ್ ನಾರಾಯಣ್, ಜಾನಪದ ಕವಿ ಸಿದ್ದಪ್ಪ ಬಿಳಗಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಸನಗೌಡ ಮಾಲಿ ಪಾಟೀಲ್, ಸೋಮನಾಥ ರೆಡ್ಡಿ, ಉಪಸ್ಥಿತರಿದ್ದರು.
ಜಂಟಿ ಕೃಷಿ ನಿರ್ದೇಶಕರಾದ ರತೇಂದ್ರನಾಥ್ ಸುಗೂರ, ಪ್ರಾಸ್ತಾವಿಕವಾಗಿ ಮಾತನಾಡಿದರು.ಕೃಷಿ ಸಹಾಯಕ ನಿರ್ದೇಶಕ ರಾದ ರಾಜಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಬೂದಯ್ಯ ಹಿರೇಮಠ ಪ್ರಾರ್ಥಿಸಿದರು.
