ಕಾರ್ಮಿಕರಿಗೆ ಸುರಕ್ಷಾ ಕಿಟ್ ವಿತರಣೆ | ವಿವಿಧ ಕಾರ್ಮಿಕರು ಭಾಗಿ | ವಿಶ್ವ ಪರಿಸರ ದಿನಾಚರಣೆ | ಅರಣ್ಯ ಇಲಾಖೆಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯಕ್ರಮ

ಗುರುಮಠಕಲ್: ಬಹುದಿನಗಳ ಬೇಡಿಕೆಯಾಗಿದ್ದ ಗಾಜರಕೋಟ್ – ಪುಟಪಾಕ ರಾಜ್ಯ ಹೆದ್ದಾರಿ ದುರಸ್ತಿಗೆ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಹೋರಾಡಿದ ಫಲವಾಗಿ ₹15ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.

ಗುರುಮಠಕಲ್ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ವಿಭಾಗದಲ್ಲಿ ಅರಣ್ಯ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತ ಶಾಸಕರು ತಿಳಿಸಿದರು. ಇನ್ನು ಶಾಲೆಯ ಕಟ್ಟಡ ನಿರ್ಮಾಣದ ಬೇಡಿಕೆಯಿತ್ತು, 6 ಕೋಣೆ ಮಂಜೂರಾಗಿದೆ. ಸದ್ಯದಲ್ಲೇ ಅಡಿಗಲ್ಲು ನೆರವೇರಿಸಲಾಗುವುದು ಎಂದು ಘೋಷಿಸಿದರು.ಇದಕ್ಕೂ ಮುನ್ನ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಮಾತುಗಳನ್ನಾಡಿದ ಅವರು, ಕ್ಷೇತ್ರದಲ್ಲಿ ಪರಿಸರದ ಜಾಗೃತಿ ಮೂಡಿಸುವ ಕಾರ್ಯ ಶಾಲೆಗಳಿಂದಲೇ ಆಗಲಿ ಎಂದು ಕರೆ ನೀಡಿದರು. ಕೇವಲ ಒಂದು ದಿನ ಕಾರ್ಯ ಮಾಡುವುದು ಆಗಬಾರದು ಸಮಾಜದ ಸಹಕಾರದಿಂದ ನಿರಂತರ ಪರಿಸರ ಸಂರಕ್ಷಣೆಯಾಗಬೇಕು. ಮಾಜಿ ಶಾಸಕ ಜಿ.ನಾಗನಗೌಡ ಕಂದಕೂರ ಫೌಂಡೇಶನ್ ವತಿಯಿಂದ ಪ್ರತಿ ಮಗುವಿಗೂ ಒಂದು ಸಸಿ ನೀಡಿ, ಗಿಡ ಬೆಳೆಸುವ ನಿಟ್ಟಿನಲ್ಲಿ ಅಭಿಯಾನ ಆಯೋಜನೆಗೆ ಸಲಹೆ ನೀಡಿದರು.

ಕೇವಲ ಭಾಷಣದಿಂದ ಪರಿಸರ ಉಳಿಸಲು ಸಾಧ್ಯವಿಲ್ಲ, ಹಾಗಾಗಿ ಗಿಡ ಮರ ಬೆಳೆಸುವ ಕುರಿತು ಸಾರ್ವಜನಿಕರು, ಸರ್ಕಾರ, ಜನಪ್ರತಿನಿಧಿಗಳು ಎಲ್ಲರ ಜವಾಬ್ದಾರಿಯಾಗಿದೆ. ಪರಿಸರ ಸಂರಕ್ಷಣೆ ಅರಿವು ಮೂಡಬೇಕು, ನಮ್ಮ ಭಾಗದಲ್ಲಿ ಹೆಚ್ಚಿನ ಜಾಗ್ರತೆ ವಹಿಸಲು ಸಲಹೆ ನೀಡಿದರು. ಶಾಲೆಗಳಲ್ಲಿ ಪಾಠ ಮಾಡುವಾಗ ಪರಿಸರ ಸಂರಕ್ಷಣೆ ಕುರಿತು ವಿಷಯ ಮನಮುಟ್ಟುವಂತೆ ಹೇಳಬೇಕು ಎಂದು ಸಲಹೆ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ವೀರಪ್ಪ ಕನ್ನಳ್ಳಿ, ಅಧ್ಯಕ್ಷತೆವಹಿಸಿ ಅರಣ್ಯ ಇಲಾಖೆ ಪ್ರಾದೇಶಿಕ ಅಧಿಕಾರಿ ಎ.ಬಿ.ಪಾಟೀಲ್ ಮಾತನಾಡಿದರು. ಅಧಿಕಾರಿಗಳಾದ ಚೇತನ್ ಗಸ್ತಿ, ರಮೇಶ್ ಕಲಕಟ್, ಮಹ್ಮದ ಅಸದ್, ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ರಾಹುಲ್ ಆರ್ ಎಫ್ ಒ, ಮುಖ್ಯಾಧಿಕಾರಿ ಶರಣಪ್ಪ ಎಂ, ಸೇರಿದಂತೆ ಪ್ಅರಮುಖರಾದ ಶರಣು ಆವುಂಟಿ, ಪ್ರಕಾಶ ನೀರೆಟಿ, ಬಸ್ಸಣ್ಣ ದೇವರಹಳ್ಳಿ, ದೇವಿ ಗವಿನೋಳ ವೇದಿಕೆಯಲ್ಲಿದ್ದರು. ಪ್ರಾಚಾರ್ಯ ಕೃಷ್ಣ ರೆಡ್ಡಿ ಇತರರು ಇದ್ದರು.

ಕಾರ್ಮಿಕರಿಗೆ ಸುರಕ್ಷಾ ಕಿಟ್ ವಿತರಣೆ: ವಿವಿಧ ಕಾರ್ಮಿಕರಿಗೆ ಸರ್ಕಾರದಿಂದ ಕಿಟ್ ಸರಬರಾಜು ಆಗುತ್ತಿದ್ದು, ಕಾರ್ಮಿಕರು ಕೆಲಸದ ವೇಳೆ ಸುರಕ್ಷತೆಗಾರಬೇಕು. ಹಾಗಾಗಿ ಕಡ್ಡಾಯವಾಗಿ ಕಿಟ್ ಬಳಸಬೇಕೆಂದು ಶಾಸಕ ಶರಣಗೌಡ ಕಂದಕೂರ ಸಲಹೆ ನೀಡಿದರು. ಗುರುಮಠಕಲ್ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಕಾರ್ಮಿಕ ಸೇವಾ ಕೇಂದ್ರ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಸಾಂಕೇತಿಕವಾಗಿ ಸುರಕ್ಷಾ ಕಿಟ್ ಗಳ ವಿತರಣೆ ಮಾಡಿ ಮಾತನಾಡಿದರು.

Spread the love

Leave a Reply

Your email address will not be published. Required fields are marked *

error: Content is protected !!