ಯಲ್ಹೇರಿ ಸರ್ಕಾರಿ ಪ್ರೌಢ ಶಾಲೆ ಮಕ್ಕಳಿಗೆ ಶ್ಯೂ, ಸಾಕ್ಸ್ ವಿತರಣೆ
ಗುರುಮಠಕಲ್: ಸರ್ಕಾರ ಕೊಡುತ್ತಿರುವ ವಿವಿಧ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಉತ್ತಮ ವ್ಯಾಸಾಂಗ ಮಾಡಬೇಕು ಎಂದು ಶಿಕ್ಷಣ ಪ್ರೇಮಿ ಸೋಮನಾಥ ರೆಡ್ಡಿ ಬೋರೆಡ್ಡಿ ಹೇಳಿದರು.
ತಾಲೂಕಿನ ಯಲ್ಹೇರಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಕೊಡುತ್ತಿರುವ ಉಚಿತ ಶೂ ಮತ್ತು ಸಾಕ್ಸ್ ವಿತರಣೆ ಮಾಡಿ ಮಾತನಾಡಿದರು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಸರ್ಕಾರ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಸೇರಿದಂತೆ ಉಚಿತ ಬಸ್ ಪಾಸ್ ನೀಡುತ್ತಿದೆ.
ಇನ್ನು ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಮೀರಿಸುವ ಪ್ರತಿಭಾವಂತ ಶಿಕ್ಷಕರು ಇದ್ದಾರೆ. ನಾವು ಲಾಭ ಪಡೆದು ಶಾಲೆ ಹಾಗೂ ಊರಿಗೆ ಉತ್ತಮ ಹೆಸರು ತರಲು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಬಸಪ್ಪ ಕಾವಲಿ, ಮುಖ್ಯ ಗುರು ಹುಸೇನಪ್ಪ ಸಕ್ರಿ, ಟಿ.ರಾಮುಲು ಸೇರಿದಂತೆ ಶಾಲಾ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
