ಗುರುಮಠಕಲ್ : ತಾಲೂಕಿನ ಏಲೇರಿ ಮತ್ತು ಚಿನ್ನಕಾರ ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಓರಾಡಿಯಾ ಮತ್ತು ಜಿ. ಪಂ. ಯೋಜನಾ ನಿರ್ದೇಶಕ ಸಿ. ಬಿ ದೇವರಮನಿ ಭೇಟಿ ನೀಡಿದರು.
ಯಲ್ಹೇರಿ ಗ್ರಾಮದಲ್ಲಿ ಸಂಚರಿಸಿ ಇಂಗು ಗುಂಡಿ ಕಾಮಗಾರಿಗಳು, ಶೌಚಾಲಯ, ಜೆಜೆಎಮ್ ಕಾಮಗಾರಿ, ಅಂಗನವಾಡಿ ಕೇಂದ್ರ ವೀಕ್ಷಿಸಿದರು. ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲು ಪಿಡಿಒ ಅವರಿಗೆ ಸೂಚಿಸಿದರು. ನಂತರ 12ನೇ ಶತಮಾನದ ಪುರಾತನ ಎಲೆಕೇತೇಶ್ವರ ದೇವಾಲಯ ವೀಕ್ಷಿಸಿದರು.
ಮುಂದೆ ಚಿನ್ನಕಾರ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಜೊತೆಗೆ ಮಾತನಾಡಿ, ಪೌಷ್ಟಿಕ ಆಹಾರ, ಸಮವಸ್ತ್ರ, ಶೂ ವಿತರಣೆ ಮಾಹಿತಿ ಪಡೆದರು. ಪ್ರಗತಿಯಲ್ಲಿರುವ ಶಾಲಾ ಅಭಿವೃದ್ಧಿ ಕಾಮಗಾರಿಗಳಾದ ಬಾಲಕ, ಬಾಲಕೀಯರ ಪ್ರತ್ಯೇಕ ಶೌಚಾಲಯ, ಶಾಲಾ ಕಾಂಪೌಂಡ್ ಕಟ್ಟಡ ಕಾಮಗಾರಿ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಗುರುಮಠಕಲ್ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಅಂಬರೀಶ್ ಪಾಟೀಲ್, ಯೆಲೇರಿ ಗ್ರಾಮ ಪಂಚಾಯಿತಿ ಪಿಡಿಓ ಶೋಭಾ ಪಾಟೀಲ್, ಚಿನ್ನಕಾರ ಗ್ರಾಮ ಪಂಚಾಯಿತಿ ಪಿಡಿಓ ಸೈಯ್ಯದ್ ಅಲಿ, ಟಿಎಇ, ಬಿ ಎಫ್ಟಿ, ಟಿಐಇಸಿ ಸೇರಿದಂತೆ ಗ್ರಾಮ ಪಂಚಾಯತಿಯ ಸದಸ್ಯರು ಸಿಬ್ಬಂದಿ ವರ್ಗದವರು ಇದ್ದರು.
