ಯಾದಗಿರಿ ನಗರಸಭೆ ಅಧ್ಯಕ್ಷೆ ಕು.ಲಲಿತಾ ಮೌಲಾಲಿ ಅನಪೂರ ಹಾಗೂ ಪೌರಾಯುಕ್ತ ಉಮೇಶ ಚವ್ಹಾಣ ನೇತೃತ್ವದ ತಂಡದ ಸಾಧನೆ
ಯಾದಗಿರಿ : ನಾವ್ ಪೈಲ್ ಕ್ಲೀಯರ್ ಮಾಡಲು ಪಣತೊಟ್ಟಿದ್ದು, ಒಂದೇ ದಿನದಲ್ಲಿ ದಾಖಲೆಯ 113 ದಾಖಲೆಗಳನ್ನು ನಾಗರಿಕರಿಗೆ ವಿತರಿಸಿ, ನಮ್ಮ ನಗರಸಭೆಯಲ್ಲಿ ನುಡಿದಂತೆ ನಡೆವ ಟೀಂ ವರ್ಕ್ ನಡೆಯುತ್ತಿದ್ದು, ಈ ಎಲ್ಲಾ ದಾಖಲೆಗಳ ವಿತರಣೆಯಲ್ಲಿ ಶ್ರಮಪಟ್ಟಿದ್ದ ಪೌರಾಯುಕ್ತರು, ಇಂಜಿನಿಯರ್ ಗಳು ಸೇರಿದಂತೆ ನಗರಸಭೆ ಸಿಬ್ಬಂದಿ ವರ್ಗದ ಕಾರ್ಯ ಶ್ಲಾಘನೀಯವಾಗಿದೆ ಎಂದು ನಗರಸಭೆ ಅಧ್ಯಕ್ಷೆ ಕು.ಲಲಿತಾ ಮೌಲಾಲಿ ಅನಪೂರ ತಿಳಿಸಿದರು.
ಇಲ್ಲಿನ ನಗರಸಭೆ ಆವರಣದಲ್ಲಿ ಜನಸ್ಪಂದನಾ ಸಭೆಯಲ್ಲಿ ದಾಖಲೆಗನ್ನು ವಿತರಿಸಿ ಮಾತನಾಡಿದ ಅವರು, ಶುಕ್ರವಾರ ಒಂದೇ ದಿನದಲ್ಲಿ ದಿನದಂತ್ಯದ ವೇಳೆಗೆ ಬೆಳಗ್ಗೆಯಿಂದ ಇಡಿ ದಿನ ಎಲ್ಲಾ ಸಿಬ್ಬಂದಿಗಳು, ಸತತವಾಗಿ ಪರಿಶ್ರಮಪಟ್ಟಿದ್ದರಿಂದ 66 ಆಸ್ತಿ ವರ್ಗಾವಣೆ ಮತ್ತು 47 ಆಸ್ತಿ ತೆರಿಗೆ ನವೀಕರಣ ದಾಖಲೆಗನ್ನು ನಾಗರೀಕರಿಗೆ ವಿತರಿಸಿದ್ದೇವೆ ಎಂದು ಹೇಳಿದರು.
ನಾಗರೀಕರು, ಖಾತಾ ನಕಲು, ಟ್ರೇಡ್ ಲೈಸೆನ್ಸ್, ಅಂಗಡಿಗಳ ಪರವಾನಗಿ ನವೀಕರಣ ಸೇರಿದಂತೆ ಯಾವುದೇ ಕೆಲಸಕ್ಕೆ ನಿಮ್ಮ ಸಮಯ ನಾವು ತೆಗೆದುಕೊಳ್ಳುವುದಿಲ್ಲ ಸ್ಥಳದಲ್ಲಿಯೇ ಪರಿಹಾರ ಸಿಗಲಿದೆ ಎಂದು ಹೇಳಿದರು.
ನಗರಸಭೆಯಲ್ಲಿ ಇನ್ನು ಮುಂದೆ ನಾಗರಿಕರ ಯಾವುದೇ ಕೆಲಸ ಕಾರ್ಯಗಳು ವಿಳಂಭವಾಗುವುದಿಲ್ಲ ಎಂದು ಜನಸ್ಪಂದನ ಸಭೆಗೆ ಆಗಮಿಸಿದ ಸಾರ್ವಜನಿಕರಲ್ಲಿ ಹೇಳುತ್ತಿರುವುದು ಕಂಡು ಬಂದಿತು.
