ಸಿಟಿ ಬಸ್ ಓಡಾಡುವಂತೆ ಕ್ರಮ ಕೈಗೊಂಡು| ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಒತ್ತಾಯ
ಶಹಾಪುರ: ತಾಲೂಕಿನ ಬೆನಕನಹಳ್ಳಿ – ಕನ್ನಕೋಳೂರು ಮಾರ್ಗ ದಲ್ಲಿ ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಮೆಟ್ರಿಕ್ ನಂತರದ ಹಾಗೂ ಮೆಟ್ರಿಕ್ ಪೂರ್ವ ಬಾಲಕ/ಬಾಲಕಿ ಯರ ವಸತಿ ನಿಲಯಗಳು ಶಹಾಪೂರದಿಂದ ಸುಮಾರು 4 – 5 ಕಿ.ಮೀ ದೂರದಲ್ಲಿರುತ್ತವೆ ಹಾಗಾಗಿ ಸಿಟಿ ಬಸ್ ಸೌಲಭ್ಯ ಕಲ್ಪಿಸಲು ಸರ್.ಎಮ್.ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಪ್ರದೀಪ ಅಣಬಿ ಮನವಿ ಮಾಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಾಪೂರ ಅವರಿಗೆ ಮನವಿ ಸಲ್ಲಿಸಿರುವ ಅವರು, ವಿದ್ಯಾರ್ಥಿಗಳು ವಸತಿ ನಿಲಯದಿಂದ ತಮ್ಮ ಶಾಲಾ-ಕಾಲೇಜುಗಳಿಗೆ ತೆರಳಲು ತುಂಬಾ ತೊಂದರೆ ಉಂಟಾಗುತ್ತಿದೆ. ಈ ಹಿಂದೆ ಜಿಲ್ಲಾಧಿಕಾರಿಗಳಿಗೆ ಶಹಾಪುರ ತಹಸೀಲ್ದಾರರ ಮುಖಾಂತರ ಮನವಿ ಸಲ್ಲಿಸಲಾಗಿತ್ತು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕರಿಗೂ ಮನವಿ ಸಲ್ಲಿಸಲಾಗಿತ್ತು, ಪತ್ರಕ್ಕೆ ತಹಸೀಲ್ದಾರರಿಂದ ಸಕರಾತ್ಮಕ ಪ್ರತಿಕ್ರಿಯೆ ದೊರೆತ್ತಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಹಸೀಲ್ದಾರರು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಪತ್ರ ಬರೆದು ಮೂರು ತಿಂಗಳು ಗತಿಸಿದರೂ ಇನ್ನೂ ಕ್ರಮ ಕೈಗೊಂಡಿ ರುವುದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಉಂಟಾಗುತ್ತಿದೆ ಎಂದು ಗಮನಕ್ಕೆ ತಂದಿದ್ದಾರೆ.
ವಿದ್ಯಾರ್ಥಿಗಳು ನಮಗೆ ಮತ್ತೊಮ್ಮೆ ಮನವಿ ಮಾಡಿಕೊಂಡು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ. ವಸತಿ ನಿಲಯದಿಂದ ಕಾಲೇಜುಗಳಿಗೆ ತೆರಳಲು ತುಂಬಾ ದೂರವಿದ್ದು, ಪ್ರತಿನಿತ್ಯ ಸಂಚಾರ ಮಾಡಲು ಸಮಯ ವ್ಯರ್ಥವಾಗುತ್ತಿದೆ. ನಮಗೆ ಅಭ್ಯಾಸ ಮಾಡಲು ಸಮಯ ಸಿಗದಂತಾಗಿದೆ ಎಂದು ನೋವು ತೊಡಿಕೊಂಡಿದ್ದಾರೆ. ಕೂಡಲೇ ಬೇಡಿಕೆ ಇರುವ ಮಾರ್ಗಗಳಲ್ಲಿ ಆದಷ್ಟು ಬೇಗ ಈ ಕೆಳಕಂಡ ಸ್ಥಳಗಳಿಂದ ಬಸ್ ಸೌಕರ್ಯ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಸೂಚಿಸಬೇಕೆಂ ದು ಭೋಜಪ್ಪ ಮುಂಡಾಸ, ಶರಣು ದಿಗ್ಗಿ ಇನ್ನಿತರರು ವಿನಂತಿಸಿಕೊಂಡರು.
