ಜಿಲ್ಲಾಧಿಕಾರಿಗೆ ವೀರಶೈವ ಲಿಂಗಾಯತ ಮಠಾಧೀಶರಿಂದ ಮನವಿ


ಯಾದಗಿರಿ: ರಾಜ್ಯ ಸರ್ಕಾರ ಪ್ರಸ್ತುತ ನಡೆಸುತ್ತಿರುವ ಜಾತಿಗಣತಿಯನ್ನು ಪಾರದರ್ಶಕವಾಗಿ ಮತ್ತು ಇನ್ನೊಂದು ಸಮುದಾಯಕ್ಕೆ ಅನ್ಯಾಯವಾಗಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕಲ್ಯಾಣ ಕರ್ನಾಟಕ ವೀರಶೈವ ಲಿಂಗಾಯತ ಮಠಾಧೀಶರ ವೇದಿಕೆಯಿಂದ ಸೋಮವಾರ ಇಲ್ಲಿನ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಗೆ ಮನವಿ ಸಲ್ಲಿಸಲಾಯಿತು.

ಸರ್ಕಾರದ ಜಾತಿಗಣತಿ ಸಮೀಕ್ಷೆ ಯಲ್ಲಿ ಹಿಂದೂ ಹಾಗೂ ವೀರಶೈವ ಲಿಂಗಾಯತ ಜಾತಿಗಳನ್ನು ಕ್ರಿಶ್ಚಿಯನ್ ಎಂದು ಕೋಡ್ ಮೂಲಕ ಗುರುತಿಸಿ ನಡೆಸುತ್ತಿರುವ ಸಮೀಕ್ಷೆ ಕೂಡಲೇ ಸರ್ಕಾರ ಕೈಬಿಡಬೇಕು ಎಂದು ಮಠಾಧೀಶರು ಆಹ್ರಹಿಸಿದರು.ಸಿಎಂ ಸಿದ್ದರಾಮಯ್ಯನವರ ಸರ್ಕಾರ ಈ ಹಿಂದೆ 2013ರಲ್ಲಿ ಹಾಗೂ ಇದೀಗ 2023ರನಂತರ ಧರ್ಮ, ಜಾತಿಗಳ ನಡುವೆ ಒಡಕುಂಟು ಮಾಡುವ ಕೆಲಸಕ್ಕೆ ಕೈ ಹಾಕಿದ್ದು, ಜಾತಿ ಸಮೀಕ್ಷೆಯ ಮೂಲಕ ಹಿಂದೂ ಹಾಗೂ ವೀರಶೈವ ಲಿಂಗಾಯತ ಜಾತಿಗಳ ನಡುವೆ ಕೈಸ್ತರನ್ನು ನುಗ್ಗಿಸುವ ಮೂಲಕ ಮೀಸಲಾತಿ ಲಾಭ ಮಾಡಿಕೊಡಲು ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

ಈ ಹಿಂದೆ 2014-15ರಲ್ಲಿ ಸರ್ಕಾರದಿಂದ ನ್ಯಾ ಕಾಂತರಾಜು ನೇತೃತ್ವದಲ್ಲಿ ಜಾತಿ ಸಮೀಕ್ಷೆ ನಡೆಸಲಾಗಿತ್ತು. ಆದರೆ, ಅನ್ಯನ್ನ ಕಾರಣಗಳಿಂದ ವರದಿ ಸ್ವೀಕೃತಗೊಳ್ಳದೆ ಕೊನೆಗೆ ಸರ್ಕಾರ ಕೈಬಿಡುವುದಾಗಿ ಘೋಷಿಸಿ, ಮತ್ತೊಂದು ಜಾತಿ ಸಮೀಕ್ಷೆ ನಡೆಸುವುದಾಗಿ ಹೇಳಿತ್ತು. ಇದೀಗ ಸರ್ಕಾರದ ಪ್ರಕಟಣೆಯಂತೆ ಸೆ.22ರಿಂದ 15 ದಿನ ದಸರಾ, ನವರಾತ್ರಿ ಸಂದರ್ಭದಲ್ಲಿ ನಡೆಯಲಿದೆ ಎಂದು ಹೇಳಿದ್ದು, ಅದರ ಮುಂದುವರಿದ ಭಾಗವಾಗಿ ಕೆಇಬಿ ಅವರಿಗೆ ಚೀಟಿ ಹಂಚುವ ಕೆಲಸ ನೀಡಿದ್ದು, ಹಿಂದೂ ಹಾಗೂ ವೀರಶೈವ ಲಿಂಗಾಯತ ಉಪ ಜಾತಿಗಳ ಮುಂದೆ ಕ್ರಿಶ್ಚಿಯನ್ ಪದ ಸೇರಿಸಿ, ಮತಾಂ ತರಿಸುವ ಹುನ್ನಾರ ನಡೆದಿದೆ ಎಂದರು.

ಈ ಸಂದರ್ಭದಲ್ಲಿ ಶ್ರೀ ಸೂಗುರೇಶ್ವರ ಶಿವಾಚಾರ್ಯರು ಹಿರೇಮಠ, ಶ್ರೀ ಸಿದ್ದೇಶ್ವರ ಶಿವಾಚಾರ್ಯ ಗುಂಬಳಪುರ ಮಠ ಶಹಾಪುರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ, ಶರಣು ಬ ಗದ್ದುಗೆ,ಬಿಜೆಪಿ ಮುಖಂಡ ಮಹೇಶರಡ್ಡಿ ಮುದ್ನಾಳ, ನಗರಸಭೆ ಮಾಜಿ ಅಧ್ಯಕ್ಷ ವಿಲಾಸ ಪಾಟೀಲ್, ಶಹಾಪುರ ನಗರಸಭೆ ಸದಸ್ಯ ರಾಜುಗೌಡ ಪಾಟೀಲ್ ಮಡ್ನಾಳ, ಮಲ್ಲಿನಾಥ ಚಿಂಚೊಳಿ,ಶಂಭುಲಿಂಗ ಗೊಗಿ, ಶರಣುಗೌಡ ಬಾಡಿಯಾಳ,ರುದ್ರುಗೌಡ ಪಾಟೀಲ್, ಬಸ್ಸುಗೌಡ ನಾಯ್ಕಲ್, ಸಿದ್ದುಗೌಡ ತಂಗಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!