ಪೈಲ್ ಕ್ಲೀಯರ್ಗೆ ನಾವ್ ರಡಿ, ನೀವು ರಡಿ ಇದ್ದರೇ ಕೂಡಲೇ ನಗರಸಭೆಗೆ ಬನ್ನಿ ನಿಮ್ಮ ಕೆಲಸ ಮಾಡಲು ನಾವು ನಿತ್ಯ ಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡು ಪ್ರತಿನಿತ್ಯ ಸ್ಥಳದಲ್ಲಿಯೇ ನಿಮ್ಮ ಕೆಲಸ ಮಾಡಲು ಪಣತೊಟ್ಟು ನಿಂತಿದ್ದು, ಸಾರ್ವಜನಿಕರು ತಮ್ಮ ಖಾತಾ ನಕಲು ಸೇರಿದಂತೆ ಯಾವುದೇ ಕೆಲಸಕ್ಕೆ ನಗರಸಭೆಗೆ ಬನ್ನಿ ಎಂದು ನಗರಸಭೆ ಅಧ್ಯಕ್ಷೆ ಕು.ಲಲಿತಾ ಮೌಲಾಲಿ ಅನಪೂರ ಹೇಳಿದರು
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಋಕಾಯ ಬೇಗಂ, ಪೌರಾಯುಕ್ತರಾದ ಉಮೇಶ ಚವ್ಹಾಣ, ನಗರಸಭೆ ಎಇಇ ರಜನಿಕಾಂತ ಶೃಂಗೇರಿ, ಕಂದಾಯ ಇಲಾಖೆಯ ಜಗದೇವಿ, ಮ್ಯಾನೇಜರ್ ಅಶ್ವಿನಿ, ನಗರಸಭೆ ಸದಸ್ಯರು, ಆರ್ಐ, ಬಿಲ್ಕಲೆಕ್ಟರ್, ಸಿಬ್ಬಂದಿಗಳು, ಸಾರ್ವಜನಿಕರು ಇದ್ದರು.
ಯಾದಗಿರಿಯಲ್ಲಿ ಪ್ಲಾಟ್ ಖರೀದಿ ಮಾಡಿ ಹಲವು ವರ್ಷಗಳವರೆಗೆ ಯಾವುದೇ ದಾಖಲೆಗಳನ್ನು ಮಾಡಿಸಿಕೊಳ್ಳದೇ ಇರುವ ನಾಗರೀಕರು, ತಮ್ಮ ದಾಖಲೆಗಳನ್ನು ನಮ್ಮ ನಗರಸಭೆಗೆ ತಂದು ನಿಮ್ಮ ಕಾರ್ಯವನ್ನು ಸುಗಮವಾಗಿಸಿಕೊಳ್ಳಿ ನಮ್ಮಲ್ಲಿ ದಾಖಲೆಗಳ ಸುಗಮ ವ್ಯವಸ್ಥೆ ಮಾಡಲಾಗಿದ್ದು, ನಮ್ಮ ನಗರಸಭೆಯಲ್ಲಿ ಯಾವುದೇ ಕಾರ್ಯ ವಿಳಂಭ ವಾಗದಂತೆ ನೋಡಿಕೊಳ್ಳುತ್ತಿದ್ದೇವೆ. ಆದುದರಿಂದ ನಾಗರೀಕರು, ತಮ್ಮ ಆಸ್ತಿ ವರ್ಗಾವಣೆ, ಆಸ್ತಿ ನವೀಕರಣ ಹೀಗೆ ಯಾವುದೇ ಸಮಸ್ಯೆ ಇದ್ದರೆ ಶೀಘ್ರವೇ ಬಂದು ಪರಿಹರಿಸಿಕೊಳ್ಳಬೇಕು – ಕು.ಲಲಿತಾ ಮೌಲಾಲಿ ಅನಪೂರ ನಗರಸಭೆ ಅಧ್ಯಕ್ಷರು.
